ETV Bharat / state

ಚಾಮರಾಜನಗರ: ಜಲಮೂಲ ಬಳಿ ಬರುವ ಆನೆಗಳ ಲೆಕ್ಕ ಪೂರ್ಣ, ಮೂರು ದಿನದ ಗಜ ಗಣತಿ ಅಂತ್ಯ - elephants census - ELEPHANTS CENSUS

ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಗಜಗಣತಿ ಶನಿವಾರ ಅಂತ್ಯಗೊಂಡಿತು.

census was held in Bandipur forest area
ಬಂಡೀಪುರ ಪ್ರದೇಶದಲ್ಲಿ ಗಜಗಣತಿ ನಡೆಯಿತು. (ETV Bharat)
author img

By ETV Bharat Karnataka Team

Published : May 25, 2024, 5:37 PM IST

Updated : May 25, 2024, 8:33 PM IST

ಗಜ ಗಣತಿ (ETV Bharat)

ಚಾಮರಾಜನಗರ: ಕಳೆದ ಮೂರು ದಿನಗಳಿಂದ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಗಜಗಣತಿ ಶನಿವಾರ ಅಂತ್ಯಗೊಂಡಿದೆ. 3 ನೇ ದಿನವಾದ ಇಂದು ಜಲಮೂಲ ಬಳಿ ಬಂದ ಆನೆಗಳನ್ನು ಲೆಕ್ಕ ಹಾಕಲಾಗಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್​​ಗಳು, ಕಾವೇರಿ ವನ್ಯಜೀವಿ ಧಾಮದ 43 ಬೀಟ್ ಗಳು, ಬಿಳಿ ಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 170 ಮಂದಿ ಹಾಗೂ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಗಣತಿ ಕಾರ್ಯ ನಡೆದಿದ್ದು, ಬೆಳಗ್ಗೆಯಿಂದ ಸಂಜೆ ತನಕ‌ ಕೆರೆಗಳು, ಜಲಮೂಲಗಳ ಸಮೀಪ‌ ಕುಳಿತು ಆನೆ ಲೆಕ್ಕಚಾರ ನಡೆಸಲಾಗಿದೆ.

ಮೊದಲ‌ ದಿನ ಪ್ರತಿ ಬೀಟ್ ನಲ್ಲಿ 15 ಕಿ ಮೀ ನಡೆದು ಆನೆಗಳನ್ನು ಪ್ರತ್ಯಕ್ಷವಾಗಿ ಕಂಡು ದಾಖಲು ಮಾಡಿಕೊಂಡರೇ ಎರಡನೇ ದಿನ ಗಣತಿ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ 2 ಕಿ ಮೀ ನಡೆದು ಲದ್ದಿ ನೋಡಿ ಆನೆ ಇರುವಿಕೆಯ ಬಗ್ಗೆ ತಿಳಿಯುವ ಕಾರ್ಯ ಕೈಗೊಂಡರು. ಇದು ಪರೋಕ್ಷವಾಗಿ ಆನೆ ಇರುವುದನ್ನು ಗುರುತಿಸುವದು ಆಗಿತ್ತು. ಇದರಿಂದ ಗಣತಿ ಪ್ರದೇಶದಲ್ಲಿ ಆನೆ ಇಲ್ಲದಿದ್ದರೂ ಅವುಗಳ ಇರುವಿಕೆಯನ್ನು ನಿಯೋಜನೆಗೊಂಡ ನೌಕರರು ನೋಡಿದ ಲದ್ದಿ ಬಗ್ಗೆ ಪುಸ್ತಕದಲ್ಲಿ ಸ್ಪಷ್ಟವಾಗಿ ದಾಖಲಿಸುವ ಮೂಲಕ ಖಚಿತಪಡಿಸಿಕೊಂಡಿದ್ದಾರೆ.

ಮೂರನೇ ದಿನವಾದ ಶನಿವಾರದಂದು ಕೆರೆ,‌ ಕಟ್ಟೆಗಳು ಜಲಮೂಲಗಳ ಬಳಿ ಕಾದು ಕುಳಿತು ನೀರು ಕುಡಿಯಲು ಬರುವ ಆನೆಗಳನ್ನು ಲೆಕ್ಕ ಹಾಕಲಾಗಿದೆ. ಮೂರು ದಿನಗಳಲ್ಲಿ ಗುರುತಿಸಿದ ಆನೆಗಳ ಲೆಕ್ಕವನ್ನು ಕ್ರೋಢಿಕರಿಸಿದ ನಂತರ ವಿಶ್ಲೇಷಿಸಿ ಅರಣ್ಯ ಅಧಿಕಾರಿಗಳಿಂದ ಅಂತಿಮ ವರದಿ ಸಿದ್ಧ ಮಾಡಲಾಗುತ್ತಿದೆ.

ಇದನ್ನೂಓದಿ:ಚಾಮರಾಜನಗರದಲ್ಲಿ ಗಜ ಗಣತಿ ಆರಂಭ: ಮೊದಲ ದಿನ ಆನೆ ಹಿಂಡು ಲೆಕ್ಕ ಹಾಕಿದ ಸಿಬ್ಬಂದಿ - Elephant Census

Last Updated : May 25, 2024, 8:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.