ಧಾರವಾಡ: ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ 25 ಲಕ್ಷ ರೂ. ಮೌಲ್ಯದ ಅಕ್ರಮ ಸ್ಪಿರಿಟ್ ಟ್ಯಾಂಕರ್ ವಶಕ್ಕೆ ಪಡೆದುಕೊಂಡಿದ್ದಾರೆ. ಸುಮಾರು 25 ಸಾವಿರ ಲೀಟರ್ ಸ್ಪಿರಿಟ್ ತುಂಬಿದ್ದ ಟ್ಯಾಂಕರ್ನ್ನು ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಬಳಿ ವಶಕ್ಕೆ ಪಡೆಯಲಾಗಿದೆ.
ಧಾರವಾಡದಿಂದ ಅಂಕೋಲಾ ಮಾರ್ಗವಾಗಿ ಗೋವಾಕ್ಕೆ ಟ್ಯಾಂಕರ್ ಹೋಗುತ್ತಿತ್ತು. ಅನುಮಾನಗೊಂಡು ಕಲಘಟಗಿ ನಿರೀಕ್ಷಕರು ವಾಹನ ತಪಾಸಣೆ ನಡೆಸಿದಾಗ ಅಕ್ರಮ ಸ್ಪಿರಿಟ್ ಇರುವುದು ಖಚಿತವಾಗಿದೆ. ಸ್ಪಿರಿಟ್ಗೆ ದಾಖಲೆ ಇಲ್ಲದ ಕಾರಣಕ್ಕೆ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ.
ಒಂದೇ ವಾಹನಕ್ಕೆ ಎರಡು ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದಾರೆ. KA28-AB 0142 ಹಾಗೂ MH 50 8888 ನಂಬರ್ ಇರುವ ವಾಹನ ಇದಾಗಿದೆ. ಮಾಲೀಕರ ಬಗ್ಗೆ ವಿಚಾರಣೆ ನಡೆಸಿದಾಗ ಸ್ಪಿರಿಟ್ಗೆ ಯಾವುದೇ ದಾಖಲೆ ಇಲ್ಲ. ಸ್ಪಿರಿಟ್ ಸಾಗಾಣಿಕೆಗೆ ಇಲಾಖೆಯಿಂದ ಪರವಾನಿಗೆ ಬೇಕು. ಆದರೆ, ಯಾವುದೇ ಪರವಾನಗಿ ದಾಖಲೆ ಇರಲಿಲ್ಲ. ಗೋವಾ ಮೂಲದ ರಾಜು ಸಿಂಗ್ ಎಂಬ ಮಾಲೀಕರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಅಧಿಕೃತವಾಗಿ ಮಾಹಿತಿ ಪಡೆಯಲು ಒಂದು ತಂಡ ರಚನೆ ಮಾಡಿ ಗೋವಾಗೆ ಕಳುಹಿಸಲಾಗುತ್ತಿದೆ. ಮುಂದಿನ ವಿಚಾರಣೆ ಬಗ್ಗೆ ಎರಡು ದಿನದಲ್ಲಿ ತಿಳಿಸುವುದಾಗಿ ಅಬಕಾರಿ ಡಿಸಿ ಕೆ. ಅರುಣಕುಮಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸರಣಿ ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನ ಬಂಧನ: 25 ಲಕ್ಷ ಮೌಲ್ಯದ 531 ಗ್ರಾಂ ಚಿನ್ನಾಭರಣ ಜಪ್ತಿ