ETV Bharat / state

ಯತ್ನಾಳ್ ವಿಷಯ ಸೇರಿ ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ: ಬಿ.ಎಸ್.ಯಡಿಯೂರಪ್ಪ - FORMER CM BS YEDIYURAPPA

ಪಕ್ಷದೊಳಗಿನ ಭಿನ್ನಮತ ಹಾಗೂ ಗುಂಪುಗಾರಿಕೆ ಹಾಗೂ ಬಸನಗೌಡ ಪಾಟೀಲ್​ ಯತ್ನಾಳ್​ ವಿಷಯದ ಕುರಿತು ಹೈಕಮಾಂಡ್​ ಮಧ್ಯಪ್ರವೇಶಿಸಿ ಎಲ್ಲವನ್ನೂ ಸುಸೂತ್ರವಾಗಿ ಬಗೆಹರಿಸುವ ಭರವಸೆಯಿದೆ ಎಂದು ಬಿ.ಎಸ್​.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Former CM BS Yediyurappa
ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ (ETV Bharat)
author img

By ETV Bharat Karnataka Team

Published : Dec 5, 2024, 12:30 PM IST

Updated : Dec 5, 2024, 1:14 PM IST

ಶಿವಮೊಗ್ಗ: "ಬಸವನಗೌಡ ಪಾಟೀಲ್ ಯತ್ನಾಳ್ ವಿಷಯ ಸೇರಿದಂತೆ ಎಲ್ಲವೂ ಸುಸೂತ್ರವಾಗಿ ಬಗೆಹರಿಯುತ್ತದೆ" ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ತಮ್ಮ‌ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಎಲ್ಲರೂ ಒಟ್ಟಾಗಿ ಹೋಗುವುದರಿಂದ ಸಾಧನೆ ಮಾಡಲು ಸಾಧ್ಯವಿದೆ. ಪಕ್ಷದಲ್ಲಿ ನಾವುಗಳು ಪರಸ್ಪರ ‌ಕಚ್ಚಾಡುವುದರಿಂದ ಯಾರಿಗೂ ಲಾಭ ಇಲ್ಲ. ಎಲ್ಲರೂ ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಈ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ಈ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡಬೇಕು" ಎಂದರು.

"ಕಾಂಗ್ರೆಸ್ ಸಮಾವೇಶ, ಆ ಪಕ್ಷದ ಸಮಾವೇಶ, ವಿಚಾರ ಅವರು ಮಾಡಿಕೊಳ್ಳಲಿ" ಎಂದು ಹೇಳಿದರು.

ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ (ETV Bharat)

ಸಿಎಂ ವಿರುದ್ಧ ಇಡಿ ತನಿಖೆ ವಿಚಾರ: "ಇಡಿಗೆ ಪೂರ್ತಿ ಅಧಿಕಾರ ಇದೆ. ಇಡಿ ಏನು ತೀರ್ಮಾನ ‌ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮವಾಗಿರುತ್ತದೆ. ತಮ್ಮ ವಿರುದ್ಧ ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ಸಿಎಂ ಹೀಗೆ ಹೇಳುತ್ತಿದ್ದಾರೆ. ಅದಕ್ಕೆ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಇಡಿಯವರಿಗೆ ಗೌರವ ಕೊಡುವುದು ಕಲಿಯಬೇಕು. ಇದು ಮುಖ್ಯಮಂತ್ರಿ ಅವರಿಗೆ ಶೋಭೆ ತರಲ್ಲ. ಕಾಂಗ್ರೆಸ್ ಸರ್ಕಾರ ಬಹಳ ಡೆಸ್ಪರೇಟ್​ ಆಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆ, ಇದು ಒಳ್ಳೆಯದಲ್ಲ" ಎಂದರು.

ರಾಜ್ಯ ಬಿಜೆಪಿ ಗೊಂದಲಗಳ ಸಮಸ್ಯೆ ಪರಿಹರಿಸುವಂತೆ ಹೈಕಮಾಂಡ್​ಗೆ ಮನವಿ: "ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳ ಕುರಿತು ಆದಷ್ಟು ಬೇಗ ಹೈಕಮಾಂಡ್ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಸಂಸದರೆಲ್ಲ ಸೇರಿ ಮನವಿ ಮಾಡಿದ್ದೇವೆ" ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

"ಸದ್ಯ ಎಲ್ಲಾ ವಾತಾವರಣ ತಿಳಿಯಾಗುತ್ತಿದೆ. ಮುಂದೆ ಒಳ್ಳೆಯದಾಗುತ್ತದೆ ಅನಿಸುತ್ತದೆ. ನಿನ್ನೆ ದೆಹಲಿಯಲ್ಲಿ ಸಂಸದರ ಸಭೆ ನಡೆಯಿತು. ರಾಜ್ಯ ಬಿಜೆಪಿ ಬೆಳವಣಿಗೆ ಕುರಿತು ಚರ್ಚೆ ಆಗಿದೆ. ಶೀಘ್ರದಲ್ಲೇ ಎಲ್ಲವೂ ಇತ್ಯರ್ಥ ಆಗಲಿದೆ ಎಂಬ ವಿಶ್ವಾಸವಿದೆ" ಎಂದು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ (ETV Bharat)

ಕಾರ್ಯಕರ್ತರು ಸೇರಿ ಲಕ್ಷಾಂತರ ಜನರು ಸದಸ್ಯತ್ವ ಅಭಿಯಾನ ಮಾಡಿದ್ದಾರೆ. ಮೇಲ್ಮಟ್ಟದಲ್ಲಿ ಈ ರೀತಿಯ ಗೊಂದಲಗಳ ಹೇಳಿಕೆಯಿಂದ ಕಾರ್ಯಕರ್ತರಿಗೆ ನೋವಾಗುತ್ತದೆ. ಬಿಜೆಪಿಯಿಂದ ವಕ್ಫ್ ವಿಚಾರವಾಗಿ ಹೋರಾಟ ನಡೆಯುತ್ತಿದೆ" ಎಂದರು.

"ಅಧಿವೇಶನದ ಸಮಯವನ್ನು ವಿಪಕ್ಷ ನಾಯಕರು ವ್ಯರ್ಥ ಮಾಡಿದ್ದಾರೆ. ಅಧಿವೇಶನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದರೆ ಯಾವುದೇ ವಿಷಯಗಳು ಚರ್ಚೆ ಆಗಲಿಲ್ಲ. ಚರ್ಚೆಯಲ್ಲಿ ಭಾಗವಹಿಸಲು ಸ್ಪೀಕರ್ ಸಹ ಮನವಿ ಮಾಡಿದ್ದಾರೆ. ಅಧಿವೇಶನದ ಸಮಯ ವ್ಯರ್ಥವಾಗಿದೆ. ಯಾವುದೇ ಬಿಲ್​ಗಳು ಪಾಸ್ ಆಗಲಿಲ್ಲ. ಐಲ್ಯಾಂಡ್ ಐಲ್ಯಾಂಡೆಯೇ ನಮ್ಮದು ಅಂತ ವಕ್ಫ್ ನವರು ಹೇಳುತ್ತಿದ್ದಾರೆ. ಮುಡಾ ಹಗರಣವನ್ನು ಮರೆಮಾಚಲು ರಾಜ್ಯ ಸರ್ಕಾರ ಹಾಸನದಲ್ಲಿ ಸಮಾವೇಶ ನಡೆಸುತ್ತಿದೆ. ಇಡಿ ಮಧ್ಯಪ್ರವೇಶವನ್ನ ಸಿಎಂ ಹಾಸ್ಯಾಸ್ಪದ ಮಾಡುತ್ತಿದ್ದಾರೆ. ಇದು ಸಿಎಂ ಅವರಿಗೆ ಶೋಭೆ ತರುವುದಿಲ್ಲ" ಎಂದು ಹೇಳಿದರು.

ಇದನ್ನೂ ಓದಿ: "ಹೋಮದ ಪೂರ್ಣಾಹುತಿ ಬಳಿಕ ಪ್ರಸಾದ ಕೊಡುವ ಪದ್ಧತಿ, ಪ್ರಸಾದ ಕೊಡುವ ಸಮಯ ಬಂದಿದೆ": ಡಿ.ವಿ. ಸದಾನಂದ ಗೌಡ

Last Updated : Dec 5, 2024, 1:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.