ETV Bharat / state

ಬಾಲ್ಯದಿಂದಲೂ ಬಡವರ ಸೇವೆ ಮಾಡುವ ತವಕವಿತ್ತು : ಡಾ ಮಂಜುನಾಥ್‌ - ಜಯದೇವ ಆಸ್ಪತ್ರೆ

ಜಯದೇವ ಆಸ್ಪತ್ರೆಯಲ್ಲಿ ಶುಚಿತ್ವಕ್ಕೆ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದೇವೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್ ಅವರು ತಿಳಿಸಿದ್ದಾರೆ.

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್
ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್
author img

By ETV Bharat Karnataka Team

Published : Jan 31, 2024, 7:56 PM IST

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್

ಬೆಂಗಳೂರು: ಬಾಲ್ಯದಿಂದಲೂ ಬಡವರ ಸೇವೆ ಮಾಡುವ ತವಕವಿತ್ತು. ಅದು ಜಯದೇವ ಆಸ್ಪತ್ರೆಯ ಮೂಲಕ ಮಾಡಿದ ಸೇವೆಯಿಂದ ಈಡೇರಿದೆ. ನನ್ನನ್ನೂ ಸೇರಿದಂತೆ ಎಲ್ಲ ತಜ್ಞ ವೈದ್ಯರೂ ತುಂಬಾ ಕಾಳಜಿಯಿಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಟ್ರೀಟ್ಮೆಂಟ್ ಫಸ್ಟ್ ಪೇಮೆಂಟ್ ನೆಕ್ಸ್ಟ್ ಎನ್ನುವುದನ್ನು ಆಸ್ಪತ್ರೆಯಲ್ಲಿ ಎಂದಿಗೂ ಪಾಲಿಸಿದ್ದೇವೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್‌ ಅವರು ತಿಳಿಸಿದ್ದಾರೆ.

ಅವರು ತಮ್ಮ ಸೇವಾವಧಿ ಇಂದು ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಾನು ಇಲ್ಲಿಗೆ ಬಂದಾಗ ಕೇವಲ 300 ಹಾಸಿಗೆಗಳ ವ್ಯವಸ್ಥೆ ಇತ್ತು. ಆದರೆ, ಇದೀಗ 2 ಸಾವಿರ ಹಾಸಿಗೆಗಳು ಜತೆಗೆ 2,500 ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಣ್ಣ ಸಣ್ಣ ಬದಲಾವಣೆಯನ್ನು ತರುವ ಮೂಲಕ ಆಸ್ಪತ್ರೆಯನ್ನು ವಿಶ್ವ ದರ್ಜೆಗೆ ಏರಿಸಿದ್ದೇವೆ ಎಂದರು.

ಶುಚಿತ್ವಕ್ಕೆ ಸಾಕಷ್ಟು ಪ್ರಾಮುಖ್ಯತೆ ಕೊಟ್ಟಿದ್ದೇವೆ. ಪ್ರತಿದಿನವೂ ಹೊಸದನ್ನು ತರುವುದರ ಮೂಲಕ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಶ್ರಮಿಸಿದ್ದೇವೆ. ಇದರಲ್ಲಿ ನಮ್ಮ ಸಿಬ್ಬಂದಿ ಪಾತ್ರ ಬಹಳಷ್ಟಿದೆ. ಇಲ್ಲಿ ಇರುವಷ್ಟು ತಜ್ಞ ವೈದ್ಯರು, ದೊಡ್ಡ ತರಬೇತಿ ಕೇಂದ್ರ ದೇಶದ ಯಾವುದೇ ಆಸ್ಪತ್ರೆಯಲ್ಲಿ ಇಲ್ಲ. ರೋಗಿಗಳ ಬಳಿ ಅಭಿಪ್ರಾಯವನ್ನು ಅವರ ಮನೆಗೆ ಹೋಗಿ ಸಂಗ್ರಹಿಸುವ ವಿನೂತನ ಕೆಲಸ ಕೂಡ ಆಸ್ಪತ್ರೆಯಿಂದ ನಡೆಯುತ್ತಿದೆ ಎಂದು ಡಾ. ಮಂಜುನಾಥ್​ ತಿಳಿಸಿದರು.

ರಕ್ತನಾಳದಲ್ಲಿ ಕ್ಯಾಲ್ಶಿಯಂ ಹೆಚ್ಚಾಗುವ ಟೆಕ್ನಾಲಜಿ ಬಂದಿದೆ. ಅದನ್ನೂ ಜಯದೇವ ಆಸ್ಪತ್ರೆಯಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಆಗುವ ಎಲ್ಲ ಹೊಸ ವ್ಯವಸ್ಥೆಯನ್ನು ಇಲ್ಲಿ ತಂದಿದ್ದೇವೆ. ಪಂಚತಾರ ಖಾಸಗಿ ಆಸ್ಪತ್ರೆಯಂತೆ ಕೆಲಸ ಆಗುತ್ತಿದೆ ಎಂದು ಹೇಳಿದರು.

ಇಲ್ಲಿಯವರೆಗೆ ಬಂದ ಎಲ್ಲ ರಾಜ್ಯ ಸರ್ಕಾರಗಳು ಜಯದೇವ ಆಸ್ಪತ್ರೆಗೆ ಸಾಕಷ್ಟು ಸಹಕಾರವನ್ನು, ಕೊಡುಗೆಗಳನ್ನು ನೀಡಿವೆ. ದಾನಿಗಳ ನೆರವು ಸಹ ಆಸ್ಪತ್ರೆಗಿದೆ. ಸುಧಾಮೂರ್ತಿ, ನಾರಾಯಣಮೂರ್ತಿ, ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಎಂದೂ ನಮ್ಮ ಜೊತೆ ನಿಂತಿದ್ದಾರೆ. ಇವರೆಲ್ಲರಿಗೂ ಆಭಾರಿಯಾಗಿದ್ದೇನೆ. ಆಯುಷ್ಮಾನ್ ಭಾರತ ರೋಗಿಗಳಿಗೆ ನೆರವಾಗುತ್ತಿದೆ. ಆದರೆ ಅದನ್ನು ಇನ್ನೂ ಉತ್ತಮ ರೀತಿಯಲ್ಲಿ ತರಲು ಸರ್ಕಾರ ಪರಾಮರ್ಶೆ ನಡೆಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.

ಉತ್ತಮ ಮುಂದಾಳತ್ವದ ಅವಶ್ಯಕತೆ ಇದೆ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಹ ಜಯದೇವ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏಮ್ಸ್ ಸಂಸ್ಧೆ ನಮ್ಮ ಮಾಡೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ದೆಹಲಿಯಲ್ಲಿ ಈ ವ್ಯವಸ್ಥೆ ತರಲು ಹೊರಟಿದೆ. ಇದೇ ಮಾದರಿಯಲ್ಲಿ ಇನ್ನಷ್ಟು ಸರ್ಕಾರಿ ಆಸ್ಪತ್ರೆಗಳಿಗೆ ಇನ್ನೂ ಉತ್ತಮ ಮುಂದಾಳತ್ವದ ಅವಶ್ಯಕತೆ ಇದೆ ಎಂದು ಹೇಳಿದರು.

2005 ರಲ್ಲಿ ಆಸ್ಪತ್ರೆ ತ್ಯಜಿಸುವ ಮನಸ್ಸು ಮಾಡಿದ್ದೆ. ಆಗ ಮಾಜಿ ಪ್ರಧಾನಿ ದೇವೇಗೌಡರು ನನ್ನನ್ನು ಇಲ್ಲಿಯೇ ಕೆಲಸ ಮಾಡುವಂತೆ ಸೂಚಿಸಿದ್ದರು. ದೊಡ್ಡವರ ಮಾತು ಕೇಳಿದರೆ ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಇಂದು ದೇವೇಗೌಡರ ಮಾತು ಸಾಕ್ಷಿಯಾಗಿದೆ. ನಮ್ಮ ನೋವು ನಮಗೆ ಗೊತ್ತಾದರೆ ಜೀವಂತವಾಗಿದ್ದೀವಿ ಎಂದರ್ಥ. ಅದೇ ಬೇರೆಯವರ ನೋವು ನಮಗೆ ತಿಳಿದರೆ ಮನುಷ್ಯರಾಗಿದ್ದೇವೆ ಎಂದು ಅರ್ಥ ಎಂದು ಹೇಳಿ ಡಾ. ಮಂಜುನಾಥ್ ಭಾವುಕರಾದರು.

ಕೋವಿಡ್ ಸಂದರ್ಭದಲ್ಲಿ ಮಾಧ್ಯಮದವರು ವಾರಿಯರ್ಸ್ ಆಗಿ ಕೆಲಸ ಮಾಡಿದ್ದಾರೆ. ಅದಕ್ಕೆ ನಾನು ಚಿರಋಣಿ. ಜಯದೇವ ಆಸ್ಪತ್ರೆಯ ಬೆಳವಣಿಗೆಯಲ್ಲಿ ಮಾಧ್ಯಮದವರ ಪಾತ್ರ ಬಹಳಷ್ಟಿದೆ ಎಂದರು. ಈ ಸಂದರ್ಭದಲ್ಲಿ ಜಯನಗರ ಶಾಸಕ ರಾಮಮೂರ್ತಿ ಸೇರಿದಂತೆ ಹಲವಾರು ಗಣ್ಯರು ಡಾ. ಮಂಜುನಾಥ್ ಅವರಿಗೆ ಸನ್ಮಾನಿಸಿ ಗೌರವಿಸಿದರು. ಜಯದೇವ ಆಸ್ಪತ್ರೆಯ ಸಿಬ್ಬಂದಿ ಕಣ್ಣೀರು ಹಾಕಿದ ಪ್ರಸಂಗಗಳು ಕಂಡು ಬಂದವು.

ಇದನ್ನೂ ಓದಿ : ಜಯದೇವ ಹೃದ್ರೋಗ ಸಂಸ್ಥೆಯಿಂದ 52 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಿ ದಾಖಲೆ: ಡಾ.ಸಿ.ಎನ್.ಮಂಜುನಾಥ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.