ETV Bharat / state

ದಾವಣಗೆರೆ ವಿವಿಯ ಬಿಕಾಂ ಪರೀಕ್ಷೆಯಲ್ಲಿ ಯಡವಟ್ಟು: ಪ್ರಶ್ನೆ ಪತ್ರಿಕೆ ಕೊಡುವ ಬದಲು ಮಾದರಿ ಉತ್ತರ ಪತ್ರಿಕೆ ನೀಡಿದ ಸಿಬ್ಬಂದಿ! - Distributed Answer sheet in exam

ಮಂಗಳವಾರ ದಾವಣಗೆರೆ ವಿವಿಯಲ್ಲಿ ಬಿಕಾಂ ಪದವಿ ಪರೀಕ್ಷೆ ನಡೆಯಬೇಕಿತ್ತು. ಆದರೆ, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವ ಬದಲು ಉತ್ತರ ಪತ್ರಿಕೆ ನೀಡಿದ್ದರಿಂದ ಪರೀಕ್ಷೆಯನ್ನು ಪರೀಕ್ಷಾಂಗ ಕುಲಸಚಿವರು ಮುಂದೂಡಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯ
ದಾವಣಗೆರೆ ವಿಶ್ವವಿದ್ಯಾನಿಲಯ (ETV Bharat)
author img

By ETV Bharat Karnataka Team

Published : Aug 7, 2024, 9:27 AM IST

ದಾವಣಗೆರೆ: ದಾವಣಗೆರೆ ವಿವಿಯಲ್ಲಿ ಮಂಗಳವಾರ ನಡೆದ ಬಿಕಾಂ ಪದವಿ ಪರೀಕ್ಷೆಯಲ್ಲಿ ಸಿಬ್ಬಂದಿ ಯಡವಟ್ಟಿನಿಂದ ಪರಿಕ್ಷೇಯನ್ನು ಮೂಂದೂಡಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಕೊಡುವ ಬದಲು ಮಾದರಿ ಉತ್ತರ ಪತ್ರಿಕೆ ನೀಡಿದ್ದಾರೆ.

ನಿನ್ನೆ ನಡೆದಿದ್ದ ಬಿಕಾಂ ಪದವಿ ಪರೀಕ್ಷೆಯಲ್ಲಿ ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡುವ ಬದಲು ಮಾದರಿ ಉತ್ತರ ಪತ್ರಿಕೆ ನೀಡಿ ಸಿಬ್ಬಂದಿ ಗೊಂದಲ ಮೂಡಿಸಿದ್ದರು.‌ ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಬದಲಾಗಿ ಮಾದರಿ ಉತ್ತರವಿರುವ ಇರುವ ಪತ್ರಿಕೆ ನೋಡಿ ಒಂದು ಕ್ಷಣ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದರು.

ಮೌಲ್ಯಮಾಪನ ವೇಳೆ ಮೌಲ್ಯಮಾಪಕರಿಗೆ ನೀಡುವ ಉತ್ತರ ಪತ್ರಿಕೆಯ ಪ್ರತಿಯನ್ನು ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆ ಪತ್ರಿಕೆ ಕವರ್​ನಲ್ಲಿ ಇರಿಸಿದ್ದೇ ಗೊಂದಲಕ್ಕೆ ಕಾರಾಣವಾಗಿದೆ. ನಿನ್ನೆ ದಾವಣಗೆರೆ - ಚಿತ್ರದುರ್ಗ ವ್ಯಾಪ್ತಿಯಲ್ಲಿ ಒಟ್ಟು 500 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿತ್ತು. ದಾವಣಗೆರೆ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ 60 ಕಾಲೇಜುಗಳ ಪೈಕಿ 15 ಕಾಲೇಜುಗಳಲ್ಲಿ ನಡೆದ ಪರೀಕ್ಷೆಯಲ್ಲಿ ಗೊಂದಲ ಮೂಡಿತ್ತು.‌ ಉತ್ತರ ಪತ್ರಿಕೆ ನೋಡಿ ವಿದ್ಯಾರ್ಥಿಗಳು ಸಿಬ್ಬಂದಿಗೆ ಪ್ರಶ್ನೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.‌

ತಕ್ಷಣ ಗೊಂದಲದಿಂದ ಎಚ್ಚೆತ್ತ ದಾವಣಗೆರೆ ವಿವಿಯ ಸಿಬ್ಬಂದಿ ಪರೀಕ್ಷಾಂಗ ಕುಲಸಚಿವ ರಮೇಶ್​ ಅವರ ಗಮನಕ್ಕೆ ತಂದಿದ್ದರಿಂದ ಕುಲಸಚಿವರು ನಿನ್ನೆ ನಡೆಯಬೇಕಿದ್ದ ಪರೀಕ್ಷೆಯನ್ನು ತಡೆದು ಮುಂದೂಡಿದ್ದಾರೆ.

ತಪ್ಪಿತ್ಥರ ಮೇಲೆ ಸೂಕ್ತ ಕ್ರಮ - ಕುಲಸಚಿವ:"ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಪ್ರಶ್ನೆ ಪತ್ರಿಕೆಯ ಸೀಲ್ಡ್ ಕವರಿನಲ್ಲಿ‌ ಉತ್ತರ ಪತ್ರಿಕೆ ಸೆಟ್ ಹೋಗಿದೆ. ಈ ವೇಳೆ ಆ ಕವರ್​ನಲ್ಲಿ ಸ್ಕೀಂ ಆಫ್ ವ್ಯಾಲುವೇಷನ್ ಎಂದು ಪ್ರಿಂಟ್ ಆಗಿದೆ. ಅದು ಮಿಸ್ ಆಗಿ ವಿದ್ಯಾರ್ಥಿಗಳಿಗೆ ದೊರಕಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗುವುದು. ಎಲ್ಲಿ ತಪ್ಪಾಗಿದೆ ಎಂದು ವಿಚಾರಣೆ ನಡೆಸಿ ತಪ್ಪಿತ್ಥರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು" ಎಂದು ಪರೀಕ್ಷಾಂಗ ಕುಲಸಚಿವರಾದ ರಮೇಶ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಕನ್ನಡಿಗರಿಗೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿ ವಜಾ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.