ETV Bharat / state

ವಕ್ಫ್​ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ: ಡಿಸಿಎಂ ಡಿಕೆಶಿ ಕಿಡಿ

ವಕ್ಫ್​ ವಿರುದ್ಧ ಇಂದು ಬಿಜೆಪಿಯವರು ಪ್ರತಿಭಟನೆ ಮೆರವಣಿಗೆ ಮಾಡುತ್ತಿದ್ದು, ಇದಕ್ಕೆ ಡಿ.ಕೆ. ಶಿವಕುಮಾರ್ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅದು ಪ್ರತಿಭಟನೆ ಅಲ್ಲ ಎಂದು ಟೀಕಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮ ಪ್ರತಿಕ್ರಿಯೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮ ಪ್ರತಿಕ್ರಿಯೆ. (ETV Bharat)
author img

By ETV Bharat Karnataka Team

Published : Nov 4, 2024, 11:51 AM IST

ಬೆಂಗಳೂರು: "ವಕ್ಫ್ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಜೆಪಿ ವಕ್ಫ್ ನೋಟಿಸ್ ವಿರೋಧಿಸಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, "ವಕ್ಫ್ ವಿಚಾರವಾಗಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ. ಅದು ಪ್ರತಿಭಟನೆ ಅಲ್ಲ" ಎಂದು ಕಿಡಿಕಾರಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮ ಪ್ರತಿಕ್ರಿಯೆ. (ETV Bharat)

ಚನ್ನಪಟ್ಟಣ ಉಪಸಮರ ವಿಚಾರವಾಗಿ ಪ್ರತಿಕ್ರಿಯಿಸಿ, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕನಾದವನು ಏನು ಕೊಡುತ್ತಾನೆ. ಯಾವ ರೀತಿ ಸಹಾಯ ಮಾಡುತ್ತಾನೆ. ಅವರ ಬದುಕನ್ನು ಹೇಗೆ ಬದಲಾವಣೆ ಮಾಡುತ್ತಾನೆ. ಅದು ಬಹಳ ಮುಖ್ಯ" ಎಂದರು.

"ಯಾರು ಯಾರು ಏನೇನು ಮಾಡಿದ್ದಾರೆ ಎಂಬ ಪಟ್ಟಿಯನ್ನು ಈ ಚುನಾವಣೆಯ ಹಬ್ಬದಂದು ಲೆಕ್ಕಕ್ಕೆ ಬರುತ್ತದೆ. ಅದರಂತೆ ಜನ ತೀರ್ಮಾನ ಮಾಡುತ್ತಾರೆ. ಡಿ.ಕೆ. ಶಿವಕುಮಾರ್​ ಏನು ಕೊಡುಗೆ ಕೊಟ್ಟಿದ್ದಾರೆ. ಡಿ.ಕೆ. ಸುರೇಶ್ ಏನು ಕೊಡುಗೆ ಕೊಟ್ಟಿದ್ದಾರೆ. ಯೋಗೇಶ್ವರ್ ಏನು ಕೊಡುಗೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಏನು ಕೊಡುಗೆ ಕೊಟ್ಟಿದ್ದಾರೆ. ಈ ಎಲ್ಲಾ ಪಟ್ಟಿ ಆಗುತ್ತಿದೆ. ಅದಕ್ಕೆ ಜನ‌ ಮಾರ್ಕ್ಸ್ ಕೊಡ್ತಾರೆ. ಅದು ಬಿಟ್ಟರೆ ಯಾವ ರಣನೂ ಇಲ್ಲ. ರಂಗನೂ ಇಲ್ಲ" ಎಂದು ವ್ಯಂಗವಾಡಿದರು.

ನಿನ್ನೆ ಚನ್ನಪಟ್ಟಣದಲ್ಲಿ ಆರ್. ಅಶೋಕ್, ಸಿ.ಟಿ. ರವಿ ಒಗ್ಗಟ್ಟು ಪ್ರದರ್ಶನ ಮಾಡಿ ಕುಮಾರಸ್ವಾಮಿಗೆ ಸಾಥ್​ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ "ಮಾಡಲಿ ಒಳ್ಳೆಯದು. ಜೆಡಿಎಸ್​ನವರಂತೂ ಇವರಿಗೆ ಸಾಥ್​ ಕೊಡಲಿಲ್ಲ. ಇವರಾದರೂ ಕೊಡಬೇಕಲ್ಲ. ಜೆಡಿಎಸ್​ ಅವರು ಪಾದಯಾತ್ರೆ ವೇಳೆ ಸಾಥ್​ ಕೊಟ್ಟಿಲ್ವಲ್ಲಾ ಎಂದು ಟೀಕಿಸಿದರು.

ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿ ಪರ ಇಂದು ಸಿಎಂ ಸಿದ್ದರಾಮಯ್ಯ ಪ್ರಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.