ETV Bharat / state

ಕೈಗಾರಿಕಾ ಯೋಜನೆಗಳಿಗೆ 100 ದಿನದೊಳಗೆ ಅನುಮೋದನೆ ನೀಡಲು ಸಾಫ್ಟ್‌ವೇರ್ ಅಭಿವೃದ್ಧಿ

ಮೈಕ್ರೋಸಾಫ್ಟ್​ ಕಂಪನಿ ಅಭಿವೃದ್ಧಿಪಡಿಸಿರುವ ಸಾಫ್ಟ್​ವೇರ್​ ಫೆಬ್ರವರಿಯಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆಗೊಳ್ಳಲಿದೆ.

Minister MB Patil watched the demonstration given by the representatives of Microsoft
ಮೈಕ್ರೋಸಾಫ್ಟ್ ಸಂಸ್ಥೆಯ ಪ್ರತಿನಿಧಿಗಳು ನೀಡಿದ ಪ್ರಾತ್ಯಕ್ಷಿಕೆ ವೀಕ್ಷಿಸಿದ ಸಚಿವ ಎಂ.ಬಿ.ಪಾಟೀಲ್​ (ETV Bharat)
author img

By ETV Bharat Karnataka Team

Published : Nov 5, 2024, 8:10 AM IST

Updated : Nov 5, 2024, 9:46 AM IST

ಬೆಂಗಳೂರು: "ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ನೀಡಲಾಗಿರುವ ಕೈಗಾರಿಕಾ ಯೋಜನೆಗಳಿಗೆ ಗರಿಷ್ಠ 100 ದಿನಗಳೊಳಗೆ ಅಗತ್ಯವಿರುವ ಎಲ್ಲಾ ಅನುಮೋದನೆಗಳನ್ನು ನೀಡಲು ಮೈಕ್ರೋಸಾಫ್ಟ್ ಕಂಪನಿಯ ನೆರವಿನಿಂದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಲೋಕಾರ್ಪಣೆ ಮಾಡಲಾಗುವುದು" ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ.ಪಾಟೀಲ್ ತಿಳಿಸಿದ್ದಾರೆ.

ಏಕಗವಾಕ್ಷಿ ಯೋಜನೆ ಜಾರಿ ಸಂಬಂಧ ಮೈಕ್ರೋಸಾಫ್ಟ್ ಸಂಸ್ಥೆ ಪ್ರತಿನಿಧಿಗಳು ನೀಡಿದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, "ನೆರೆಹೊರೆಯ ಕೆಲವು ರಾಜ್ಯಗಳಲ್ಲಿ ಕೈಗಾರಿಕಾ ಹೂಡಿಕೆ ಯೋಜನೆಗಳಿಗೆ 60-70 ದಿನಗಳಲ್ಲಿ ಪ್ರತಿಯೊಂದು ಅನುಮೋದನೆಯನ್ನೂ ನೀಡಲಾಗುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಸರಾಸರಿ 300 ದಿನಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದನ್ನು 60-70 ದಿನಗಳಿಗೆ ಇಳಿಸಬೇಕೆಂಬುದು ತಮ್ಮ‌ ಗುರಿಯಾಗಿದೆ. ಇಲ್ಲದೇ ಹೋದರೆ ನಾವು ಹೂಡಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕಾಗಿ ತಂತ್ರಜ್ಞಾನದ ನೆರವು ನೀಡುವಂತೆ ಮೈಕ್ರೋಸಾಫ್ಟ್ ಕಂಪನಿಗೆ ಜವಾಬ್ದಾರಿ ವಹಿಸಲಾಗಿತ್ತು" ಎಂದು ಹೇಳಿದ್ದಾರೆ.

"ಕೈಗಾರಿಕಾ ಯೋಜನೆಗಳಿಗೆ ರಾಜ್ಯದಲ್ಲಿ ಅಗ್ನಿಶಾಮಕ, ಕಾನೂನು, ಅರಣ್ಯ ಮುಂತಾದ 33 ಇಲಾಖೆಗಳ ಅನುಮೋದನೆ ಬೇಕಾಗುತ್ತದೆ. ಜೊತೆಗೆ 147 ಬಗೆಯ ಸೇವೆಗಳಿವೆ. ಇವನ್ನು ಒಂದೇ ಕಡೆ ತರಬೇಕಾಗಿದೆ. ಈ ಸಾಫ್ಟ್‌ವೇರ್ ಇದನ್ನು ಸುಗಮಗೊಳಿಸಲಿದೆ. ಏಕಗವಾಕ್ಷಿ ವ್ಯವಸ್ಥೆಯ ಬಗ್ಗೆ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಹಾಗೂ ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪರಿಚಯಿಸಲಾಗುವುದು. ಆ ಮೂಲಕ ಕೈಗಾರಿಕಾ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳೂ ತಮ್ಮ ವ್ಯಾಪ್ತಿಯ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕೋರಲಾಗುವುದು" ಎಂದು ತಿಳಿಸಿದರು.

"ಇದರ ಜೊತೆಗೆ ಉದ್ಯಮಿಗಳು ಕೂಡ ಕೂತಲ್ಲೇ ತಮ್ಮ ಯೋಜನೆ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೂ ಇದು ನೆರವಾಗಲಿದೆ. ಈ ಸಲುವಾಗಿಯೇ ವಿಶೇಷವಾದ ವೆಬ್‌ಸೈಟ್ ಕೂಡ ವಿನ್ಯಾಸ ಮಾಡಿದ್ದು, ಅದು ಕೂಡ ಬಳಕೆಸ್ನೇಹಿಯಾಗಿದೆ. ರಾಜ್ಯಸಲ್ಲೇ ಹೂಡಿಕೆ ಏಕೆ ಮಾಡಬೇಕು? ಹೇಗೆ ಮಾಡಬೇಕು? ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಲಿದೆ. ಕೇವಲ ಕನ್ನಡ, ಇಂಗ್ಲಿಷ್ ಮಾತ್ರವಲ್ಲದೆ ಪ್ರಪಂಚದ ಎಲ್ಲಾ ಪ್ರಮುಖ ಭಾಷೆಗಳಲ್ಲೂ ಮಾಹಿತಿ ಲಭ್ಯವಾಗಲಿದೆ. ಇದಕ್ಕೆ ಕೃತಕ ಬುದ್ಧಿಮತ್ತೆಯ ನೆರವು ಕೂಡ ಪಡೆಯಲಾಗಿದೆ. ಧ್ವನಿ ಮಾಧ್ಯಮದಲ್ಲೂ ಕೂಡ ಉದ್ಯಮಿಗಳು ತಮ್ಮಿಚ್ಛೆಯ ಭಾಷೆಯಲ್ಲಿ ಮಾಹಿತಿ ಪಡೆದು ಕೊಳ್ಳಬಹುದು. ಇಂತಹ ಅತ್ಯಾಧುನಿಕ ಸೌಲಭ್ಯ ಈ ಉಪಕ್ರಮದಡಿ ಇರಲಿದೆ. ಇದಕ್ಕೆ 'ಉಮಾ' (ಉದ್ಯೋಗ ಮಿತ್ರ ಅಸಿಸ್ಟೆಂಟ್) ಎಂದು ಹೆಸರು ಇಟ್ಟಿದ್ದು, ದೇಶದಲ್ಲೇ ಈ ರೀತಿಯ‌ ವ್ಯವಸ್ಥೆ ಹೊಂದುವ ರಾಜ್ಯ ನಮ್ಮದಾಗಲಿದೆ" ಎಂದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಆಯುಕ್ತ ಡಾ.ಮಹೇಶ್​, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಮೈಕ್ರೋಸಾಫ್ಟ್​ನ ಯೋಜನಾ ನಿರ್ದೇಶಕ ಪುನೀತ್ ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಕೇಂದ್ರದಿಂದ ಅನುದಾನ ಕೊಟ್ಟಿದ್ದರೆ ನಾನು ರಾಜಕೀಯ ಬಿಡುತ್ತೇನೆ, ಜೋಶಿ ರಾಜಕೀಯ ಬಿಡ್ತಾರಾ?: ಸಿಎಂ ಸವಾಲು

Last Updated : Nov 5, 2024, 9:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.