ETV Bharat / state

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಈಡೇರಿಕೆಗೆ ಕಸರತ್ತು; ಮುಂಗಾರು ಆರಂಭದವರೆಗೆ ಇಲಾಖೆಯ ವಿದ್ಯುತ್ ನಿರ್ವಹಣೆ ಹೇಗಿದೆ? - Electricity Shortage - ELECTRICITY SHORTAGE

ರಾಜ್ಯದಲ್ಲಿ ವಿದ್ಯುತ್​ ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್ 11ರ ಅಸ್ತ್ರ ಬಳಕೆ ಮಾಡಿದೆ. ಅದರ ಪ್ರಕಾರ, ರಾಜ್ಯದ ಖಾಸಗಿ ವಿದ್ಯುತ್ ಉತ್ಪಾದಕರು ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುವಂತಿಲ್ಲ.

electricity shortage in Karnataka
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : May 9, 2024, 7:33 PM IST

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ತಾರಕಕ್ಕೇರಿದ್ದು, ಪೂರೈಕೆಗೆ ರಾಜ್ಯ ಸರ್ಕಾರ ನಾನಾ ಕಸರತ್ತು ಮಾಡುತ್ತಿದೆ. ಸದ್ಯ ಇಂಧನ ಇಲಾಖೆ ಸೆಕ್ಷನ್ 11ರಡಿ ವಿದ್ಯುತ್ ಖರೀದಿ ಹಾಗೂ ನವೀಕರಿಸಬಹುದಾದ ವಿದ್ಯುತ್ ಮೂಲಕ ರಾಜ್ಯದಲ್ಲಿನ ಕೊರತೆ ನೀಗಿಸುವ ಕೆಲಸ ಮಾಡುತ್ತಿದೆ.

ರಾಜ್ಯದಲ್ಲಿನ ಭೀಕರ ಬರಗಾಲ ಹಾಗೂ ಏರುತ್ತಿರುವ ತಾಪಮಾನದಿಂದಾಗಿ ವಿದ್ಯುತ್ ಬಳಕೆಯೂ ಗಗನಕ್ಕೇರಿದೆ. ಹೀಗಾಗಿ, ವಿದ್ಯುತ್ ಬೇಡಿಕೆ ಉಲ್ಬಣಗೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ಕಣ್ಣಾಮುಚ್ಚಾಲೆಯೂ ನಡೆಯುತ್ತಿದೆ. ಇತ್ತ ಮಳೆ ಕೊರತೆಯೂ ಇಂಧನ ಇಲಾಖೆಯ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಸದ್ಯ ರಾಜ್ಯದ ಕೆಲವೆಡೆ ಮಳೆ ಬರುತ್ತಿದ್ದು, ವಿದ್ಯುತ್ ಬೇಡಿಕೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ.

ಇಂಧನ ಇಲಾಖೆಯು ರಾಜ್ಯದಲ್ಲಿನ ವಿದ್ಯುತ್ ಕೊರತೆ ನೀಗಿಸಲು ವಿದ್ಯುತ್ ಖರೀದಿ, ನವೀಕರಿಸಬಹುದಾದ ವಿದ್ಯುತ್ ಮೂಲ, ಸೆಕ್ಷನ್ 11 ಕಾಯ್ದೆ ವಿಧಿಸುವ ಮೂಲಕ ರಾಜ್ಯದ ಜನರ ವಿದ್ಯುತ್ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತಿದೆ. ಮೇ ತಿಂಗಳ ಅಂತ್ಯದವರೆಗೆ ಇಂಧನ ಇಲಾಖೆ ವಿದ್ಯುತ್ ನಿರ್ವಹಣೆಯ ಪ್ಲಾನ್ ಮಾಡಿದ್ದು, ಜೂನ್​ನಲ್ಲಿ ಮುಂಗಾರು ಆರಂಭದ ನಿರೀಕ್ಷೆಯಲ್ಲಿದೆ. ಬಳಿಕ ಇಂಧನ ಇಲಾಖೆ ಮೇಲಿನ ಬೇಡಿಕೆ-ಪೂರೈಕೆ ನಿರ್ವಹಣೆಯ ಒತ್ತಡ ಕಡಿಮೆಯಾಗುವ ವಿಶ್ವಾಸದಲ್ಲಿದ್ದಾರೆ ಇಂಧನ ಇಲಾಖೆ ಅಧಿಕಾರಿಗಳು.

ಸೆಕ್ಷನ್ 11ರಡಿ ವಿದ್ಯುತ್ ಖರೀದಿ: ತೀವ್ರ ಕೊರತೆ ನೀಗಿಸಲು ರಾಜ್ಯ ಸರ್ಕಾರ ವಿದ್ಯುಚ್ಛಕ್ತಿ ಕಾಯ್ದೆ ಸೆಕ್ಷನ್ 11ರ ಅಸ್ತ್ರ ಬಳಸಿದೆ. ಅದರಂತೆ ರಾಜ್ಯದ ಖಾಸಗಿ ವಿದ್ಯುತ್ ಉತ್ಪಾದಕರು ಬೇರೆ ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅದರಂತೆ, ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದಕರು ವಿದ್ಯುತ್​ಅನ್ನು ರಾಜ್ಯದ ವಿದ್ಯುತ್ ಸರಬರಾಜುದಾರರಿಗೇ ಮಾರಾಟ ಮಾಡಬೇಕು.

ಖಾಸಗಿ ಉತ್ಪಾದಕರು ನೀಡುವ ಪ್ರತಿ ಯೂನಿಟ್‌ಗೆ ಸಾಗಣೆ ಮತ್ತು ಇತರ ವೆಚ್ಚ ಹೊರತುಪಡಿಸಿ ಪ್ರತಿ ಯೂನಿಟ್‌ಗೆ 4.86 ರೂ. ದರ ನಿಗದಿ ಮಾಡಲು ಆದೇಶದಲ್ಲಿ ಸರ್ಕಾರ ಪ್ರಸ್ತಾಪಿಸಿದೆ. ಕೇಂದ್ರೀಯ ವಿದ್ಯುತ್ ವಿನಿಮಯದ ದರ, ಕಳೆದ ಆರು ಅವಧಿಯಲ್ಲಿನ ಅಲ್ಪಾವಧಿ ಖರೀದಿ ಒಪ್ಪಂದದ ದರಗಳನ್ನು ಪರಿಗಣಿಸಿ ಸರ್ಕಾರ ಈ ದರ ನಿಗದಿ ಮಾಡಿದೆ. ಅದರಂತೆ ಪ್ರಸ್ತುತ ರಾಜ್ಯ 200-300 ಮೆಗಾ ವ್ಯಾಟ್​​ ವಿದ್ಯುತ್ ಪಡೆಯುತ್ತಿದೆ ಎಂದು ಇಂಧನ ಇಲಾಖೆ ತಿಳಿಸಿದೆ.

ಸದ್ಯ ಕೇಂದ್ರ ಉತ್ಪಾದನಾ ಸ್ಥಾವರದಿಂದ ಪ್ರತಿನಿತ್ಯ 100 ಎಂ.ಯು. ವರೆಗೆ ವಿದ್ಯುತ್ ಪಡೆಯುತ್ತಿದೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ. ಪ್ರಸಕ್ತ ಕೆಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಗಳಿಂದ ಪ್ರತಿನಿತ್ಯ ಸರಾಸರಿ 73 ಎಂ.ಯು. ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಇಲಾಖೆ ಹೇಳಿದೆ.

ಈ ತಿಂಗಳಿಗೆ ವಿದ್ಯುತ್ ಖರೀದಿ : ಈ ತಿಂಗಳಿಗೆ ಇಂಧನ ಇಲಾಖೆ ಯತ್ತರ ಪ್ರದೇಶದ ಜೊತೆಗೆ ವಿದ್ಯುತ್ ವಿನಿಮಯ ಒಪ್ಪಂದದಡಿ ವಿದ್ಯುತ್ ಪಡೆಯುತ್ತಿದೆ. ನಿತ್ಯ 4.15 ಎಂ.ಯು. ವರೆಗೆ ವಿದ್ಯುತ್ ವಿನಿಮಯದಡಿ ವಿದ್ಯುತ್ ಪಡೆಯಲು ಉದ್ದೇಶಿಸಿದೆ. ಮೇ ತಿಂಗಳಿಗೆ ಇಂಧನ ಇಲಾಖೆ 500 MW ವಿದ್ಯುತ್ ಖರೀದಿಸಿದೆ ಎಂದು ಮಾಹಿತಿ ನೀಡಿದೆ.

ಮೇ ತಿಂಗಳಲ್ಲಿ ಈವರೆಗೆ ಯುಪಿಸಿಎಲ್​​ನಿಂದ ಪಿಪಿಎ ಅಡಿ ಎಸ್ಕಾಂಗಳು 166.25 ಎಂ.ಯು. ವಿದ್ಯುತ್ ಖರೀದಿ ಮಾಡಿವೆ. ಉತ್ತರ ಪ್ರದೇಶದಿಂದ ವಿನಿಮಯ ಒಪ್ಪಂದದಂತೆ ಮೇ ತಿಂಗಳಲ್ಲಿ ಈವರೆಗೆ 59.96 MU ವಿದ್ಯುತ್ ಪಡೆದುಕೊಂಡಿದೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.

ನವೀಕರಿಸಬಹುದಾದ ವಿದ್ಯುತ್ ಲಭ್ಯತೆ ಏನಿದೆ: ರಾಜ್ಯ ಪ್ರಸ್ತುತ ಬೇಡಿಕೆ ಈಡೇರಿಸಲು ನವೀಕರಿಸಬಹುದಾದ ವಿದ್ಯುತ್ ಮೂಲಗಳನ್ನು ಬಹುವಾಗಿ ನೆಚ್ಚಿಕೊಂಡಿದೆ. ಮೇ ತಿಂಗಳಲ್ಲಿ ನಿತ್ಯ ವಿವಿಧ ನವೀಕರಿಸಬಹುದಾದ ಮೂಲಗಳಿಂದ 62 MU ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಸೋಲಾರ್​​ನಿಂದ ನಿತ್ಯ 46.60 MU ವಿದ್ಯುತ್ ಪಡೆಯಲಾಗುತ್ತಿದೆ. ಕಬ್ಬಿನ ಕಾರ್ಖಾನೆಯ ಕೊ-ಜೆನ್​ನಿಂದ ನಿತ್ಯ 2.89 MU, ವಿಂಡ್ ಪವರ್​​ನಿಂದ ನಿತ್ಯ 12.66 ಮಿಲಿಯನ್​ ಯುನಿಟ್​ ವಿದ್ಯುತ್ ಪಡೆಯಲಾಗುತ್ತಿದೆ ಎಂದು ಇಂಧನ ಇಲಾಖೆಯಿಂದ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಉಲ್ಬಣಗೊಂಡ ವಿದ್ಯುತ್ ಬೇಡಿಕೆ; ಅಪಾರ ಪ್ರಮಾಣದಲ್ಲಿ ವಿದ್ಯುತ್ ಖರೀದಿಗೆ ಮುಂದಾದ ರಾಜ್ಯ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.