ETV Bharat / state

ಜಗದೀಶ್ ಶೆಟ್ಟರ್​​ ಅವರನ್ನ ನಾವು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ವಿ: ಡಾ ಜಿ ಪರಮೇಶ್ವರ್ - Dr G Parameshwar

ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ವಾಪಸ್ ಆಗಿರುವುದರಿಂದ ನಮಗೆ ಪ್ಲಸ್ ಅಥವಾ ಮೈನಸ್ ಆಗುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ಡಾ ಜಿ ಪರಮೇಶ್ವರ್
ಡಾ ಜಿ ಪರಮೇಶ್ವರ್
author img

By ETV Bharat Karnataka Team

Published : Jan 26, 2024, 8:27 PM IST

ಡಾ ಜಿ ಪರಮೇಶ್ವರ್

ತುಮಕೂರು : ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಹೋಗಿದ್ದಾರೆ. ಅವರಿಗೆ ನಾವು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ವಿ. ಅವರು ಅವಮಾನ ಆಗಿದ್ದಕ್ಕಾಗಿ ಕಾಂಗ್ರೆಸ್‌ಗೆ ಬಂದಿದ್ದೇನೆ ಅಂದಿದ್ದರು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ತುಮಕೂರು ನಗರದಲ್ಲಿ ಗಣರಾಜ್ಯೋತ್ಸವದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್​​ಗೆ ಜನಮನ್ನಣೆ ಇರಲಿಲ್ಲ. ಹಾಗಾಗಿ, ಅವರು ಚುನಾವಣೆಯಲ್ಲಿ ಸೋತರು. ಒಬ್ಬ ಸಿಎಂ ಆಗಿದ್ದವರು ಸೋಲಬಾರದಿತ್ತು. ಆದರೂ ನಾವು ಅವರಿಗೆ ಪರಿಷತ್​ ಸ್ಥಾನ ಕೊಟ್ಟಿದ್ವಿ. ಅವರು ವಾಪಸ್ ಆಗಿದ್ದರ ಹಿಂದೆ ಯಾವ ಬೆದರಿಕೆ ಇದೆಯೋ, ಒತ್ತಡ ಇದೆಯೋ ಗೊತ್ತಿಲ್ಲ. ಅವರಿಂದ ನಮಗೆ ಪ್ಲಸ್ ಅಥವಾ ಮೈನಸ್ ಆಗೋ ಪ್ರಶ್ನೆಯೇ ಇಲ್ಲ. ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಬೀಳುತ್ತದೆ ಎಂದು ಬಿಜೆಪಿ ಹಾಗೂ ಜೆಡಿಎಸ್​​​​ನವರು ಹಗಲುಗನಸು ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪಕ್ಷದ ಅಧ್ಯಕ್ಷರು ನಮಗೆ ಸುಪ್ರೀಂ. ಹಾಗಾಗಿ ಮುದ್ದಹನುಮೇಗೌಡರು ಪಕ್ಷಕ್ಕೆ ಬರುವ ದಿನಾಂಕ ಅವರೇ ಹೇಳ್ತಾರೆ. ಮುದ್ದಹನುಮೇಗೌಡರ ಟಿಕೆಟ್ ವಿಚಾರದಲ್ಲಿ ಸಚಿವ ಕೆ ಎನ್ ರಾಜಣ್ಣ ಹೇಳಿರೋದು ಸರಿ ಇದೆ. ನಾನು ಹೇಳೋದು ಬೇರೆ ಅಲ್ಲ. ರಾಜಣ್ಣ ಬೇರೆ ಅಲ್ಲ ಎಂದಿದ್ದಾರೆ.

ಕೇಂದ್ರದ ಅನುಮತಿಗಾಗಿ ಕಾಯುತ್ತಿದ್ದೇವೆ: ತುಮಕೂರು - ಬೆಂಗಳೂರಿಗಿಂತ ವೇಗವಾಗಿ ಬೆಳೆಯುತ್ತಿದೆ. ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್​ನಂತೆ ತುಮಕೂರು ಅಭಿವೃದ್ಧಿಪಡಿಸಬೇಕಾಗಿದೆ. ಇದರಿಂದ ಬೆಂಗಳೂರಿನ ಒತ್ತಡ ಕಡಿಮೆಯಾಗಲಿದೆ. ಹಾಗಾಗಿ ಮೆಟ್ರೋ ರೈಲನ್ನು ತುಮಕೂರಿಗೆ ವಿಸ್ತರಿಸಲು ಯೋಚನೆ ಮಾಡಲಾಗಿದೆ. ಡಿಪಿಆರ್ ಮಾಡಲು ಈಗಾಗಲೇ ಸಿಎಂ, ಡಿಸಿಎಂ ಸೂಚಿಸಿದ್ದಾರೆ. ಪಿಪಿಪಿ ಮಾಡೆಲ್ ನಲ್ಲಿ ಬಂಡವಾಳ ಹೂಡಲು ತಯಾರಿದ್ದಾರೆ. ಕೇಂದ್ರದ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಜಿಲ್ಲೆಗೆ ಹೆಚ್ಚಿನ ಅನುದಾನಕ್ಕೆ ಸಿಎಂ ಬಳಿ ಮನವಿ: ಸರ್ಕಾರದಲ್ಲಿ ಹಣದ ಮುಗ್ಗಟ್ಟಿದೆ. ಗ್ಯಾರಂಟಿ ಯೋಜನೆಗೆ ಹಣ ವ್ಯಯಿಸುವ ಅವಶ್ಯಕತೆ ಇದೆ. ಆದರೂ ತುಮಕೂರು ಜಿಲ್ಲೆಗೆ ಹೆಚ್ಚುವರಿಯಾಗಿ ಅನುದಾನ ಕೊಡಲು ಸಿಎಂ ಬಳಿ ಮನವಿ ಮಾಡುತ್ತೇನೆ. ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ಕಾಮಗಾರಿ ಅಪೂರ್ಣ ಆದರೂ ಸಿಎಂ ಚಾಲನೆ ಕೊಡ್ತಾರೆ. ಜನವರಿ 29 ರಂದು ನಡೆಯುವ ಕಾರ್ಯಕ್ರಮದಲ್ಲಿ ಚಾಲನೆ ಕೊಡಲಿದ್ದಾರೆ. ರಾಮ ಮಂದಿರ ಅಪೂರ್ಣ ಆಗಿದ್ದರೂ ಚಾಲನೆ ಕೊಟ್ಟಿಲ್ಲವೇ?. ಅದೇ ರೀತಿಯಲ್ಲಿ ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣ ಆಗದೇ ಇದ್ದರೂ ಸಿಎಂ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ: ಸಚಿವ ಜಿ ಪರಮೇಶ್ವರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.