ETV Bharat / state

ಚಿಕ್ಕಮಗಳೂರು : ದತ್ತಪೀಠದಲ್ಲಿ ದತ್ತ ಪಾದುಕೆಯ ದರ್ಶನ ಪಡೆದ ಭಕ್ತರು, ಉತ್ಸವಕ್ಕೆ ತೆರೆ - DATTA PEETA

ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಆಯೋಜನೆಗೊಂಡಿದ್ದ ದತ್ತಮಾಲ ಉತ್ಸವ ಇಂದು ಸಂಪನ್ನಗೊಂಡಿದೆ.

Home
ಹೋಮ ಹವನದಲ್ಲಿ ಭಾಗಿಯಾದ ಸಿ ಟಿ ರವಿ ಹಾಗೂ ಭಕ್ತರು (ETV Bharat)
author img

By ETV Bharat Karnataka Team

Published : 3 hours ago

ಚಿಕ್ಕಮಗಳೂರು : ಇಂದು ದತ್ತಮಾಲ ಉತ್ಸವದ ಕೊನೆ ದಿನವಾದ್ದರಿಂದ ದತ್ತಪೀಠಕ್ಕೆ ಸುಮಾರು 15 ಸಾವಿರಕ್ಕೂ ಅಧಿಕ ಭಕ್ತಾದಿಗಳು ಬೆಳಗ್ಗೆ 7 ಗಂಟೆಯಿಂದಲೇ ಆಗಮಿಸಿ ಪಾದುಕೆಯ ದರ್ಶನವನ್ನು ಪಡೆದರು. ಈ ಮೂಲಕ ಮೂರು ದಿನಗಳವರೆಗೆ ನಡೆದ ಉತ್ಸವಕ್ಕೆ ಇಂದು ಶಾಂತಿಯುತ ತೆರೆ ಎಳೆಯಲಾಯಿತು.

ಈ ಬಾರಿ ಜಿಲ್ಲೆಯಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ದತ್ತಮಾಲ ಅಭಿಯಾನವನ್ನು ತುಂಬಾ ಅದ್ಧೂರಿ, ಸಂಭ್ರಮ ಹಾಗೂ ಸಡಗರದಿಂದ ಆಯೋಜಿಸಲಾಗಿತ್ತು.

ದತ್ತಪೀಠದಲ್ಲಿ ದತ್ತ ಪಾದುಕೆಯ ದರ್ಶನ ಪಡೆದ ಭಕ್ತರು (ETV Bharat)

ದತ್ತಮಾಲೆಯನ್ನು ಧರಿಸಿದ್ದಂತಹ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಹಾಗೂ ಕೆಲ ಭಕ್ತರು ಹೊನ್ನಮ್ಮನ ಹಳ್ಳದಿಂದ ದತ್ತಪೀಠದವರೆಗೂ ಸುಮಾರು 12 ಕಿ. ಮೀ ದೂರ ಪಾದಯಾತ್ರೆ ಮಾಡಿದರು.

ಇದೇ ಸಂದರ್ಭದಲ್ಲಿ ತಲೆಯ ಮೇಲೆ ಪಡಿಯ ಹೊತ್ತು ದತ್ತನ ಜಪ ಮಾಡುತ್ತಾ ಹಾಗೂ ದತ್ತನ ಭಕ್ತಿ ಗೀತೆಗಳನ್ನು ಹಾಡುತ್ತಾ ನಡೆದುಕೊಂಡೇ ಬಂದು ದತ್ತನ ಪಾದುಕೆಯ ದರ್ಶನ ಪಡೆದರು. ನಂತರ ಜಿಲ್ಲಾಡಳಿತ ನಿರ್ಮಿಸಿರುವ ಶೆಡ್​​ನಲ್ಲಿ ಹೋಮದಲ್ಲಿ ಭಾಗವಹಿಸಿ ದತ್ತನಿಗೆ ವಿಶೇಷವಾದ ಪೂಜೆ ಸಲ್ಲಿಸಿದರು.

ಹಾಸನ, ತುಮಕೂರು, ಶಿವಮೊಗ್ಗ, ಮಂಗಳೂರು, ಉಡುಪಿ, ಚಿತ್ರದುರ್ಗ, ಶಿವಮೊಗ್ಗ, ಕಾರವಾರ ಸೇರಿದಂತೆ ವಿವಿಧ ಜಿಲ್ಲೆಗಳಿಂದ 15 ಸಾವಿರಕ್ಕೂ ಅಧಿಕ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಆಗಮಿಸಿ ದತ್ತ ಪಾದುಕೆಯ ದರ್ಶನವನ್ನು ಪಡೆದರು. ಶಾಸಕ ಸುನಿಲ್ ಕುಮಾರ್ ಸೇರಿದಂತೆ ವಿವಿಧ ಮುಖಂಡರು ಭಾಗಿಯಾಗಿದ್ದರು. ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್​​ ವ್ಯವಸ್ಥೆ ಮಾಡಲಾಗಿತ್ತು.

ಮೂರು ದಿನ ನಡೆದ ಕಾರ್ಯಕ್ರಮ ಹೀಗಿತ್ತು : ಮೊದಲನೆಯ ದಿನ ಅನುಸೂಯ ಜಯಂತಿ ಹಾಗೂ ಸಂಕೀರ್ತನಾ ಯಾತ್ರೆ ನಡೆಸಲಾಯಿತು.

ಎರಡನೇ ದಿನ ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಅಕ್ಕಿ, ಬೆಲ್ಲ, ತೆಂಗಿನಕಾಯಿ ಸಂಗ್ರಹ ಮಾಡುವುದರ ಮೂಲಕ ಪಡಿ ಸಂಗ್ರಹಿಸಲಾಯಿತು. ನಿನ್ನೆ ನಗರದಲ್ಲಿ ಆಯೋಜಿಸಲಾಗಿದ್ದ ಶೋಭಾ ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಮೂರನೇ ದಿನವಾದ ಇಂದು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಹಾಗೂ ಹೋಮ, ಹವನ, ದೇವರ ಭಜನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಈ ಕಾರ್ಯಕ್ರಮಕ್ಕೆ ವಿವಿಧ ಮಠದ ಮಠಾಧೀಶರು ಹಾಗೂ ಹಿಂದೂ ಪರ ಸಂಘಟನೆಯ ಪ್ರಮುಖ ಮುಖಂಡರು ಭಾಗವಹಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ : ಚಿಕ್ಕಮಗಳೂರು: 'ಅನುಸೂಯ ಜಯಂತಿ'ಗೆ ಚಾಲನೆ; ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಭಾಗಿ - ANUSUYA JAYANTI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.