ETV Bharat / state

ರೈತನಿಗೆ ಪ್ರವೇಶ ನಿರಾಕರಣೆ ಪ್ರಕರಣ: ಎಲ್ಲಾ ಮಾಲ್​ಗಳಿಗೂ ಸರ್ಕಾರದಿಂದ ಮಾರ್ಗಸೂಚಿ- ಡಿ.ಕೆ.ಶಿವಕುಮಾರ್ - DK Shivakumar - DK SHIVAKUMAR

ಪಂಚೆ ಉಟ್ಟುಕೊಂಡು ಬಂದಿದ್ದ ರೈತರೊಬ್ಬರಿಗೆ ಮಾಲ್‍ಗೆ ಪ್ರವೇಶ ನೀಡದ ವಿಚಾರ ಇಂದು ವಿಧಾಸಭೆಯಲ್ಲಿ ಚರ್ಚೆಯಾಗಿದ್ದು, ಎಲ್ಲಾ ಮಾಲ್​ಗಳಿಗೂ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಲು ಸೂಚಿಸುವುದಾಗಿ ಡಿಸಿಎಂ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್
ಡಿಸಿಎಂ ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : Jul 22, 2024, 3:36 PM IST

Updated : Jul 22, 2024, 4:40 PM IST

ಬೆಂಗಳೂರು: ರಾಜ್ಯಾದ್ಯಂತ ಇರುವ ಎಲ್ಲಾ ಮಾಲ್​ಗಳಿಗೂ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಲು ಸೂಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಪಂಚೆ ಉಟ್ಟುಕೊಂಡು ಬಂದಿದ್ದ ರೈತರೊಬ್ಬರಿಗೆ ಮಾಲ್‍ಗೆ ಪ್ರವೇಶ ನೀಡದ ಘಟನೆ ಸದನದಲ್ಲಿ ಚರ್ಚೆಯಾಗಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರದಿಂದಲೇ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಸದನದಲ್ಲಿ ಡಿಸಿಎಂ ಸ್ವಯಂ ಹೇಳಿಕೆ ನೀಡಿದರು. ಪಂಚೆ ಉಟ್ಟುಕೊಂಡು ಬಂದವರಿಗೆ ಯಾವುದೇ ಮಾಲ್‍ಗಳಲ್ಲಿ ಪ್ರವೇಶ ನಿರಾಕರಣೆ ಮಾಡಬಾರದು. ರೈತರಿಗೆ ಪ್ರವೇಶ ನೀಡದ ಮಾಲ್‍ಗೆ ನೋಟೀಸ್ ನೀಡಲಾಗಿತ್ತು.

ಆ ಮಾಲ್‍ನವರು ಕ್ಷಮೆ ಯಾಚಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದಾಗಿಯೂ ಹೇಳಿದ್ದಾರೆ. ಜತೆಗೆ ಮಾಲ್​ನ ತೆರಿಗೆ ಬಾಕಿ ಇತ್ತು. ಆ ಬಾಕಿ ಪಾವತಿಗೆ ಚೆಕ್ ಪಡೆದು ಮಾಲ್ ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‍ ಬಾಬು ಮಧ್ಯಪ್ರವೇಶಿಸಿ ಕ್ಲಬ್‍ಗಳಿಗೂ ಮಾರ್ಗಸೂಚಿ ತನ್ನಿ. ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯಬಾರದು ಎಂದರು. ಇದೆ ವೇಳೆ ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಮಾತನಾಡಿ, ಕ್ಲಬ್ ವಿಚಾರವನ್ನು ಮಾಲ್‍ಗಳೊಂದಿಗೆ ಮಿಶ್ರ ಮಡುವುದು ಬೇಡ ಎಂದರು. ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಮಾಲ್‍ಗೆ ಒಂದು ವಾರ ಬೀಗ ಹಾಕಿಸುತ್ತೇವೆ ಎಂದು ನಗರಾಭಿವೃದ್ಧಿ ಸಚಿವರು ಹೇಳಿದ್ದರು. ಬೀಗ ಹಾಕಿಸಿದ್ದರಾ ಎಂದು ಪ್ರಶ್ನಿಸಿದರು.

ಆಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮಾತನಾಡಿ, ಮಾಲ್‍ಗೆ ಬೀಗ ಹಾಕಿಸಲಾಗಿತ್ತು ಎಂದರು.
ಮತ್ತೆ ಅಶೋಕ್ ಮಾತನಾಡಿ, ಮಾಲ್‍ಗಳಿಗೆ ಪರವಾನಗಿ ಕೊಡುವಾಗಲೇ ಗ್ರಾಮೀಣ ಭಾಗದ ಉಡುಪು ಧರಿಸಿದವರಿಗೆ ಅವಕಾಶ ನಿರಾಕರಿಸಬಾರದು ಎಂಬ ಷರತ್ತು ವಿಧಿಸಬೇಕು. ಸರ್ಕಾರ ಜಮೀನು ಕೊಡುತ್ತದೆ. ಅನುಮತಿ ಕೊಟ್ಟಿರುವ ಕ್ಲಬ್‍ಗಳಿಗೂ ಇದು ಅನ್ವಯವಾಗಬೇಕು. ಈ ಸಂಬಂಧ ಎನ್. ಎ. ಹ್ಯಾರಿಸ್ ಮತ್ತು ಮಂಜು ಅಧ್ಯಕ್ಷತೆ ಸದನ ಸಮಿತಿಯ ವರದಿಗಳಿವೆ. ಆ ವರದಿಗಳ ಶಿಫಾರಸನ್ನು ಅನುಷ್ಠಾನಕ್ಕೆ ತನ್ನಿ ಎಂದು ಒತ್ತಾಯಿಸಿದರು.

ಆಡಳಿತ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ಅಶೋಕ್ ಹೇಳಿದ್ದು ಸರಿಯಿದೆ. ಸರ್ಕಾರದಿಂದಲೇ ಸುತ್ತೋಲೆ ಹೊರಡಿಸಬೇಕೆಂದು ಸಲಹೆ ನೀಡಿದರು.

ಇದನ್ನೂ ಓದಿ: ಪಂಚೆ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಣೆ: ಜಿಟಿ ಮಾಲ್ ಸ್ವಯಂಪ್ರೇರಿತ ಬಂದ್ - GT Mall Close

Last Updated : Jul 22, 2024, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.