ETV Bharat / state

ಸೈಬರ್, ಡ್ರಗ್ಸ್ ಪ್ರಕರಣ ಭೇದಿಸಲು ಹೆಚ್ಚಿನ ಒತ್ತು: ಡಿಜಿಪಿ ಅಲೋಕ್ ಮೋಹನ್ - ರಾಜ್ಯ ಪೊಲೀಸ್ ಮಹಾನಿರ್ದೇಶಕ

ಸೈಬರ್ ಹಾಗೂ ಡ್ರಗ್ಸ್ ಪ್ರಕರಣಗಳನ್ನ ಹತ್ತಿಕ್ಕಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಹೇಳಿದ್ದಾರೆ.

ಡಿಜಿಪಿ ಅಲೋಕ್ ಮೋಹನ್ ಮಾಧ್ಯಮಗೋಷ್ಠಿ
ಡಿಜಿಪಿ ಅಲೋಕ್ ಮೋಹನ್ ಮಾಧ್ಯಮಗೋಷ್ಠಿ
author img

By ETV Bharat Karnataka Team

Published : Jan 25, 2024, 10:14 PM IST

ಬೆಂಗಳೂರು:‌ ವರ್ಷದಿಂದ ವರ್ಷಕ್ಕೆ ರಾಜಧಾನಿ ಮಾತ್ರವಲ್ಲದೇ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಸೈಬರ್ ಪ್ರಕರಣಗಳು ದಾಖಲಾಗುತ್ತಿದ್ದು, ಇದನ್ನ ಭೇದಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಮಾದಕ ಮುಕ್ತ ರಾಜ್ಯ ಮಾಡಲು ಹೆಚ್ಚು ಒತ್ತು ನೀಡುತ್ತಿದ್ದು, ಇದಕ್ಕೆ ಪೂರಕ ಎಂಬಂತೆ ಪೊಲೀಸರಿಗೆ ಸೈಬರ್ ತರಬೇತಿ ಹಾಗೂ ಆಯಕಟ್ಟಿನಲ್ಲಿ ಹೆಚ್ಚುವರಿ ಹುದ್ದೆಗಳನ್ನ ಸೃಷಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸೈಬರ್ ಹಾಗೂ ಡ್ರಗ್ಸ್ ಪ್ರಕರಣಗಳನ್ನ ಹತ್ತಿಕ್ಕಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಲೋಕ್ ಮೋಹನ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ‌ ಇನ್​ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಐಪಿಎಸ್ ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳೊಂದಿಗೆ ಅಪರಾಧ ಪರಾಮರ್ಶೆ ಸಭೆ ನಡೆಸಿದರು. ನಗರದಲ್ಲಿ ಬೀಟ್ ವ್ಯವಸ್ಥೆ ಹೆಚ್ಚಳ, ಮಹಿಳಾ‌ ಹಾಗೂ ಮಕ್ಕಳ‌ ಮೇಲಿನ ಪ್ರಕರಣ ಸಂಬಂಧ ತ್ವರಿತಗತಿ ತನಿಖೆ, ರೌಡಿಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಲೋಕ್ ಮೋಹನ್, ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಮಾತ್ರವಲ್ಲದೇ ದೇಶ - ವಿದೇಶಗಳಲ್ಲಿ ಸೈಬರ್ ಅಪರಾಧ‌ ಹೆಚ್ಚಾಗಿವೆ. ಈ ಹಿಂದೆ‌ ಸೆನ್ ಠಾಣೆಯಲ್ಲಿ ಸುಮಾರು 500 ಕೇಸ್​ಗಳು ದಾಖಲಾಗುತ್ತಿದ್ದ ಜಾಗದಲ್ಲಿ‌ ಇಂದು ಸುಮಾರು 4 ರಿಂದ 5 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಇಷ್ಟು ಪ್ರಕರಣಗಳನ್ನ ಭೇದಿಸುವುದು ಸೆನ್ ಠಾಣೆ ಪೊಲೀಸರಿಗೆ ಆಗದ ಮಾತು. ಹೀಗಾಗಿ ಕಳೆದ ಆರು ತಿಂಗಳಿಂದ ಸೈಬರ್ ಸಂಬಂಧಿತ ಪ್ರಕರಣಗಳನ್ನ ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ‌ ಕೇಸ್ ದಾಖಲಿಸಲಾಗುತ್ತಿದೆ.

ಸೆನ್ ಠಾಣೆಯಲ್ಲಿ ಹೆಚ್ಚುವರಿಯಾಗಿ ಡಿವೈಎಸ್ಪಿ ಸೃಷ್ಟಿಸಲಾಗಿದೆ.‌ ಜೊತೆಗೆ ಜಿಲ್ಲಾ ಮಾದರಿಯಲ್ಲಿ ಬೆಂಗಳೂರು‌ ನಗರದಲ್ಲಿ ಹೆಚ್ಚುವರಿ ಡಿಸಿಪಿಗಳನ್ನ ನಿಯೋಜಿಸಿ ಅವರಿಂದ ಸೈಬರ್ ಹಾಗೂ ಡ್ರಗ್ಸ್ ಪ್ರಕರಣಗಳ ತನಿಖೆಯ ಜವಾಬ್ದಾರಿ ನೀಡಲಾಗುವುದು ಎಂದರು. ಇತ್ತೀಚಿನ ದಿನಗಳಲ್ಲಿ ಅಪರಾಧ ಸ್ವರೂಪ ಬದಲಾಗಿದೆ. ನಗರದಲ್ಲಿ‌ ದಾಖಲಾಗುವ ನಾಲ್ಕು‌ ಪ್ರಕರಣಗಳ ಪೈಕಿ ಸೈಬರ್ ಕ್ರೈಂ ಕೇಸ್ ಒಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ‌ ಆರ್ಥಿಕ ಅಪರಾಧ ಪ್ರಕರಣ ದಾಖಲಾಗಿರುವುದನ್ನು ಸೂಚಿಸುತ್ತದೆ.

ಸೈಬರ್ ಅಪರಾಧಕ್ಕೆ‌ ಕಡಿವಾಣ ಹಾಕಲು ಎಲ್ಲ ಪೊಲೀಸರಿಗೆ ಸೈಬರ್ ತರಬೇತಿ‌ ನೀಡಲಾಗುತ್ತಿದೆ. ಅದೇ ರೀತಿ ಡ್ರಗ್ಸ್ ಮುಕ್ತ ರಾಜ್ಯ ಮಾಡುವ ಪಣ ತೊಟ್ಟಿದ್ದು, ಕಳೆದ ವರ್ಷ ರಾಜ್ಯದಲ್ಲಿ 7 ಸಾವಿರ ಮಂದಿಯನ್ನ ಬಂಧಿಸಿ 125 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ‌.‌ ಸಂಘಟಿತವಾಗಿ ಅಪರಾಧ ಎಸಗುವ ರೌಡಿಗಳ ವಿರುದ್ಧ ಹದ್ದಿನ ಕಣ್ಣಿಡಲು ಸೂಚಿಸಲಾಗಿದೆ. ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಹೆಚ್ಚಿಸಲು ಅಪರಾಧ ಕೃತ್ಯ ಎಸಗಿದ ಸ್ಥಳಕ್ಕೆ‌ ಸೀನ್ ಅಫ್ ಕ್ರೈಂ‌ ಜಾಗದಲ್ಲಿ ಹೇಗೆ ವೈಜ್ಞಾನಿಕವಾಗಿ ಸಾಕ್ಷ್ಯಾಧಾರ ಸಂಗ್ರಹಿಬೇಕು ಎಂದು ತಿಳಿಸಲಾಗಿದೆ.

ಫೀಲ್ಡ್​ಗೆ ಹೋಗಿ ಕೆಲಸ ಮಾಡುವೆ: ಪದೇ‌ ಪದೆ ನಗರ ಪೊಲೀಸರೊಂದಿಗೆ ಸಭೆ ನಡೆಸುತ್ತಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಡಿಜಿಪಿ, ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಅಧಿಕಾರವಿದೆ.‌ ನಾನು ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಿಲ್ಲ. ಫೀಲ್ಡ್​ಗೆ ಹೋಗಿ ಕೆಲಸ ಮಾಡುವೆ. ನೈತಿಕ ಪೊಲೀಸ್ ಗಿರಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಮಾಡಿದವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಶ್ರೀಕಿ‌ಗೆ ಲ್ಯಾಪ್​ಟಾಪ್ ಕೊಟ್ಟು ಬಿಟ್ ಕಾಯಿನ್ ವರ್ಗಾವಣೆ ಮಾಡಿಸಿಕೊಂಡ ಬಂಧಿತ ಇನ್ಸ್​ಪೆಕ್ಟರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.