ETV Bharat / state

ಬೆಂಗಳೂರು ಟೆಕ್ ಶೃಂಗಸಭೆ: DRDO ವಿಜ್ಞಾನಿಗಳಿಂದ ಅತ್ಯಾಧುನಿಕ ಕಣ್ಗಾವಲು ತಂತ್ರಜ್ಞಾನಗಳ ಅನಾವರಣ - BENGALURU TECH SUMMIT

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಿಂದ (ಡಿಆರ್​​ಡಿಒ) ಪ್ರದರ್ಶನಗೊಂಡ ಅತ್ಯಾಧುನಿಕ ಕಣ್ಗಾವಲು ತಂತ್ರಜ್ಞಾನಗಳ ಬಗ್ಗೆ ಡಿಆರ್​​ಡಿಒ ವಿಜ್ಞಾನಿಗಳು ಮಾಹಿತಿ ಹಂಚಿಕೊಂಡರು.

Etv Bharat
ಟೆಕ್ ಶೃಂಗಸಭೆಯಲ್ಲಿ ಡಿಆರ್​​ಡಿಒ ವಿಜ್ಞಾನಿಗಳು (Etv Bharat)
author img

By ETV Bharat Karnataka Team

Published : Nov 21, 2024, 8:01 PM IST

ಬೆಂಗಳೂರು: 27ನೇ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ, ಭಾರತದ ರಕ್ಷಣಾ ವಿಮಾನಯಾನ ಕ್ಷೇತ್ರದಲ್ಲಿ ಅತ್ಯಾಧುನಿಕ ಮಾದರಿಗಳು ಹಾಗೂ ಕಣ್ಗಾವಲು ತಂತ್ರಜ್ಞಾನಗಳನ್ನು ಡಿಆರ್​​ಡಿಒ ವಿಜ್ಞಾನಿಗಳು ಅನಾವರಣಗೊಳಿಸಿದರು.

ಈ ಕುರಿತು ಡಿಆರ್​​ಡಿಒ ವಿಜ್ಞಾನಿಗಳಾದ ಸತೀಶ್ ಕುಮಾರ್ ಮತ್ತು ಪ್ರಜ್ಞಾ ಅವರು 'ಈಟಿವಿ ಭಾರತ'ದ ಜೊತೆ ಮಾತನಾಡಿ, ''ಗುಪ್ತಚರ, ಕಣ್ಗಾವಲು, ವಿಚಕ್ಷಣೆ, ಮಲ್ಟಿ-ಮೋಡ್ ಮ್ಯಾರಿಟೈಮ್ ಏರ್‌ಕ್ರಾಫ್ಟ್, ಏರ್‌ಬೋರ್ನ್ ಅರ್ಲಿ ವಾರ್ನಿಂಗ್ ಮತ್ತು ಕಂಟ್ರೋಲ್ ಪ್ಲಾಟ್‌ಫಾರ್ಮ್‌ಗಳನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ'' ಎಂದು ತಿಳಿಸಿದರು.

drdo
ಟೆಕ್ ಶೃಂಗಸಭೆಯಲ್ಲಿ ಡಿಆರ್​​ಡಿಒ ತಂತ್ರಜ್ಞಾನಗಳು (ETV Bharat)

ವಾಯುಪಡೆ ಸಾಮರ್ಥ್ಯ ಹೆಚ್ಚಳ: ಯುದ್ಧದಲ್ಲಿ ಆಧುನಿಕ ತಂತ್ರಜ್ಞಾನದ ಕಾರ್ಯತಂತ್ರದ ಮಹತ್ವ ವಿವರಿಸಿದ ಡಾ.ಸತೀಶ್ ಕುಮಾರ್, ''ಡಿಆರ್​​ಡಿಒ ತಂತ್ರಜ್ಞಾನಗಳು ಯುದ್ಧಭೂಮಿಯಲ್ಲಿ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ವಿಧಾನವನ್ನು ಕ್ರಾಂತಿಯಾಗಿಸಿದೆ. ಈ ಉಪಕ್ರಮಗಳು ನೈಜ - ಸಮಯದ ಗುಪ್ತಚರವನ್ನು ಒದಗಿಸುವ ಗುರಿ ಹೊಂದಿವೆ. ಹಲವು ವಿಧದ ಅನಿರ್ದಿಷ್ಟ ವಾತಾವರಣವನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲಿದೆ. ಅಲ್ಲದೆ, ಭಾರತೀಯ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸುತ್ತಿವೆ'' ಎಂದರು.

''ಬೊಂಬಾರ್ಡಿಯರ್ ಗ್ಲೋಬಲ್ 6000 ಮತ್ತು ಗಲ್ಫ್‌ಸ್ಟ್ರೀಮ್ G550 ಅನ್ನು ಸ್ಪರ್ಧಿಗಳಾಗಿ ಹೊಂದಿರುವ ನಾವು ಕೂಡ ಹಲವು ಜಾಗತಿಕ ಟೆಂಡರ್ ಪ್ರಕ್ರಿಯೆಗಳನ್ನು ಅಂತಿಮಗೊಳಿಸಲಿದ್ದೇವೆ. ಈ ಪ್ಲಾಟ್‌ಫಾರ್ಮ್‌ಗಳು, ಭಾರತದ ನೆಟ್‌ವರ್ಕ್-ಕೇಂದ್ರಿತ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲಿದ್ದೇವೆ'' ಎಂದು ಮಾಹಿತಿ ನೀಡಿದರು.

ವೈಮಾನಿಕ ರಕ್ಷಣಾ ಜಾಲ ಮತ್ತಷ್ಟು ಗಟ್ಟಿ: ''ಆರು ಎ321 ವಿಮಾನಗಳನ್ನು ಮುಂದಿನ ಪೀಳಿಗೆಯ ಪ್ಲಾಟ್‌ಫಾರ್ಮ್‌ಗಳಾಗಿ ಮಾರ್ಪಡಿಸಲಾಗುತ್ತಿದೆ. 2027-28ರ ವೇಳೆಗೆ ಇದರ ಸಂಪೂರ್ಣ ಕಾರ್ಯಾಚರಣೆಯನ್ನು ನಿರೀಕ್ಷಿಸಲಾಗಿದೆ. ಸುಧಾರಿತ ಗ್ಯಾಲಿಯಂ ನೈಟ್ರೈಡ್ ಆಧಾರಿತ ರಾಡಾರ್ ಮಾಡ್ಯೂಲ್‌ಗಳು ಮತ್ತು 300 ಡಿಗ್ರಿ ಕವರೇಜ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ನವೀಕರಿಸಿದ ತಂತ್ರಜ್ಞಾನಗಳು ಯುದ್ಧ ವಿಮಾನಗಳ ಕ್ಷಮತೆಯನ್ನು ಗಣನೀಯವಾಗಿ ವರ್ಧಿಸಲಿದೆ. ಅಸ್ತಿತ್ವದಲ್ಲಿರುವ ನೇತ್ರಾ ಮಾರ್ಕ್-1ಎ ವಿಮಾನದಲ್ಲಿ ಇದೇ ರೀತಿಯ ವೈಶಿಷ್ಟ್ಯಗಳನ್ನು ಸಂಯೋಜಿಸಿ, ಭಾರತದ ವೈಮಾನಿಕ ರಕ್ಷಣಾ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸಲಾಗಿದೆ'' ಎಂದರು.

ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ ಸ್ವದೇಶಿ ನಿರ್ಮಿತ ಜಲ್ ದೋಸ್ತ್ ಪರಿಚಯ: ಏನಿದು ಜಲ್​ ದೋಸ್ತ್​​?

''ಡಿಆರ್​​ಡಿಒ ಐಸ್ಟಾರ್ ವ್ಯವಸ್ಥೆಯು ನೈಜ ಸಮಯದ ಕಣ್ಗಾವಲು ಮತ್ತು ಸುಧಾರಿತ ವಿಚಕ್ಷಣ ಸಾಮರ್ಥ್ಯಗಳನ್ನು ಒದಗಿಸುವ ಮೂಲಕ ಭಾರತದ ಯುದ್ಧಭೂಮಿಯಲ್ಲಿನ ಗುಪ್ತಚರ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ. 300-ಡಿಗ್ರಿ ರೇಡಾರ್ ಕವರೇಜ್ ಮತ್ತು ಅತ್ಯಾಧುನಿಕ ಸಂವೇದಕಗಳೊಂದಿಗೆ ನೌಕಾಪಡೆಯ ಕಾರ್ಯಾಚರಣೆಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ'' ಎಂದು ವಿಜ್ಞಾನಿ ಸತೀಶ್ ಕುಮಾರ್ ಅಭಿಪ್ರಾಯಪಟ್ಟರು.

ಸಮುದ್ರದಲ್ಲಿ ಕಣ್ಗಾವಲು: ಮಲ್ಟಿ- ಮೋಡ್ ಮ್ಯಾರಿಟೈಮ್ ಏರ್‌ಕ್ರಾಫ್ಟ್ ಯೋಜನೆಯ ಬಗ್ಗೆ ವಿವರಿಸಿದ ವಿಜ್ಞಾನಿ ಪ್ರಜ್ಞಾ, ''ನಾವು ರಾಡಾರ್‌ಗಳಂತಹ ಸುಧಾರಿತ ಸಂವೇದಕಗಳನ್ನು ಸಿ295 ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಯೋಜಿಸುತ್ತಿದ್ದೇವೆ. ಭಾರತೀಯ ಕೋಸ್ಟ್ ಗಾರ್ಡ್‌ಗಳಿಗಾಗಿ ಎಂಎಂಎಂಎ ಮತ್ತು ನೌಕಾಪಡೆಗೆ ಎಂಆರ್​​ಎಂಆರ್​​​ಗಳನ್ನು ಪೂರೈಸಲಿದ್ದೇವೆ. ಈ ವ್ಯವಸ್ಥೆಗಳು ಗಾಳಿಯನ್ನು ಬಳಸಿ ಸಮುದ್ರದಲ್ಲಿ ಕಣ್ಗಾವಲು ನೀಡಲಿವೆ. ಇದರಿಂದ ಕಡಲ ತೀರದಲ್ಲಿ ಟ್ರ್ಯಾಕಿಂಗ್ ಇನ್ನಷ್ಟು ಉತ್ತಮವಾಗಲಿದೆ'' ಎಂದು ಹೇಳಿದರು.

ಇದನ್ನೂ ಓದಿ: ಮೊದಲ ಬಾರಿಗೆ 'ಎಲೆಕ್ಟ್ರಾನಿಕ್ಸ್-ಸೆಮಿಕಂಡಕ್ಟರ್' ಟ್ರ್ಯಾಕ್ ಪರಿಚಯ: ಐಇಎಸ್ಎ ಅಧ್ಯಕ್ಷ ಅಶೋಕ್ ಚಂದಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.