ETV Bharat / state

ತುಮಕೂರು: ಸಿದ್ದಗಂಗಾ ಮಠದ ಹೆಸರಿನಲ್ಲಿ ಕಿಡಿಗೇಡಿಗಳಿಂದ ದೇಣಿಗೆ ವಸೂಲಿ - TUMAKURU SIDDAGANGA MUTT

ಸಿದ್ಧಗಂಗಾ ಮಠಕ್ಕೆ ದೇಣಿಗೆ ಸಲ್ಲಿಸುವವರು ನೇರವಾಗಿ ಮಠಕ್ಕೆ, ಅಥವಾ ಅಂಚೆ ಮೂಲಕ ಮಠದ ಖಾತೆಗೆ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Tumakuru Siddaganga Mutt
ತುಮಕೂರು ಸಿದ್ಧಗಂಗಾ ಮಠ (ETV Bharat)
author img

By ETV Bharat Karnataka Team

Published : 2 hours ago

ತುಮಕೂರು: ಕೆಲವು ಕಿಡಿಗೇಡಿಗಳು ಸಿದ್ಧಗಂಗಾ ಮಠದ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹ ಮಾಡುವುದು ಹಾಗೂ ಬಂಜೆತನಕ್ಕೆ ಔಷಧ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ರೀತಿ ಔಷಧ ವಿತರಣೆ ಮಾಡುವ ಸಲುವಾಗಿ ಅಥವಾ ದೇಣಿಗೆ ಸಂಗ್ರಹಿಸುವ ಸಲುವಾಗಿ ಮಠದಿಂದ ಯಾವುದೇ ವ್ಯಕ್ತಿಯನ್ನು ನೀಯೋಜನೆ ಮಾಡಿಲ್ಲ ಎಂದು ಸಿದ್ಧಗಂಗಾ ಮಠ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಿಡಿಗೇಡಿಗಳು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಬಳಿ ಹೋಗಿ, ತಮ್ಮನ್ನು ದೇಣಿಗೆ ಸಂಗ್ರಹ ಮಾಡಲು ಹಾಗೂ ಬಂಜೆತನಕ್ಕೆ ಔಷಧ ವಿತರಣೆ ಮಾಡಲು ಮಠದಿಂದ ನಿಯೋಜನೆ ಮಾಡಲಾಗಿದೆ ಎಂದು ಸುಳ್ಳು ಹೇಳಿ ದೇಣಿಗೆ ಸಂಗ್ರಹ ಹಾಗೂ ಔಷಧ ವಿತರಣೆ ಮಾಡುತ್ತಿದ್ದಾರೆ. ಈ ವಂಚಕರ ಮಾತಿಗೆ ಮರುಳಾಗಿ ಸಾರ್ವಜನಿಕರು ಮೋಸ ಹೋಗಬಾರದು. ಹಿತೈಷಿಗಳು, ದೇಣಿಗೆ ಸಲ್ಲಿಸುವವರು ಮಠಕ್ಕೆ ನೇರವಾಗಿ ಅಥವಾ ಅಂಚೆ ಮುಖಾಂತರ ಖಾತೆಗೆ ನೇರವಾಗಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿಷ್ಠಿತ ಹೊಟೇಲ್‌ಗಳಲ್ಲಿ ರೂಮ್ ಪಡೆದು ವಂಚನೆ: ತಮಿಳುನಾಡಿನ ಆರೋಪಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.