ETV Bharat / state

ಈಶ್ವರಪ್ಪ ಪುತ್ರ ಕಾಂತೇಶ್​ಗೆ ಎಂಎಲ್ಸಿ ಸ್ಥಾನ: ಬಿ.ಎಸ್​ ಯಡಿಯೂರಪ್ಪ ಸುಳಿವು - yediyurappa about eshwarappa son

ಕೆ.ಎಸ್​ ಈಶ್ವರಪ್ಪ ಅವರ ಪುತ್ರ ಕಾಂತೇಶ್​ ಅವರನ್ನು ಎಂಎಲ್ಸಿ ಮಾಡುವ ಕುರಿತು ಹೈಕಮಾಂಡ್​ ಚಿಂತನೆ ನಡೆಸಿದೆ ಎಂದು ಬಿಎಸ್​ವೈ ತಿಳಿಸಿದ್ದಾರೆ.

ಈಶ್ವರಪ್ಪ ಪುತ್ರ ಕಾಂತೇಶ್​ಗೆ ಎಂಎಲ್ಸಿ ಸ್ಥಾನ: ಬಿ.ಎಸ್​ ಯಡಿಯೂರಪ್ಪ ಸುಳಿವು

author img

By ETV Bharat Karnataka Team

Published : Mar 14, 2024, 3:49 PM IST

Updated : Mar 14, 2024, 6:35 PM IST

ಪಕ್ಷದ ನಾಯಕರಿಗೆ ಯದುವೀರ್​ ಅಭಿನಂದನೆ

ಬೆಂಗಳೂರು: ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಪುತ್ರ ಕೆ.ಇ ಕಾಂತೇಶ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಆಲೋಚನೆ ಪಕ್ಷದ ಹೈಕಮಾಂಡ್ ನಾಯಕರಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಇಂದು ಭೇಟಿ ನೀಡಿದರು. ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಹಿನ್ನೆಲೆ ಯಲ್ಲಿ ಪಕ್ಷದ ಹಿರಿಯ ನಾಯಕರೂ ಆಗಿರುವ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಯದುವೀರ್​ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜಕುಟುಂಬದ ಯದುವೀರ್ ಅವರನ್ನು ಮೈಸೂರು ಕೊಡುಗು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಯದುವೀರ ಸ್ಪರ್ಧೆಯಿಂದ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಅನುಕೂಲ ಆಗಲಿದೆ. ಅವರು ಕೂಡಾ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಓಡಾಡಲು ಒಪ್ಪಿಕೊಂಡಿದ್ದಾರೆ, ಅವರು ಪಕ್ಷಕ್ಕೆ ಬಂದಿರುವುದು ದೊಡ್ಡ ಬಲ ಬಂದಂತಾಗಿದೆ ಎಂದರು.

ನಾವು ಈ ಬಾರಿ 25 ರಿಂದ 26 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹಾಕಿಕೊಂಡಿದ್ದೇವೆ. ಪಕ್ಷದ ಯೋಚನೆಯಂತೆ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಯದುವೀರ್ ಶಕ್ತಿಯೂ ಸಹಕಾರಿಯಾಗಲಿದೆ. ಅದಕ್ಕಾಗಿ ಪಕ್ಷದ ಪರವಾಗಿ ರಾಜ್ಯದ ಜನತೆಯ ಪರವಾಗಿ ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇನೆ ಎಂದರು. ಪ್ರತಾಪಸಿಂಹಗೆ ಟಿಕೆಟ್ ಕೈತಪ್ಪಿದ ವಿಚಾರದ ಬಗ್ಗೆ ಯಾವುದೇ ಪ್ರಶ್ನೆ ಕೇಳಬೇಡಿ ಎಲ್ಲರೂ ಸಮಾಧಾನಗೊಂಡಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಾರೆ ಎಂದರು.

ಯಡಿಯೂರಪ್ಪ ನುಡಿದಂತೆ ನಡೆಯಲಿಲ್ಲ ಎನ್ನುವ ಬೇಸರವನ್ನು ಈಶ್ವರಪ್ಪ ಹೊರಹಾಕಿರುವುದು ತಮ್ಮ ಗಮನದಲ್ಲಿದೆ. ಅವರ ಜೊತೆ ಮಾತಾಡುತ್ತೇನೆ, ಹೈಕಮಾಂಡ್ ಕೂಡ ಮಾತನಾಡಲಿದೆ. ಅವರೂ ಸರಿ ಹೋಗುತ್ತಾರೆ ಅವರ ಮಗನಿಗೆ ಎಂಎಲ್ಸಿ ಮಾಡುವ ಬಗ್ಗೆ ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ತಿಳಿಸಿದರು.

ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಮಾತನಾಡಿ, ಅವಕಾಶ ನೀಡಿದ ಕೇಂದ್ರದ ನಾಯಕರು ರಾಜ್ಯದ ನಾಯಕರಿಗೆ ಧನ್ಯವಾದಗಳು, ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವುದು ಸೌಭಾಗ್ಯ, 9 ವರ್ಷ ಮೈಸೂರಿನ ಅರಮನೆ ಜವಾಬ್ದಾರಿ ಹೊತ್ತಿದ್ದೇನೆ. ಎಲ್ಲ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾಗಿದ್ದೇನೆ. ಜನರು ಕೂಡ ನನ್ನನ್ನು ಸ್ವಾಗತ ಮಾಡಿದ್ದಾರೆ. ಅದಕ್ಕಾಗಿ ನಾನು ಚಿರಋಣಿಯಾಗಿದ್ದೇನೆ. ಅವರ ಋಣ ತೀರಿಸಲು ಒಂದು ಅವಕಾಶ ಸಿಕ್ಕಿದೆ ಎಂದರು.

ರಾಜಕೀಯ ಪ್ರವೇಶದ ಕುರಿತು ನಾನು ಒಂದು ವರ್ಷದ ಹಿಂದೆಯೇ ತೀರ್ಮಾನ ಮಾಡಿದ್ದೆ. ವೈಯಕ್ತಿಕವಾಗಿ ಕೂಡ ಅಭಿವೃದ್ಧಿ ಮಾಡಬಹುದು. ಆದರೆ, ಉತ್ತಮ ಸರ್ಕಾರ ಇದ್ದರೆ ಮತ್ತಷ್ಟು ಅಭಿವೃದ್ಧಿಗೆ ಅನುಕೂಲ ಆಗಲಿದೆ. ನೀತಿ ನಿಯಮಗಳ ಮೂಲಕ ಒಳ್ಳೆಯ ಅಭಿವೃದ್ಧಿ ಮಾಡಬಹುದು ಅದಕ್ಕಾಗಿ ರಾಜಕೀಯಕ್ಕೆ ಬಂದಿದ್ದೇನೆ. ನನ್ನ ನಂಬಿಕೆ ಹಾಗೂ ಬಿಜೆಪಿಯವರು ದೇಶಕ್ಕೆ ನೀಡಿರುವ ಅಭಿವೃದ್ಧಿ ಕೆಲಸ ನನ್ನನ್ನು ಸೆಳೆದಿದೆ ಎಂದರು.

ಎಸಿ ಕೊಠಡಿಯಲ್ಲಿದ್ದರೆ ಸಾಲದು ಹೊರಗಡೆ ಬಂದು ಕೆಲಸ ಮಾಡಬೇಕು ಎನ್ನುವ ಟೀಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಲ್ಲವನ್ನು ಜೀವನದಲ್ಲಿ ಸ್ವೀಕರಿಸಬೇಕು. ಅರಮನೆಯಲ್ಲಿದ್ದರೆ ಇಂತಹ ಟೀಕೆ ಬರುವುದಿಲ್ಲ ಅಂತಾ ಏನಿಲ್ಲ. ಅದು ಹೊರಗಡೆ ಗೊತ್ತಾಗಲ್ಲ ಅಷ್ಟೆ, ಆದರೆ ಸಾರ್ವಜನಿಕ ಜೀವನದಲ್ಲಿ ಟೀಕೆ ಸ್ವಲ್ಪ ಹೆಚ್ಚಾಗಿರಲಿದೆ, ಎಲ್ಲವನ್ನೂ ಎದುರಿಸಬೇಕು, ಎಲ್ಲವನ್ನೂ ನುಂಗಿಕೊಂಡು ಹೋಗಬೇಕು. ಜನರು ಅವಕಾಶ ಕೊಟ್ರೆ ಮೈಸೂರು - ಕೊಡಗು ಅಭಿವೃದ್ಧಿ ಮಾಡುತ್ತೇನೆ. ಚುನಾವಣೆಯಲ್ಲಿ ಮೈಸೂರು ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುವ ಜವಾಬ್ದಾರಿ ಹೊರಲು ಸಿದ್ದನಿದ್ದೇನೆ ಎಂದರು.

ಇದನ್ನೂ ಓದಿ: ಟಿಕೆಟ್ ಸಿಕ್ಕಿದ್ದಕ್ಕೆ ಪ್ರತಾಪ್​ ಸಿಂಹಗೆ ಒಡೆಯರ್​ ಧನ್ಯವಾದ; ಜನ ಸೇವೆ ಮಾಡಲು ಅವಕಾಶ ಕೊಡಿ ಎಂದ ಯದುವೀರ್

Last Updated : Mar 14, 2024, 6:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.