ETV Bharat / state

ರಾಜಕೀಯ ವೈಷಮ್ಯಕ್ಕೆ ಜೋಡಿ ಕೊಲೆ ಪ್ರಕರಣ: 13 ವರ್ಷಗಳ ಬಳಿಕ ಆರೋಪಿ ಅರೆಸ್ಟ್ - ಮುಧೋಳ ಪೊಲೀಸ್

ಕಲಬುರಗಿ ಜಿಲ್ಲೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ 13 ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Double murder case  political enmity  ರಾಜಕೀಯ ವೈಷಮ್ಯ  ಜೋಡಿ ಕೊಲೆ ಪ್ರಕರಣ  ಮುಧೋಳ ಪೊಲೀಸ್
ರಾಜಕೀಯ ವೈಷಮ್ಯಕ್ಕೆ ಜೋಡಿ ಕೊಲೆ ಪ್ರಕರಣ: 13 ವರ್ಷಗಳ ನಂತರ ಆರೋಪಿ ಅರೆಸ್ಟ್
author img

By ETV Bharat Karnataka Team

Published : Mar 2, 2024, 9:55 AM IST

ಕಲಬುರಗಿ: ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಇಬ್ಬರನ್ನು ಕೊಲೆ ಮಾಡಿದ್ದ ಆರೋಪಿಯು ಕಳೆದ 13 ವರ್ಷಗಳಿಂದ ಪೊಲೀಸರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಇದೀಗ ಈ ಆರೋಪಿಯನ್ನು ಬಂಧಿಸುವಲ್ಲಿ ಸೇಡಂ ತಾಲೂಕಿನ ಮುಧೋಳ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜೋಳ ಕೆ. ಗ್ರಾಮದ ಶರಣಪ್ಪ ಜಕ್ಕನಕೇರಿ (48) ಎಂಬಾತನೆ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 2011ರ ಏಪ್ರಿಲ್ 13 ರಂದು ಸೇಡಂ ತಾಲೂಕಿನ ಎಲಿ ರಾಜೋಳ ಗ್ರಾಮದಲ್ಲಿ ಲಕ್ಷ್ಮಪ್ಪ ಹಾಗೂ ನರಸಪ್ಪ ಎಂಬುವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಮುಧೋಳ ಠಾಣೆ ಪೊಲೀಸರು 27 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಎಸ್ಪಿ ಮಾಹಿತಿ: ಇದರಲ್ಲಿ 6 ಜನರಿಗೆ ಜೀವಾವಧಿ ಶಿಕ್ಷೆ, ಮೂವರಿಗೆ ತಲಾ ಒಂದು ವರ್ಷ ಜೈಲು ಶಿಕ್ಷೆ ಆಗಿದೆ. ಇನ್ನಿಬ್ಬರು ವಿಚಾರಣೆ ಹಂತದಲ್ಲಿ ಮೃತಪಟ್ಟಿದ್ದಾರೆ. ಉಳಿದವರ ವಿರುದ್ಧದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ''ಈ ಪ್ರಕರಣದ ಆರೋಪಿ ರಾಜೋಳ ಕೆ. ಗ್ರಾಮದ ಶರಣಪ್ಪ ಜಕ್ಕನಕೇರಿ ಘಟನೆ ನಂತರ ಪ್ರಕರಣ ದಾಖಲಾದಾಗಿನಿಂದ ಇಲ್ಲಿಯವರೆಗೆ ಬರೋಬ್ಬರಿ 13 ವರ್ಷಗಳ ಕಾಲ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿಶೇಷ ತಂಡ ರಚಿಸಲಾಗಿತ್ತು. ವಿಶೇಷ ಕಾರ್ಯಾಚರಣೆ ನಂತರ ಆರೋಪಿಯನ್ನು ಬಂಧಿಸಲಾಗಿದೆ'' ಎಂದು ಎಸ್ಪಿ ಅಕ್ಷಯ ಹಾಕೆ ಮಚ್ಚಿಂದ್ರ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕೆಫೆ​ ಸ್ಫೋಟ: ಹೆಚ್​ಎಎಲ್​​ ಠಾಣೆಯಲ್ಲಿ ಯುಎಪಿಎ ಪ್ರಕರಣ ದಾಖಲು

ಪ್ರತ್ಯೇಕ ಪ್ರಕರಣ- ಅಪಘಾತದಲ್ಲಿ ಸ್ಥಳದಲ್ಲೇ ವ್ಯಕ್ತಿ ಸಾವು: ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೋರ್ವ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ಕಮಲಾಪುರ ಪಟ್ಟಣದಲ್ಲಿ ನಡೆದಿದೆ. ಸಂತೋಷ್ ಭಾಲ್ಕಿ ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.

ಕಲಬುರಗಿ ಕಡೆಯಿಂದ ಬೈಕ್ ಮೇಲೆ ಆಗಮಿಸಿದ ಸವಾರ ಕಮಲಾಪುರ ಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಹೋಗುವಾಗ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕಮಲಾಪುರ ಪೊಲೀಸ್​ ಠಾಣೆಯ ಪಿಎಸ್ಐ ಚಿದಾನಂದ ಸೌದಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.