ETV Bharat / state

ತಾಯಿಯ ಆಶೀರ್ವಾದ ಪಡೆದೇ ಚುನಾವಣೆಗೆ ಸ್ಪರ್ಧೆ: 'ಈಟಿವಿ ಭಾರತ್'​ ಸಂದರ್ಶನದಲ್ಲಿ ಯದುವೀರ್ - Yaduveer Wodeyar - YADUVEER WODEYAR

ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿದ್ದು ಹೇಗೆ ಎಂಬುದೂ ಸೇರಿದಂತೆ ಹಲವು ವಿಚಾರಗಳನ್ನು 'ಈಟಿವಿ ಭಾರತ್'​ ಸಂದರ್ಶನದಲ್ಲಿ ಹಂಚಿಕೊಂಡರು.

etv-bharat-interview-with-mysuru-constituency-bjp-candidate-yaduvir-wodeyar
ತಾಯಿಯ ಆಶೀರ್ವಾದದಿಂದಲ್ಲೇ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ: ಯದುವೀರ್ ಒಡೆಯರ್ ಜೊತೆಗೆ ಈಟಿವಿ ಭಾರತ್​ ಸಂದರ್ಶನ
author img

By ETV Bharat Karnataka Team

Published : Apr 2, 2024, 6:24 PM IST

Updated : Apr 2, 2024, 7:50 PM IST

'ಈಟಿವಿ ಭಾರತ್'​ ಸಂದರ್ಶನದಲ್ಲಿ ಯದುವೀರ್

ಮೈಸೂರು: ತಾಯಿ ಪ್ರಮೋದಾದೇವಿ ಒಡೆಯರ್ ಆಶೀರ್ವಾದದಿಂದಲೇ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ. ಯದುವೀರ್ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನಿಮಗೆ ರಾಜಕೀಯದ ಮೇಲೆ ಆಸಕ್ತಿ ಬಂದಿದ್ದು ಹೇಗೆ?: ರಾಜಕೀಯಕ್ಕೆ ಬರಲು ಮೊದಲು ಆಸಕ್ತಿ ಇರಲಿಲ್ಲ. ಆದರೆ ಕಳೆದೊಂದು ವರ್ಷದಿಂದ ಆಸಕ್ತಿ ಹೆಚ್ಚಾಯಿತು. ನೀತಿ, ನಿಯಮದ ಮೂಲಕ ಕೆಲಸ ಮಾಡಬೇಕು ಎಂದರೆ ರಾಜಕೀಯದಿಂದ ಮಾತ್ರ ಸಾಧ್ಯವಿದೆ.

ಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆ ಹೇಗಿದೆ?: ಕ್ಷೇತ್ರದ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೊಡಗು, ಪಿರಿಯಾಪಟ್ಟಣ, ಹುಣಸೂರು ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೈಸೂರು ನಗರದ ಭಾಗದಲ್ಲಿ ನಾವು ಇದ್ದೇ ಇದ್ದೀವಿ. ಎಲ್ಲೆಡೆ ಉತ್ಸಾಹದಿಂದ ಜನ ಭಾಗವಹಿಸುತ್ತಿದ್ದಾರೆ.

ಇದೇ ವೇಳೆ ರಾಜಪರಂಪರೆಯ ಬಗ್ಗೆ ಪ್ರತಿಕ್ರಿಯಿಸಿ, ಕಾನೂನು ಮತ್ತು ಸಂವಿಧಾನದ ಮುಂದೆ ಏನೂ ದೊಡ್ಡದಲ್ಲ. ಹಿಂದೆ ನಮ್ಮ ತಾತ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಂಬಲ ಕೊಟ್ಟಿದ್ದಾರೆ. ಇವತ್ತು ಆ ವ್ಯವಸ್ಥೆಯಲ್ಲೇ ನಾವು ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ.

ನಿಮ್ಮ ಆದ್ಯತೆ ಏನು?: ಯುವಕರಿಗೆ ಹೆಚ್ಚು ಉದ್ಯೋಗ ಕೊಡುವುದು ಬಹಳ ಮುಖ್ಯ. ಮೈಸೂರಿನಲ್ಲಿ ಹಲವು ವಿದ್ಯಾಸಂಸ್ಥೆಗಳಿವೆ. ಆದರೆ ಇಲ್ಲಿ ಐಟಿ, ಕೈಗಾರಿಕೆಗಳು ಇಲ್ಲ. ಅದ್ದರಿಂದ ಯುವಕರು ಬೆಂಗಳೂರು ಹಾಗೂ ಇನ್ನಿತರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಉದ್ಯೋಗ ಸೃಷ್ಟಿಸಲು ಜಿಲ್ಲೆಗೆ ಕೈಗಾರಿಕೆ ತರುವುದು, ಐಟಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಕೆಲಸ ಮಾಡಬೇಕಿದೆ. ಅದರ ಜತೆಗೆ ಸ್ಟ್ಯಾಂಡ್ ಅಪ್ ಇಂಡಿಯಾದ ಮೂಲಕ ಉದ್ಯೋಗ ಸೃಷ್ಟಿಕರ್ತರನ್ನು ಸೃಷ್ಟಿಸಬೇಕು. ಬರೀ ಉದ್ಯೋಗ ಆಕಾಂಕ್ಷಿಗಳಾಗಬಾರದು. ಸ್ವಾವಲಂಬಿಯಾಗಿ ಬದುಕಬೇಕೆಂದರೆ ಉದ್ಯೋಗ ಸೃಷ್ಟಿಕರ್ತರಾಗಬೇಕು. ಇದು ಪ್ರಧಾನ ಮಂತ್ರಿಯವರ ಆಶಯ. ಅದಕ್ಕೆ ನಾವು ಸೇತುವೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತೇವೆ. ಎರಡೂ ಜಿಲ್ಲೆಗಳ ಪ್ರಕೃತಿಯನ್ನು ಕಾಳಜಿಯಲ್ಲಿಟ್ಟುಕೊಂಡು ಜನರ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಏನು ಮಾಡುವಿರಿ?: ಮೈಸೂರು ಸಾಂಸ್ಕೃತಿಕ ನಗರಿ. ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ. ಈಗಾಗಲೇ ಬಹಳಷ್ಟು ಸ್ಕೀಮ್​ಗಳಿವೆ. ಅವುಗಳನ್ನು ಸಮರ್ಪಕವಾಗಿ ಜಾರಿ ಮಾಡುತ್ತೇವೆ.

ETV Bharat interview with mysuru constituency  bjp  candidate Yaduvir Wodeyar
ಯದುವೀರ್ ಒಡೆಯರ್

ರಾಜಕೀಯ ಪ್ರವೇಶಕ್ಕೆ ತಾಯಿಯ ಬೆಂಬಲವಿದೆಯೇ?: ಅವರ ಸಹಕಾರ ಇಲ್ಲದೇ, ಅವರ ಆಶೀರ್ವಾದ ಇಲ್ಲದೇ ನಾನು ಈ ಅಖಾಡಕ್ಕಿಳಿಯುವುದೇ ಇಲ್ಲ. ನನ್ನ ಆಶೀರ್ವಾದ ಇದೆ, ಆದರೆ ತೀರ್ಮಾನ ನೀನೇ ಮಾಡಿಕೊಳ್ಳಬೇಕು ಎಂದರು.

ನಿಮ್ಮ ಆಸ್ತಿ ವಿವರದ ಬಗ್ಗೆ ಏನನ್ನುವಿರಿ?: ಎಲ್ಲರಿಗೂ ಗೊತ್ತಿರುವಂತೆ ನಮ್ಮ ತಾಯಿ ಅವರೇ ಆಸ್ತಿ ನೋಡಿಕೊಳ್ಳುವುದು. ಭಾರತೀಯ ಪರಂಪರೆಯಲ್ಲಿ ತಂದೆ-ತಾಯಿ ಜತೆ ಇರುವುದು ಮಕ್ಕಳ ಕರ್ತವ್ಯ. ನಾನು ತಾಯಿಯೊಂದಿಗಿದ್ದೇನೆ. ನನಗೆ ಆಸ್ತಿ ಮುಖ್ಯವಲ್ಲ, ಒಳ್ಳೆಯ ಕುಟುಂಬ ಇದೆ, ಒಳ್ಳೆಯ ತಾಯಿ ಇದ್ದಾರೆ. ಅದು ನನಗೆ ಬಹಳ ಮುಖ್ಯ. ಒಳ್ಳೆಯ ಮೈಸೂರು-ಕೂಡಗು ವಾತಾವರಣ ಇದೆ. ನಮ್ಮ ಸುತ್ತಮುತ್ತ ಒಳ್ಳೆಯ ಜನರಿದ್ದಾರೆ, ಒಳ್ಳೆಯ ಸಮಾಜವಿದೆ. ಇದೇ ನನ್ನ ಆಸ್ತಿ.

ನಾಳೆ ನಾಮಪತ್ರ ಸಲ್ಲಿಕೆ: ನಾಳೆ ಬೆಳಗ್ಗೆ 10.30ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಾಗುತ್ತದೆ. ಮೆರವಣಿಗೆಯಲ್ಲಿ ಬಿಜೆಪಿ-ಜೆಡಿಎಸ್​ ರಾಜ್ಯಾಧ್ಯಕ್ಷರು ಹಾಗೂ ನಮ್ಮ ಸ್ಥಳೀಯ ಮುಖಂಡರು ಭಾಗವಹಿಸುತ್ತಾರೆ. ನಮ್ಮ ಮೈಸೂರು-ಕೊಡಗು ಕ್ಷೇತ್ರದ ಜನರು ಬಂದು ಆಶೀರ್ವಾದ ಮಾಡಬೇಕೆಂದು ಇದೇ ವೇಳೆ ಮನವಿ ಮಾಡಿದರು.

ಸೋಮವಾರ ತಾಯಿಯ ಜತೆ ಬಂದು ನಾಮಪತ್ರ ಸಲ್ಲಿಸಿದ್ದೇಕೆ?: ಜ್ಯೋತಿಷಿಗಳು ನಾಮಪತ್ರ ಸಲ್ಲಿಸಲು ಎರಡು ಡೇಟ್ ಕೊಟ್ಟಿದ್ದರು. ಆ ಎರಡು ಡೇಟ್‌ನಲ್ಲೂ ನಮಗೆ ನಾಮಪತ್ರ ಸಲ್ಲಿಕೆಗೆ ಮೂರು ಅವಕಾಶಗಳಿದ್ದವು. ಅದಕ್ಕಾಗಿ ಎರಡು ಡೇಟ್​ನಲ್ಲೂ ನಾಮಪತ್ರ ಸಲ್ಲಿಸಬೇಕು ಎಂದುಕೊಂಡಿದ್ದೇನೆ.

ಇದನ್ನೂ ಓದಿ: ಎಸ್.ಎಂ.ಕೃಷ್ಣ ಭೇಟಿಯಾಗಿ ಆಶೀರ್ವಾದ ಪಡೆದ ಕೈ ಅಭ್ಯರ್ಥಿ ವೆಂಕಟರಮಣೇಗೌಡ - Venkataramane Gowda

Last Updated : Apr 2, 2024, 7:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.