ETV Bharat / state

ಶಿವಮೊಗ್ಗ: ಮನೆ ಕಾಂಪೌಂಡ್ ಒಳಗೆ ಗಾಂಜಾ ಎಸೆದ ಪ್ರಕರಣ; KPTCL ಇಂಜಿನಿಯರ್ ಬಂಧನ - Engineer arrested

author img

By ETV Bharat Karnataka Team

Published : Jul 30, 2024, 12:53 PM IST

Updated : Jul 30, 2024, 3:13 PM IST

ತನ್ನ ಮದುವೆ ಮುರಿದು ಬೀಳಲು ಕಾರಣನಾಗಿದ್ದಾರೆ ಎಂದು ತಿಳಿದು KPTCL ಇಂಜಿನಿಯರ್​ವೊಬ್ಬರು ಇನ್ನೋರ್ವ ಸಿವಿಲ್​ ಇಂಜಿನಿಯರ್​ ಮನೆ ಕಾಂಪೌಂಡ್​ ಒಳಗೆ ಗಾಂಜಾ ಪ್ಯಾಕೆಟ್​ ಎಸೆದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ.

KPTCL ಇಂಜಿನಿಯರ್ ಬಂಧನ
KPTCL ಇಂಜಿನಿಯರ್ ಬಂಧನ (ETV Bharat)

ಶಿವಮೊಗ್ಗ: ಇಂಜಿನಿಯರೊಬ್ಬರ ಮನೆಯ ಕಾಂಪೌಂಡ್​ ಒಳಗೆ ಗಾಂಜಾ ಎಸೆದ ಪ್ರಕರಣದಲ್ಲಿ KPTCL ಇಂಜಿನಿಯರ್​ ಪೊಲೀಸರ ಅತಿಥಿಯಾಗಿರುವ ಘಟನೆ ಸಾಗರದಲ್ಲಿ ನಡೆದಿದೆ. ಶಾಂತಕುಮಾರ ಸ್ವಾಮಿ ಬಂಧಿತ ಇಂಜಿನಿಯರ್​.

ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹುಲ್ಲತ್ತಿ ಗ್ರಾಮದ ನಿವಾಸಿ ಸಿವಿಲ್​ ಇಂಜಿನಿಯರ್​ ಜಿತೇಂದ್ರ ಈ ಕುರಿತು ದೂರು ನೀಡಿದ್ದರು. ತಮ್ಮ ಮನೆಯ ಕಾಂಪೌಂಡ್​ ಒಳಗೆ ಯಾರೋ ಒಬ್ಬರು ಜುಲೈ 13 ರಂದು ರಾತ್ರಿ ಗಾಂಜಾ ಪ್ಯಾಕೆಟ್​ಗಳನ್ನು ಹಾಕಿದ್ದರು. ಸಿಸಿಟಿವಿ ಪರಿಶೀಲಿಸಿ ನೋಡಿದಾಗ ಕಪ್ಪು ಬಣ್ಣದ ಪ್ಲಾಸ್ಟಿಕ್​ ಕವರ್​ವೊಂದನ್ನು ಎಸೆದಿರುವುದು ಕಂಡುಬಂದಿತ್ತು ಎಂದು ದೂರಿನಲ್ಲಿ ಹೇಳಿದ್ದರು. ಅಲ್ಲದೆ, ಸಂಬಂಧಿಕರೊಂದಿಗಿನ ಮದುವೆ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಶಾಂತಕುಮಾರ್ ಸ್ವಾಮಿ ಗಾಂಜಾ ಕೇಸ್​ ಹಾಕುವ ಉದ್ದೇಶದಿಂದ ವ್ಯಕ್ತಿಯೊಬ್ಬನನ್ನು ಕಳುಹಿಸಿ ಈ ಕೃತ್ಯ ಎಸಗಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಈ ಕುರಿತಂತೆ ರಚಿಸಲಾಗಿದ್ದ ವಿಶೇಷ ತಂಡ ಪ್ರಕರಣದ ಜಾಡನ್ನು ಪತ್ತೆ ಹಚ್ಚಿ ಪ್ರಮುಖ ಆರೋಪಿ ಶಾಂತಕುಮಾರ್​ ಹಾಗೂ ಇನ್ನೋರ್ವ ಆರೋಪಿ ಸನಾವುಲ್ಲಾ ಅವರನ್ನು ಬಂಧಿಸಿರುವುದಾಗಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಗರ ಗ್ರಾಮಾಂತರ ಪೊಲೀಸರು KPTCL ಇಂಜಿನಿಯರ್ ಶಾಂತ ಕುಮಾರ ಸ್ವಾಮಿ, ಸನಾವುಲ್ಲಾ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಫಿಕ್ ಸಬ್ಸ್ಟೆನ್ಸಸ್ ಆಕ್ಟ್​​ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಕಾರ್​, ಒಂದು ಮೊಬೈಲ್​ ಫೋನ್​, ಒಂದು ಪೆನ್​ಡ್ರೈವ್​ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳು ಸಿಬ್ಬಂದಿಯವರಿಗೆ ಪೊಲೀಸ್​ ಅಧೀಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಜಮೀನು ಪೋಡಿಗೆ ₹1.5 ಲಕ್ಷ ಲಂಚ: ಭೂಮಾಪನಾ ಇಲಾಖೆ ಡಿಡಿಎಲ್‌ಆರ್, ಸರ್ವೇಯರ್ ಸೆರೆ - Lokayukta Raid

Last Updated : Jul 30, 2024, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.