ETV Bharat / state

ಅಂಬೇಡ್ಕರ್ ತತ್ವ ಸಿದ್ಧಾಂತಗಳನ್ನು ತೆಗೆಯುವ ಹುಚ್ಚು ಸಾಹಸಕ್ಕೆ ಕೆಲವರು ತಯಾರಾಗಿದ್ದಾರೆ: ದಿಂಗಾಲೇಶ್ವರ ಶ್ರೀ - DINGALESHWAR SEER - DINGALESHWAR SEER

ಭಾರತ ರತ್ನ ಡಾ.ಬಿ‌.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ತೆಗೆದುಹಾಕುವ ಹುಚ್ಚು ಸಾಹಸಕ್ಕೆ ಕೆಲವರು ತಯಾರಾಗಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ತಿಳಿಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Apr 14, 2024, 1:58 PM IST

ಅಂಬೇಡ್ಕರ್ ತತ್ವಸಿದ್ದಾಂತಗಳನ್ನು ತೆಗೆದು ಹಾಕುವ ಹುಚ್ಚು ಸಾಹಸಕ್ಕೆ ಕೆಲವರು ತಯಾರಾಗಿದ್ದಾರೆ

ಹುಬ್ಬಳ್ಳಿ: ಡಾ.ಬಿ‌.ಆರ್ ಅಂಬೇಡ್ಕರ್ ಅವರ ಆದರ್ಶಗಳು ಸೂರ್ಯ ಚಂದ್ರ ಇರೋವರೆಗೆ ಇರುತ್ತವೆ. ಆದರೆ ಕೆಲವರು ಅವರ ತತ್ವ ಸಿದ್ಧಾಂತಗಳನ್ನು ತೆಗೆದುಹಾಕುವ ಹುಚ್ಚು ಸಾಹಸಕ್ಕೆ ತಯಾರಾಗಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಶಿರಹಟ್ಟಿಯ ಫಕೀರ್ ದಿಂಗಾಲೇಶ್ವರ ಶ್ರೀಗಳು ಕಿಡಿಕಾರಿದರು.

ಡಾ.ಬಿ.ಆರ್ ಅಂಬೇಡ್ಕರ್ ಅವರ 133 ನೇ ಜನ್ಮದಿನದ ಅಂಗವಾಗಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ದಿಂಗಾಲೇಶ್ವರ ಶ್ರೀಗಳು ಮಾತನಾಡಿದರು. ಯಾರು ಸಂವಿಧಾನ ಬದಲಾವಣೆ ಮಾಡುವ ಹುಚ್ಚು ಸಾಹಸಕ್ಕೆ ಕೈಹಾಕಿದ್ದಾರೆ, ಅವರೇ ಬದಲಾವಣೆ ಆಗುವ ಸನಿಹ ಬಂದಿದೆ. ವೇದಿಕೆಯಲ್ಲಿ ಅಂಬೇಡ್ಕರ್ ಹೊಗಳಿ ಮನಸ್ಸಿನಲ್ಲಿ ಒಂದು, ಬಾಯಲ್ಲಿ ಒಂದು ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ಮತದಾರರೇ ಅಗ್ರಗಣ್ಯ ನಾಯಕರನ್ನು ತೆಗೆದು ಹಾಕಲಿದ್ದಾರೆ ಎಂದರು.

ಈಗಾಗಲೇ ಮತದಾರರಲ್ಲಿ ಜಾಗೃತ ಸಭೆಯನ್ನು ಮಾಡುತ್ತಿದ್ದೇನೆ. ಅದರಂತೆ ಇಂದು ಸವಣೂರು, ಶಿಗ್ಗಾಂವಿಯಲ್ಲಿ ಮತದಾರರ ಸಭೆ ನಡೆಸುತ್ತಿದ್ದೇನೆ ಎಂದು ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಮೋದಿ ಅವರು ದೇಶ ಮತ್ತು ಬದುಕು ಕಟ್ಟುವ ಗ್ಯಾರಂಟಿ - ಬೊಮ್ಮಾಯಿ : ಮತ್ತೊಂದೆಡೆ ಅಂಬೇಡ್ಕರ್ ಪುತ್ಥಳಿ ಬಳಿ ಮಾತನಾಡಿದ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ, ನರೇಂದ್ರ ಮೋದಿ ಅವರು ಶಾಶ್ವತ ಗ್ಯಾರಂಟಿ. ದೇಶ ಮತ್ತು ಬದುಕು ಕಟ್ಟುವ ಗ್ಯಾರಂಟಿಯಾಗಿದೆ. ಜನರ ಅಭಿಪ್ರಾಯಗಳನ್ನು ಪಡೆದು ಜವಾಬ್ದಾರಿಯಿಂದ ನಾವು ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಮತ್ತೊಮ್ಮೆ ಅದನ್ನು ಜನರ ಮುಂದಿಟ್ಟು ಚರ್ಚಿಸಲಾಗುವುದು ಎಂದು ತಿಳಿಸಿದರು.

ಬಡಜನ ವಿರೋಧಿ ಸರ್ಕಾರದ ವಿರುದ್ಧ ಚುನಾವಣೆ - ಅಬ್ಬಯ್ಯ ಪ್ರಸಾದ್ : ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ, ಅನಂತಕುಮಾರ್ ಹೆಗಡೆ ಅಂತವರು ಸಂವಿಧಾನವನ್ನೇ ಬದಲಾವಣೆ ಮಾಡುವ ಹೇಳಿಕೆ ಕೊಡುತ್ತಾರೆ. ಅಂಬೇಡ್ಕರ್ ನೀಡಿದ ಸಂವಿಧಾನದಲ್ಲಿ ಸಂಸದರಾದವರು ಇದೀಗ ಅವರಿಗೆ ಅಗೌರವ ಸೂಚಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ದೇಶದಲ್ಲಿ ಶೋಷಿತರು, ದಲಿತರು, ಹಿಂದುಳಿದ ಜನಾಂಗವನ್ನು ತುಳಿಯುವ ಕೆಲಸಕ್ಕೆ ಮುಂದಾಗುತ್ತಿದ್ದು, ಅದು ನಿಲ್ಲಬೇಕಾಗಿದೆ. ಇದೀಗ ಸಂವಿಧಾನ ಬದಲಾವಣೆ ಮಾಡಲು ಮುಂದಾಗಿರುವವರಿಗೆ ಸಂವಿಧಾನ ಅಂದ್ರೆ ಏನೂ? ಅಂಬೇಡ್ಕರ್ ಅಂದ್ರೆ ಏನೂ ಅಂತ ಗೊತ್ತಿಲ್ಲ, ಆದರೆ ಅವರೆಲ್ಲರೂ ಸಂಸದರಾಗಿರುವುದು ಸಂವಿಧಾನದ ಅಡಿಯಲ್ಲಿ ಎಂದು ವಾಗ್ದಾಳಿ ನಡೆಸಿದರು.

ಎಲ್ಲರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉತ್ತಮ ಯೋಜನೆಗಳನ್ನು ಉತ್ತಮ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಗ್ಯಾರಂಟಿ ಸರ್ಕಾರ, ರಾಜ್ಯ ಸರ್ಕಾರ ದಿವಾಳಿಯಾಗಲಿದೆ ಎಂದು ಹೇಳಿಕೆ ನೀಡಿದವರೇ ಇಂದು ಗ್ಯಾರಂಟಿಗಳನ್ನು ಕಾಫಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಪ್ರಣಾಳಿಕೆಯನ್ನು ಲೇವಡಿ ಮಾಡಿದರು.

ಇದನ್ನೂ ಓದಿ : ದೋಸ್ತಿಗಳ ಒಗ್ಗಟ್ಟು ಪ್ರದರ್ಶನದ ಮೂಲಕ ಕಾರ್ಯಕರ್ತರ ಭಿನ್ನಮತ ನಿವಾರಣೆಗೆ ಎನ್‌ಡಿಎ ಮೈತ್ರಿಕೂಟ ತಂತ್ರ? - PM Modi campaign

ETV Bharat Logo

Copyright © 2024 Ushodaya Enterprises Pvt. Ltd., All Rights Reserved.