ETV Bharat / state

ಸೋಮನಹಳ್ಳಿಗೆ ಆಗಮಿಸಿದ ಎಸ್.​ಎಂ. ಕೃಷ್ಣ ಪಾರ್ಥಿವ ಶರೀರ: ಅಂತಿಮ ದರ್ಶನ ಪಡೆದ ಗಣ್ಯರು - SM KRISHNA

ಸೋಮನಹಳ್ಳಿಗೆ ಎಸ್.​ಎಂ. ಕೃಷ್ಣ ಅವರ ಪಾರ್ಥಿವ ಶರೀರ ಆಗಮಿಸಿದ್ದು, ಗಣ್ಯರು ಅವರ ಅಂತಿಮ ದರ್ಶನ ಪಡೆದುಕೊಂಡರು.

SM KRISHNA
ಎಸ್.​ಎಂ. ಕೃಷ್ಣ ಅವರ ಪಾರ್ಥಿವ ಶರೀರ (ETV Bharat)
author img

By ETV Bharat Karnataka Team

Published : Dec 11, 2024, 4:20 PM IST

ಮಂಡ್ಯ: ಅಗಲಿದ ಮಾಜಿ ಸಿಎಂ ಎಸ್.​ಎಂ. ಕೃಷ್ಣ ಅವರ ಪಾರ್ಥಿವ ಶರೀರ ಹೊತ್ತ ವಾಹನ ಸೋಮನಹಳ್ಳಿಗೆ ಆಗಮಿಸಿದ್ದು, ಅಂತ್ಯಕ್ರಿಯೆ ಸ್ಥಳದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ.

ಕುಟುಂಬಸ್ಥರಿಂದ ವೈದಿಕ ಪೂಜಾ ವಿಧಿ ವಿಧಾನ ನಡೆಯುತ್ತಿದ್ದು, ಕುಟುಂಬಸ್ಥರು ಸೇರಿದಂತೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಹೆಚ್.ಸಿ.ಮಹದೇವಪ್ಪ. ಆರ್.ಬಿ. ತಿಮ್ಮಾಪುರ್, ಹೆಚ್.​ಕೆ. ಪಾಟೀಲ್, ಕೆ.ಹೆಚ್​. ಮುನಿಯಪ್ಪ, ಬಿಜೆಪಿ ನಾಯಕರಾದ ಆರ್.ಅಶೋಕ್, ಮಾಜಿ ಸಂಸದೆ ಸುಮಲತಾ ಅಂಬರೀಶ್, ಸಿಟಿ ರವಿ, ಕೆ.ಸಿ.ನಾರಾಯಾಣಗೌಡ, ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ, ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್​ ಅಶೋಕ್​ ಶಾಸಕ ಅಶ್ವತ್ಥ ನಾರಾಯಣ, ಮಾಜಿ ಸಚಿವ ಪುಟ್ಟರಾಜು, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿ ಹಲವರು ಅಂತ್ಯಕ್ರಿಯೆ ಸ್ಥಳದಲ್ಲಿ ಹಾಜರಿದ್ದಾರೆ.

ಅಂತಿಮ ದರ್ಶನ ಪಡೆದ ಗಣ್ಯರು (ETV Bharat)

ಚಿತೆ ಸಿದ್ದಪಡಿಸುವ ಹಾಗೂ ಕಟ್ಟಿಗೆ ಜೋಡಿಸುತ್ತಿರುವ ಕಾರ್ಯ ಆರಂಭಗೊಂಡಿದೆ. ವಿವಿಧ ಕಟ್ಟಿಗೆ ಜೋಡಿಸಿದ ಚಿತೆ ಬಳಿಕ ಶ್ರೀಗಂಧ ಹಾಕಲಾಗುತ್ತದೆ. ಅಂತಿಮ ದರ್ಶನಕ್ಕೆ ಆಗಮಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಆಗಮಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಏಕಗವಾಕ್ಷಿ ಪದ್ಧತಿ ಜಾರಿಗೆ ತಂದ ರೂವಾರಿ ಎಸ್.ಎಂ.ಕೃಷ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.