ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಮಾರನಬೀಡು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸದ ಶಿವಕುಮಾರ್ ಉದಾಸಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಪ್ರತಿನಿಧಿಸಿ, ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಸಂಸತ್ತಿನಲ್ಲಿ ಹೆಸರು ಮಾಡಿದ್ದು, ಬೇರೆಯವರಿಗೆ ಅವಕಾಶ ಸಿಗಬೇಕು ಅನ್ನೋ ಉದ್ದೇಶದಿಂದ ಅವರು ಈ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಉದಾಸಿ ಆದರ್ಶ ಮೆರೆದಿದ್ದಾರೆ ಎಂದು ಬಣ್ಣಿಸಿದರು.
ಸಮಾಜದಲ್ಲಿ ಒಡಕನ್ನುಂಟು ಮಾಡುತ್ತಿರುವ ಕಾಂಗ್ರೆಸ್: 2013 ರಲ್ಲಿ ಸಿ.ಎಂ ಸಿದ್ದರಾಮಯ್ಯ ಇದೇ ತಮ್ಮ ಕೊನೆಯ ಚುನಾವಣೆ ಅಂದಿದ್ದರು. ಒಂದು ವರ್ಷ ಆದ್ಮೇಲೆ ಮತ್ತೆ ಚುನಾವಣೆಗೆ ನಿಂತು ಬಿಜೆಪಿ ಸೋಲಿಸುತ್ತೇನೆ ಅಂದ್ರು. 2018 ರ ಚುನಾವಣೆಯಲ್ಲಿ ಅವರೇ ಸೋತು ಹೋದರು. ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಸಮಾಜದಲ್ಲಿ ಒಡಕನ್ನು ಉಂಟು ಮಾಡುತ್ತಿದ್ದಾರೆ. ಹಿಂದುಳಿದ ವರ್ಗದ ಜನರು, ಮುಂದುವರಿದ ವರ್ಗದ ಜನರನ್ನು ಕಾಂಗ್ರೆಸ್ ಕತ್ತಲದಲ್ಲಿ ಇಟ್ಟಿದ್ದಾರೆ.
ಕಾಂಗ್ರೆಸ್ ಬಂದ್ರೆ ಪಿತ್ರಾರ್ಜಿತ ಆಸ್ತಿ ಮೇಲೆ ಟ್ಯಾಕ್ಸ್ : ''ಕರ್ನಾಟಕದ ಜಾತಿಗಣತಿಯನ್ನು ಬಹಿರಂಗ ಮಾಡಿಲ್ಲ. ರಾಹುಲ್ ಗಾಂಧಿ ಜಾತಿ ಗಣತಿ ಮಾಡಿಸುತ್ತೇವೆ ಅಂತಾರೆ. ಅದರೆ ಇಲ್ಲಿ ಜಾತಿಗಣತಿ ಬಹಿರಂಗ ಮಾಡುತ್ತಿಲ್ಲ. ಕಾಂಗ್ರೆಸ್ ಹೇಳುವುದೊಂದು ಮಾಡೋದು ಒಂದು. ದೇಶದಲ್ಲಿ ಅರಾಜಕತೆಯನ್ನು ಕಾಂಗ್ರೆಸ್ ಸೃಷ್ಟಿ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಪಿತ್ರಾರ್ಜಿತ ಆಸ್ತಿ ಮೇಲೆ ಟಾಕ್ಸ್ ಜಾರಿಗೆ ಮಾಡುತ್ತಿವೆ ಅಂತಿದ್ದಾರೆ. ಪಿತ್ರಾರ್ಜಿತ ಆಸ್ತಿ ನಿಮ್ಮ ಹೆಸರಿಗೆ ಹಚ್ಚಿಕೊಳ್ಳಬೇಕೆಂದ್ರೆ ಅರ್ಧ ಆಸ್ತಿಯನ್ನು ಸರ್ಕಾರಕ್ಕೆ ನೀಡಬೇಕು, ಇಲ್ಲವೇ ಟ್ಯಾಕ್ಸ್ ತುಂಬಬೇಕು'' ಎಂದು ಆರೋಪಿಸಿದರು.
''ಕಾಂಗ್ರೆಸ್ ಬಂದರೆ ರೈತರಿಗೆ ಹಾಗೂ ಜನರಿಗೆ ನೆಮ್ಮದಿ ಇಲ್ಲ. ಕರ್ನಾಟಕ ಸರ್ಕಾರ ತನ್ನ ಪಾಲಿನ ಹಣ ಕೊಡದಿರುವ ಹಿನ್ನೆಲೆ ರೈತರಿಗೆ ಬೆಳೆ ವಿಮೆ ಸಿಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದೆ. ಮಾತು ಎತ್ತಿದರೆ ಗ್ಯಾರಂಟಿ ಅಂತಾರೆ. ಬರಗಾಲದಲ್ಲಿ ನಯಾ ಪೈಸೆ ಬಿಡುಗಡೆ ಮಾಡಿಲ್ಲ. ಇದು ದರಿದ್ರ ಸರ್ಕಾರ. ಈ ಸರ್ಕಾರವನ್ನು ಕಿತ್ತು ಹಾಕಬೇಕು'' ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಕೊರೊನಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಪ್ರಾಣ ಉಳಿಸಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್ ಹಾಗೂ ಅಕ್ಕಿ, ಮನೆ ಮನೆಗೆ ಜಲಮಿಷನ್ ಯೋಜನೆಯಡಿ ನೀರು ನೀಡಿದ್ದಾರೆ. ಅನ್ನ ನೀಡಿದ್ದು ಮೋದಿ. ಆದರೆ ಭಾಗ್ಯ ಸಿದ್ದರಾಮಯ್ಯರದ್ದು. ಹಾಡಹಗಲೇ ಸುಳ್ಳು ಹೇಳುವ ಸರ್ಕಾರ ಅಂದ್ರೆ ಅದು ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಸಿಎಂ ಟೀಕಿಸಿದರು.
ಇದನ್ನೂಓದಿ:ಪ್ರಧಾನಿ ಮೋದಿ ಭಯಗೊಂಡಿದ್ದಾರೆ, ವೇದಿಕೆ ಮೇಲೆ ಕಣ್ಣೀರು ಹಾಕುವ ಸಾಧ್ಯತೆ ಇದೆ: ರಾಹುಲ್ ಗಾಂಧಿ - Rahul Gandhi