ETV Bharat / state

ಜೋಶಿ ವಿರುದ್ಧ ನನ್ನ ಧರ್ಮಯುದ್ಧ, ಜಯ ಸಿಗುವವರೆಗೂ ಮಾಲೆ ಧರಿಸಲ್ಲ: ದಿಂಗಾಲೇಶ್ವರ ಶ್ರೀ - Dingaleshwar Swamiji - DINGALESHWAR SWAMIJI

ನಾನು ನಾಮಪತ್ರ‌ ಮಾತ್ರ ವಾಪಸ್ ತೆಗೆದುಕೊಂಡಿದ್ದೇನೆ. ಆದರೆ ಜೋಶಿ ವಿರುದ್ಧ ಧರ್ಮಯುದ್ದ ಮುಂದುವರೆಯುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

PRESS CONFERENCE  WITHDRAWING NOMINATION PAPERS  DHARWAD  LOK SABHA ELECTION 2024
ದಿಂಗಾಲೇಶ್ವರ ಸ್ವಾಮೀಜಿ
author img

By ETV Bharat Karnataka Team

Published : Apr 22, 2024, 5:14 PM IST

Updated : Apr 22, 2024, 8:02 PM IST

ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ

ಹುಬ್ಬಳ್ಳಿ: ನಾನು ಲೋಕಸಭೆ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ವಾಪಸ್ ಪಡೆದಿದ್ದೇನೆ. ಆದರೆ ಜೋಶಿ ವಿರುದ್ಧ ಧರ್ಮಯುದ್ಧದಿಂದ ಹಿಂದೆ ಸರಿದಿಲ್ಲ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಗುರುಗಳ ಸೂಚನೆಯಂತೆ ನಾಮಪತ್ರ ವಾಪಸ್: ಮೋಹನ ಲಿಂಬಿಕಾಯಿ ನಿವಾಸದಲ್ಲಿ ಇಂದು ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆಯ ನಂತರವೂ ಎರಡು ಪಕ್ಷದ ನಾಯಕರು ನಮ್ಮೊಂದಿಗೆ ಚರ್ಚಿಸಿದ್ದರು. ನಿನ್ನೆ ಸಿಎಂ, ಡಿಸಿಎಂ, ಮಾಜಿ ಸಿಎಂ ಕೂಡ ಮಾತಾಡಿದ್ದರು. ಎಲ್ಲ ವಿಚಾರಕ್ಕೆ ನಾನು ಉತ್ತರ ಕೊಟ್ಟಿದ್ದೆ. ನಮ್ಮ ಗುರುಗಳು ನನಗೆ ನಾಮಪತ್ರ ವಾಪಸ್ ಪಡೆಯಲು ಸೂಚನೆ ಕೊಟ್ಟಿದ್ದರು. ಹೀಗಾಗಿ ವಾಪಸ್ ಪಡೆದಿದ್ದೇನೆ. ಚುನಾವಣೆ ಒಂದನ್ನು ಹೊರತುಪಡಿಸಿ ಎಲ್ಲ ವಿಚಾರದಲ್ಲೂ ಧರ್ಮಯುದ್ಧ ಮುಂದುವರೆಯುತ್ತದೆ ಎಂದರು.

ಧರ್ಮಯುದ್ಧದಲ್ಲಿ ಜಯ ಸಿಗುವವರೆಗೂ ಮಾಲೆ ಧರಿಸಲ್ಲ: ಎರಡೂ ಪಕ್ಷದವರೂ ತಮ್ಮನ್ನು ಬೆಂಬಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಯಾರು ನನಗೆ ಸಪೋರ್ಟ್ ಮಾಡಿದ್ದರೋ ಅವರ ಜೊತೆ ನಾನು ಸಭೆ ಮಾಡ್ತೀನಿ. ರಾಜಕೀಯದಲ್ಲಿ ಬದಲಾವಣೆ ಸರ್ವೇ ಸಾಮಾನ್ಯ. ನನ್ನನ್ನು ಹಿಂದೆ ಸರಿಸುವ ವ್ಯಕ್ತಿ ರಾಜಕೀಯ ರಂಗದಲ್ಲಿ‌ಲ್ಲ ಎಂದಿದ್ದೆ. ಈಗಲೂ ಅದಕ್ಕೆ ನಾನು ಬದ್ಧ. ನಾನು ರಾಜಕೀಯ ನಾಯಕರ ಮಾತು ಕೇಳಿ ನಾಮಪತ್ರ ವಾಪಸ್ ಪಡೆದಿಲ್ಲ. ನನ್ನ ಗುರಿ ಮುಟ್ಟುವವರೆಗೂ ಹೂಮಾಲೆ ಧರಿಸುವುದಿಲ್ಲ. ಧರ್ಮಯುದ್ಧದಲ್ಲಿ ಜಯ ಸಿಗುವವರೆಗೂ ಮಾಲೆ ಧರಿಸಲ್ಲ ಎಂದು ಹೇಳಿದರು.

ನಾನು ಬಿಜೆಪಿ ಅಭ್ಯರ್ಥಿಯನ್ನು ವಿರೋಧಿಸಿದ್ದೇನೆ. ರಾಜ್ಯದ ನಾಯಕರು ಅವರ ಪರ ಮಾತಾಡಿದರು. ನಿನ್ನೆ ಮಧ್ಯರಾತ್ರಿ ನನ್ನೊಂದಿಗೆ ಬಿಜೆಪಿ ಶಾಸಕರಿದ್ದರು. ನನ್ನನ್ನು ಬೆಂಬಲಿಸಿದ ಯಾವುದೇ ವ್ಯಕ್ತಿಯನ್ನು ನಾನು ಬಿಟ್ಟುಕೊಡಲ್ಲ. ಬಿಟ್ಟುಕೊಡುವ ಪ್ರಸಂಗವೇ ಬರಲ್ಲ. ಅವರನ್ನು ರಕ್ಷಣೆ ಮಾಡುವ ತಾಕತ್ ನನಗಿದೆ ಎಂದು ತಿಳಿಸಿದರು.

ಯತ್ನಾಳ್‌ದು ಬ್ರೈನ್‌ಲೆಸ್ ಬಾಡಿ: ಬಸನಗೌಡ ಪಾಟೀಲ್ ಯತ್ನಾಳ್ ಮಾಡಿರುವ 'ಪೇಮೆಂಟ್ ಸ್ವಾಮೀಜಿ' ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ಪೇಮೆಂಟ್ ಗಿರಾಕಿ ಎಂದು ನಾನು ನಾಮ‌ಪತ್ರ ವಾಪಸ್ ಪಡೆಯುವ ಮುಂಚೆ ಹೇಳಿದ್ದಾರೆ. ಅವರ ಲೆವಲ್ ರಾಜ್ಯಕ್ಕೆ ಗೊತ್ತಿದೆ. ಅವರು ತಮ್ಮ ಪಕ್ಷದ ವಿರುದ್ದವೇ ಮಾತಾಡ್ತಾರೆ. ಒಬ್ಬ ನಾಯಕನೂ ಅವರ ಬಾಯಿಗೆ ಲಗಾಮ್ ಹಾಕೋ ಕೆಲಸ ಮಾಡಿಲ್ಲ. ಯತ್ನಾಳ್‌ದು ಬ್ರೈನ್‌ಲೆಸ್ ಬಾಡಿ ಎಂದು ವಾಗ್ದಾಳಿ ನಡೆಸಿದರು.

ಹಣಕ್ಕಾಗಿ ಚುನಾವಣೆಗೆ ನಿಲ್ಲಲು ಕೆಲವರು ಇರ್ತಾರೆ. ಆದ್ರೆ ನನಗೆ ಹಣದ ಅವಶ್ಯಕತೆ ಇಲ್ಲ. ಹಣದ ಆರೋಪ ಮಾಡಿದವರು, ಭೂಮಿ ಮೇಲೆ ಹಣ ಕೊಟ್ಟವರು ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: ಲೋಕಸಭಾ ಅಖಾಡದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ: ನಾಮಪತ್ರ ವಾಪಸ್ - Dingaleshwar Swamiji

Last Updated : Apr 22, 2024, 8:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.