ETV Bharat / state

ಕೆಪಿಸಿಸಿ ಸಿಬ್ಬಂದಿಗೆ ಸಂಬಳ ನೀಡಲು ಹಣ ಇಲ್ಲದಂತಾಗಿದೆ: ಶಾಸಕರಿಗೆ ತಲಾ 25 ಸಾವಿರ ರೂ. ನೀಡುವಂತೆ ಸೂಚಿಸಿದ್ದೇನೆ; ಡಿಕೆಶಿ - AICC account seizure - AICC ACCOUNT SEIZURE

ಬಿಜೆಪಿ ಸರ್ಕಾರ ಎಐಸಿಸಿ ಖಾತೆ ಜಪ್ತಿ ಮಾಡಿರುವುದರಿಂದ ನಮ್ಮ ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣ ಇಲ್ಲದಂತಾಗಿದೆ. ಆದುದರಿಂದ ಶಾಸಕರಿಗೆ ತಲಾ 25 ಸಾವಿರ ರೂ. ನೀಡುವಂತೆ ಸೂಚಿಸಿದ್ದೇನೆ ಎಂದು ಡಿ.ಕೆ ಶಿವಕುಮಾರ್​ ಹೇಳಿದರು.

ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
author img

By ETV Bharat Karnataka Team

Published : Mar 22, 2024, 5:16 PM IST

ಶಾಸಕರಿಗೆ ತಲಾ 25 ಸಾವಿರ ರೂ. ನೀಡುವಂತೆ ಸೂಚಿಸಿದ್ದೇನೆ

ಬೆಂಗಳೂರು : ಕೆಪಿಸಿಸಿ ಸಿಬ್ಬಂದಿಗೆ ಸಂಬಳ ಕೊಡಲು ಮತ್ತು ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತು ನೀಡಲು ಹಣ ಇಲ್ಲದಂತಾಗಿದೆ. ಹೀಗಾಗಿ ಶಾಸಕರಿಗೆ ತಲಾ 25 ಸಾವಿರ ರೂ. ನೀಡುವಂತೆ ಸೂಚಿಸಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಖಾತೆ ಜಪ್ತಿ ವಿಚಾರವಾಗಿ ಪ್ರತಿಕ್ರಿಯಿಸಿ, ಯೂತ್ ಕಾಂಗ್ರೆಸ್ ಚುನಾವಣಾ ಸಂದರ್ಭದ ಸದಸ್ಯತ್ವಕ್ಕಾಗಿ 90 ಕೋಟಿ ಸಂಗ್ರಹಿಸಿದೆ. ಈ ಹಣವನ್ನು ಎಐಸಿಸಿ ಖಾತೆಗೆ ಜಮೆ ಮಾಡಿದ್ದೇವೆ. ಇನ್ನು ನಾವು ವಿಧಾನಸಭೆ ಚುನಾವಣೆ ವೇಳೆ, ಅಭ್ಯರ್ಥಿಗಳಿಂದ 2 ಲಕ್ಷ ರೂ. ಕಲೆಕ್ಟ್ ಮಾಡಿದ್ದೇವೆ.‌ ಇದರಿಂದ 21-22 ಕೋಟಿ ರೂ. ಸಂಗ್ರಹವಾಗಿದೆ. ಈಗ ಲೋಕಸಭೆ ಚುನಾವಣೆಗೆ ಹಣ ಸಂಗ್ರಹ ಮಾಡಬೇಕು ಅಂದುಕೊಂಡಿದ್ದೆ. ಆದರೆ, ಎಐಸಿಸಿ ಬೇಡ ಅಂದಿದೆ. ಈಗ ಕೆಪಿಸಿಸಿ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇಲ್ಲ. ತಲಾ 25 ಸಾವಿರ ರೂ.ನಂತೆ ಎಲ್ಲಾ ಕಾಂಗ್ರೆಸ್ ಶಾಸಕರುಗಳು ಹಣ ಕೊಡುವಂತೆ ಹೇಳಿದ್ದೇನೆ. ಈ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಎಐಸಿಸಿ ಖಾತೆ ಜಪ್ತಿ ಮಾಡಿದೆ ಎಂದರು.‌

ಎಐಸಿಸಿ ಹಣ ಸೀಜ್ ಮಾಡಿಸಿದ್ದಾರೆ. ಕೋರ್ಟ್​ಗೆ ಹೋದರೆ ಅಲ್ಲೂ ನ್ಯಾಯ ಸಿಕ್ಕಿಲ್ಲ. ನಾವೇನು ಬ್ಯುಸಿನೆಸ್ ಮಾಡುತ್ತಿದ್ದೇವಾ?. ನಮಗೆ ಯಾವುದೇ ಹೆಚ್ಚು ಬಾಂಡ್ ಕೊಟ್ಟಿಲ್ಲ. ಕಾಂಗ್ರೆಸ್​​ಗೆ ಶೇ 11ರಷ್ಟು ಮಾತ್ರ ಬಾಂಡ್ ನಿಂದ ಹಣ ಬಂದಿದೆ. ಬಿಜೆಪಿಗೆ ಶೇ 52ರಷ್ಟು ಹಣ ಸಂಗ್ರಹವಾಗಿದೆ. ನಮ್ಮ ಹಣ ಸೀಜ್ ಮಾಡಿದ್ರೆ ಹೇಗೆ?. ನಾವು ಪ್ರಚಾರಕ್ಕೆ ಹಣ ಕೊಡೋದು ಎಲ್ಲಿಂದ?. ನಾವು ಎಲೆಕ್ಷನ್ ಮಾಡೋದು ಎಲ್ಲಿಂದ?. ಖರ್ಚು ವೆಚ್ಚವನ್ನು ನಾವು ಎಲ್ಲಿಂದ ಭರಿಸೋದು. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಅಟಲ್​ ಬಿಹಾರಿ ವಾಜಪೇಯಿ ಅವರ ಸಂದರ್ಭದಲ್ಲಿ ಇಂಡಿಯಾ ಶೈನಿಂಗ್ ಅಂತ ಪ್ರಚಾರ ಮಾಡಿದ್ದರು. ಈಗ ಸೋಲಿನ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ರಾಜ್ಯಪಾಲರು ರಾಜೀನಾಮೆ ಕೊಡಿಸೋದು. ಅವರನ್ನು ಎಲೆಕ್ಷನ್‌ಗೆ ನಿಲ್ಲಿಸೋದು ಮಾಡುತ್ತಿದ್ದಾರೆ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ ಎಂದು ಡಿ.ಕೆ ಶಿವಕುಮಾರ್​ ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದ ಕೊಲೆ - ಸುರ್ಜೇವಾಲ : ಇದೇ ವೇಳೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಸಂವಿಧಾನವನ್ನು ಈಗ ಬಿಜೆಪಿ ಸರ್ಕಾರ ಹತ್ತಿಕ್ಕುತ್ತಿದೆ. ಪ್ರಜಾಪ್ರಭುತ್ವದ ಕೊಲೆ‌ ಮಾಡುತ್ತಿದೆ. ನರೇಂದ್ರ ಮೋದಿ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಆಡಳಿತವನ್ನು ನೆನಪಿಸುತ್ತಿದೆ. ದೇಶದ ಪ್ರಜಾಪ್ರಭುತ್ವ ಈಗ ದಾಳಿಗೊಳಗಾಗಿದೆ. ಸಾಮಾನ್ಯ ನಾಗರಿಕರ ಹಕ್ಕು ಅಪಾಯದಲ್ಲಿದೆ. ಸರಕಾರ ನಿಮ್ಮ ವೇತನ ಪಡೆದರೆ, ಖಾತೆ ಜಪ್ತಿ ಮಾಡಿದರೆ ಹೇಗೆ? ಯಾರಾದರು ಬದುಕಲು ಸಾಧ್ಯವೇ?. ಈ ರೀತಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ಗೆ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಪಿತೂರಿ ಮಾಡಿ 11 ಕಾಂಗ್ರೆಸ್ ಖಾತೆಗಳನ್ನು ಜಪ್ತಿ ಮಾಡಿದೆ ಎಂದು ಕಿಡಿ ಕಾರಿದರು.

2018 ರಲ್ಲಿ ಕಾಂಗ್ರೆಸ್ ಗೆ ನೀಡಿದ ಡೊನೇಷನ್​ ನಲ್ಲಿ ಸಂಸದರು ಹಾಗೂ ಚುನಾಯಿತ ಶಾಸಕರು 14 ಲಕ್ಷ ರೂ.‌ ನಗದು ರೂಪದಲ್ಲಿ ಬಂದಿದೆ ಎಂದು ಆರೋಪಿಸಿ ಐಡಿ ನೋಟಿಸ್ ನೀಡಿತ್ತು.‌ ಐಟಿ ಇಲಾಖೆ ಈಗ 115 ಕೋಟಿ ರೂ. ವನ್ನು ಬಲವಂತವಾಗಿ ನಮ್ಮ ಖಾತೆಯಿಂದ ವಿತ್ ಡ್ರಾ ಮಾಡಿದೆ. ಚುನಾವಣೆಗೆ ಮುನ್ನ ನಮಗೆ ಯಾವುದೇ ಜಾಹೀರಾತು ನೀಡಲು ಸಾಧ್ಯವಾಗುತ್ತಿಲ್ಲ. ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವಾಗಿ ಒಂದು ರೂ. ಕೊಡಲು ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿಲ್ಲ. ಹೀಗಾದರೆ ಪ್ರತಿಪಕ್ಷ ಚುನಾವಣೆ ಎದುರಿಸುವುದು ಹೇಗೆ? ಎಂದು ಸುರ್ಜೇವಾಲ ಪ್ರಶ್ನಿಸಿದರು.

ನಿರಂಕುಶ ಪ್ರಭುತ್ವದ ಇನ್ನೊಂದು ಹೆಸರು ಅಂದರೆ ಅದು ನರೇಂದ್ರ ಮೋದಿ. ಬಿಜೆಪಿ ವಿರೋಧಿಗಳ ವಿರುದ್ಧ ಮೋದಿ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಬಿಜೆಪಿ ವಿರೋಧಿಗಳನ್ನು ಜೈಲಿಗೆ ಹಾಕುತ್ತಿದೆ. ರಾಜ್ಯಪಾಲರನ್ನು ಬಿಜೆಪಿಯ ಸಕ್ರಿಯ ಟೂಲ್ ಆಗಿ ಬಳಸುತ್ತಿದೆ. ಇಡಿ ಪ್ರತಿಪಕ್ಷಗಳಿಗೆ ಬಿಜೆಪಿ ಸೇರಿ, ಇಲ್ಲವಾದರೆ ಜೈಲಿಗೆ ಕಳಹಿಸಲಾಗುತ್ತದೆ ಎಂದು ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಈಗಲೂ 50 ಕೋಟಿ ರೂ.‌ ಆಫರ್ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ ಆರೋಪ - OPERATION KAMALA

ETV Bharat Logo

Copyright © 2025 Ushodaya Enterprises Pvt. Ltd., All Rights Reserved.