ETV Bharat / state

ತಮಿಳುನಾಡಲ್ಲಿ ನಡೆದ ರಸ್ತೆ ಅಪಘಾತ: ಕರ್ನಾಟಕ ಮೀಸಲು ಪಡೆಯ ಹಿರಿಯ ಅಧಿಕಾರಿ, ಕಾನ್ಸ್​ಟೇಬಲ್​ಗಳು ಸಾವು - Road accident - ROAD ACCIDENT

ತಮಿಳುನಾಡಿಗೆ ಚುನಾವಣಾ ಹಿನ್ನೆಲೆ ಅಧಿಕಾರಿಗಳು, ಪೊಲೀಸ್ ಕಾನ್ಸ್​ಟೇಬಲ್​ಗಳು ಜೀಪಿನಲ್ಲಿ ತೆರಳುವ ವೇಳೆ ಅಪಘಾತ ನಡೆದು ಇಬ್ಬರು ಕಾನ್ಸ್​ಟೇಬಲ್​ಗಳು ಮತ್ತು ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಹಿರಿಯ ಅಧಿಕಾರಿ ಮತ್ತು ಕಾನ್ಸ್​ಟೇಬಲ್
ಚುನಾವಣಾ ಹಿರಿಯ ಅಧಿಕಾರಿ ಮತ್ತು ಕರ್ನಾಟಕದ ಕಾನ್ಸ್​ಟೇಬಲ್
author img

By ETV Bharat Karnataka Team

Published : Apr 12, 2024, 6:59 AM IST

ಬೆಂಗಳೂರು: ತಮಿಳುನಾಡಿನ ಧರ್ಮಪುರಿಗೆ ಚುನಾವಣಾ ಕರ್ತವ್ಯಕ್ಕೆೆ ತೆರಳುತ್ತಿದ್ದ ಕರ್ನಾಟಕ ಮೀಸಲು ಪಡೆಯ ಹಿರಿಯ ಅಧಿಕಾರಿ ಮತ್ತು ಕಾನ್ಸ್​ಟೇಬಲ್​ಗಳು​​ ​​ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಹಾಗೂ ಮತ್ತೊಬ್ಬ ಕಾನ್ಸ್​ಟೇಬಲ್​ ಗಾಯಗೊಂಡಿದ್ದಾರೆ.

ಕರ್ನಾಟಕ ಮೀಸಲು ಪಡೆಯ ಕೋರಮಂಗಲದಲ್ಲಿರುವ 3ನೇ ಬೆಟಾಲಿಯನ್‌ನ 3ನೇ ಸಹಾಯಕ ಕಮಾಂಡೆಂಟ್​​ ಟಿ.ಪ್ರಭಾಕರ್​ ಮತ್ತು ವಿಜಯಪುರದ ಐಆರ್‌ಬಿ (ಇಂಡಿಯನ್ ರಿಸರ್ವ್​ ಬೆಟಾಲಿಯನ್)ನ ಕಾನ್ಸ್​ಟೇಬಲ್​ ವಿಠಲ್​ ಗಡಾಧರ್, ತಮಿಳುನಾಡಿನ ಮೀಸಲು ಪಡೆಯ ಕಾನ್ಸ್​ಟೇಬಲ್ ದಿನೇಶ್ ಎಂಬವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿಜಯಪುರದ ಐಆರ್‌ಬಿ ಡೆಪ್ಯೂಟಿ ಕಮಾಂಡೆಂಟ್ ಯು.ಎನ್.ಹೇಮಂತ್​ ಕುಮಾರ್ ಮತ್ತು ಕಾನ್ಸ್​ಟೇಬಲ್​ ಜಯಕುಮಾರ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆೆಗೆ ದಾಖಲಿಸಲಾಗಿದೆ ಎಂದು ಕೆಎಸ್‌ಆರ್‌ಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

10 ದಿನಗಳ ಹಿಂದೆ ಲೋಕಸಭಾ ಚುನಾವಣೆ ಹಿನ್ನೆೆಲೆಯಲ್ಲಿ ಕೆಎಸ್‌ಆರ್‌ಪಿಯ ತುಕಡಿಯನ್ನು ತಮಿಳುನಾಡಿನ ಧರ್ಮಪುರಿಗೆ ನಿಯೋಜಿಸಲಾಗಿತ್ತು. ಅದಕ್ಕೆೆ ಹೇಮಂತ್ ಕುಮಾರ್ ಮುಂದಾಳತ್ವ ವಹಿಸಿದ್ದರು. ಗುರುವಾರ ಸಂಜೆ 5.30ರ ಸುಮಾರಿಗೆ ತಿರುವಣ್ಣಾಮಲೈನಿಂದ ದಿಂಡಿವಣ್ಣಂ ಕಡೆಗೆ ಜೀಪ್‌ನಲ್ಲಿ ಐವರು ಅಧಿಕಾರಿ ಮತ್ತು ಸಿಬ್ಬಂದಿ ತೆರಳುತ್ತಿದ್ದರು. ಕಮಾಂಡೆಂಟ್ ಪ್ರಭಾಕರ್​ ಜೀಪ್‌ನ ಮುಂಭಾಗ ಕುಳಿತಿದ್ದರು. ಹಿಂಭಾಗದಲ್ಲಿ ಕಾನ್ಸ್​ಟೇಬಲ್ ವಿಠಲ್, ಡೆಪ್ಯೂಟಿ ಕಮಾಂಡೆಂಟ್ ಹೇಮಂತ್ ಹಾಗೂ ತಮಿಳುನಾಡಿನ ಸಿಬ್ಬಂದಿ, ಕಾನ್ಸ್​​ಟೇಬಲ್​ ಇದ್ದರು.

ಮಾರ್ಗ ಮಧ್ಯೆೆ ಅತಿ ವೇಗವಾಗಿ ಬಂದ ತಮಿಳುನಾಡಿನ ಬಸ್​​ ಇವರ ಜೀಪಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರಭಾಕರ್​, ವಿಠಲ್, ತಮಿಳುನಾಡಿನ ದಿನೇಶ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಗ್ಗೆೆ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಕೆಎಸ್‌ಆರ್‌ಪಿಯ ಹಿರಿಯ ಅಧಿಕಾರಿ ಭೀಮಪ್ಪ ಎಂಬವರನ್ನು ನಿಯೋಜಿಸಲಾಗಿದ್ದು, ಸ್ಥಳಕ್ಕೆೆ ತೆರಳಿ ಪರಿಶೀಲಿಸಿದ್ದಾರೆ. ಬಳಿಕ ಅಧಿಕಾರಿ-ಸಿಬ್ಬಂದಿಯ ಮರಣೋತ್ತರ ಪರೀಕ್ಷೆ ಹಾಗೂ ಮೃತದೇಹಗಳನ್ನು ರಾಜ್ಯಕ್ಕೆೆ ತರುವ ವ್ಯವಸ್ಥೆೆ ಮಾಡಲಿದ್ದಾರೆ ಎಂದು ಕೆಎಸ್‌ಆರ್‌ಪಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಕೆಎಸ್ಆರ್​ಟಿಸಿ ಬಸ್-ಓಮ್ನಿ ನಡುವೆ ಅಪಘಾತ, ಮೂವರು ಸಾವು - Davanagere Accident

ETV Bharat Logo

Copyright © 2025 Ushodaya Enterprises Pvt. Ltd., All Rights Reserved.