ETV Bharat / state

ಮಾಜಿ ಯೋಧರಿಗಾಗಿ ಬೆಂಗಳೂರಿನಲ್ಲಿ ಇಂದು ಉದ್ಯೋಗ ಮೇಳ - Job Fair For Ex Servicemen - JOB FAIR FOR EX SERVICEMEN

ಬೆಂಗಳೂರಿನ ಜಾಲಹಳ್ಳಿಯ ವಾಯುಪಡೆ ನಿಲ್ದಾಣ ಹಾಗೂ ಜಾಲಹಳ್ಳಿ ಪೂರ್ವ (ಸಿಟಿಐ ಸಮೀಪ) ಪ್ರದೇಶದಲ್ಲಿ ಮಾಜಿ ಯೋಧರಿಗಾಗಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

Ministry of Defence  Job fair  Bengaluru
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 19, 2024, 8:56 AM IST

ಬೆಂಗಳೂರು: ಮಾಜಿ ಯೋಧರಿಗಾಗಿ ಇಂದು ಜಾಲಹಳ್ಳಿಯ ವಾಯುಪಡೆ ನಿಲ್ದಾಣ (ಎಂಟಿ ಕಾಂಪ್ಲೆಕ್ಸ್) ಮತ್ತು ಜಾಲಹಳ್ಳಿ ಪೂರ್ವ (ಸಿಟಿಐ ಸಮೀಪ) ಪ್ರದೇಶದಲ್ಲಿ ರಕ್ಷಣಾ ಸಚಿವಾಲಯದ ಡೈರೆಕ್ಟರ್‌ ಜನರಲ್‌ ರಿಸೆಟ್ಲ್‌ಮೆಂಟ್‌ (ಡಿಜಿಆರ್) ಉದ್ಯೋಗ ಮೇಳ ಆಯೋಜಿಸಿದೆ.

ನಿವೃತ್ತ ಯೋಧರಿಗೆ ಎರಡನೇ ಅವಕಾಶ ಕಲ್ಪಿಸುವುದು ಮತ್ತು ಉದ್ಯೋಗದಾತರ ನಡುವೆ ಸಂಪರ್ಕ ಕಲ್ಪಿಸುವುದು ಈ ಮೇಳದ ಉದ್ದೇಶ.

Ministry of Defence  Job fair  Bengaluru
ಡಿಜಿಆರ್ ಪ್ರಕಟಣೆ (ETV Bharat)

ಮಾಜಿ ಸೈನಿಕರ ನೋಂದಣಿ ಬೆಳಿಗ್ಗೆ 7ರಿಂದ 10ರವರೆಗೆ ಸ್ಥಳದಲ್ಲಿಯೇ ನಡೆಯುತ್ತದೆ. ನೋಂದಾಯಿಸಲು, ಇಎಸ್​ಎಂ ತಮ್ಮ ಇಎಸ್ಎಂ ಗುರುತಿನ ಚೀಟಿ ಹಾಗೂ ಇತ್ತೀಚಿನ ಸಿವಿ ಅಥವಾ ಸ್ವವಿವರ (ಬಯೋಡೇಟಾ) ಹೊಂದಿದ ಐದು ಪ್ರತಿಗಳನ್ನು ಛಾಯಾಚಿತ್ರದೊಂದಿಗೆ ತರಬೇಕು.

ಉದ್ಯೋಗಾಕಾಂಕ್ಷಿ ಇಎಸ್​ಎಂಗಳು ಬಹುಬಗೆಯ ಉದ್ಯೋಗಾವಕಾಶಗಳು ಮತ್ತು ಅಡತಡೆರಹಿತ ನೇಮಕ ಪ್ರಕ್ರಿಯೆಗಳನ್ನು ಪಡೆಯುತ್ತಾರೆ. ವಿವಿಧ ಕಾರ್ಪೊರೇಟ್‌ ಸಂಸ್ಥೆಗಳು ಸಂದರ್ಶನ/ಪರಿಶೀಲನೆ ಮತ್ತು ನಂತರ ಹಿರಿಯ ಮೇಲ್ವಿಚಾರಕರು, ಮಧ್ಯಮ/ಹಿರಿಯ ಮಟ್ಟದ ವ್ಯವಸ್ಥಾಪಕರಿಂದ ಹಿಡಿದು ಕಾರ್ಯತಂತ್ರದ ಯೋಜಕರು ಮತ್ತು ಯೋಜನಾ ನಿರ್ದೇಶಕರವರೆಗಿನ ನೇಮಕಾತಿಗಳಲ್ಲಿ ಇಎಸ್ಎಂ ಅನ್ನು ಬಳಸಿಕೊಳ್ಳಲಿದ್ದಾರೆ ಎಂದು ಸೇನಾ ಪ್ರಕಟಣೆ ತಿಳಿಸಿದೆ.

ಕಂಪನಿ/ಕಾರ್ಪೋರೇಟ್ ಸಂಸ್ಥೆಗಳು/ಉದ್ಯೋಗದಾತರು ಆನ್​ಲೈನ್ ಮೂಲಕ ನೋಂದಣಿ ಮಾಡಿಕೊಂಡು ತಮ್ಮ ಸ್ಟಾಲ್​ಗಳನ್ನು www.dgrindia.gov.inನಲ್ಲಿ ಕಾಯ್ದಿರಿಸಬಹುದು. ಪ್ರಶ್ನೆಗಳಿದ್ದರೆ, ಜಂಟಿ ನಿರ್ದೇಶಕರು (ಎಸ್ ಇ ಮತ್ತು ಸಿಐ), ಡೈರೆಕ್ಟರ್‌ ಜನರಲ್ ರಿಸೆಟ್ಲ್‌ಮೆಂಟ್, ವೆಸ್ಟ್ ಬ್ಲಾಕ್ IV, ಆರ್.ಕೆ.ಪುರಂ, ನವದೆಹಲಿ 110066 ಅಥವಾ ದೂರವಾಣಿ ಸಂಖ್ಯೆ 011- 20862542 ಅಥವಾ seopadgr@desw.gov.in, drzspne@desw.gov.in ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಜರ್ಮನಿಯಲ್ಲಿ ನರ್ಸಿಂಗ್ ಉದ್ಯೋಗಾವಕಾಶ: ಶಿವಮೊಗ್ಗ ಕಾರ್ಮಿಕ ಅಧಿಕಾರಿ ಕಚೇರಿಯಲ್ಲಿ ನೋಂದಣಿಗೆ ಅವಕಾಶ - nursing jobs in Germany

ETV Bharat Logo

Copyright © 2025 Ushodaya Enterprises Pvt. Ltd., All Rights Reserved.