ETV Bharat / state

ಕಲ್ಯಾಣ ಮಂಟಪಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖದೀಮನ ಬಂಧನ

ದಾವಣಗೆರೆ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಫೆ.12 ರಂದು ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ದೂರು ದಾಖಲಾದ ತಕ್ಷಣ ವಿದ್ಯಾನಗರ ಠಾಣೆ ಪೊಲೀಸರು ತಂಡ ರಚಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Davangere Vidyanagar Police Station
ದಾವಣಗೆರೆ ವಿದ್ಯಾನಗರ ಪೊಲೀಸ್​ ಠಾಣೆ
author img

By ETV Bharat Karnataka Team

Published : Mar 2, 2024, 6:50 PM IST

ದಾವಣಗೆರೆ: ನಗರದ ಕಲ್ಯಾಣ ಮಂಟಪಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ದಾವಣಗೆರೆ ಶಾಂತಿನಗರದ ನಿವಾಸಿ ಮಸಾಲೆ ವ್ಯಾಪಾರಿ ಕಿರಣ್ ನಾಯ್ಕ ಆರ್ (26) ಎಂಬುವನು ಬಂಧಿತ ಆರೋಪಿ.

ಕಳ್ಳತನಕ್ಕೆ ಒಳಗಾದ ಚಿದಾನಂದ ಗೌಡ ಎಂಬುವರು ಕುಟುಂಬ ಸಮೇತ ಫೆ.11 ರಂದು ದಾವಣಗೆರೆ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನಕ್ಕೆ ಮದುವೆಗೆ ಆಗಮಿಸಿದ್ದರು. ಫೆ.12 ರಂದು ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ಸಹ ರೂಮ್ ಪಡೆದಿದ್ದರು. ಮದುವೆ ಮುಗಿದ ಬಳಿಕ ಬ್ಯಾಗಿನಲ್ಲಿಟ್ಟಿದ್ದ 55 ಸಾವಿರ ಬೆಲೆ ಬಾಳುವ 10 ಗ್ರಾಂ ತೂಕದ ಬಂಗಾರದ ಕಿವಿಯೋಲೆ, 75 ಸಾವಿರ ಬೆಲೆಬಾಳುವ 15 ಗ್ರಾಂ ತೂಕದ ಬಂಗಾರದ ಸರ ಕಳವು ಆಗಿತ್ತು. ನಕಲಿ ಕೀ ಬಳಿಸಿ ರೂಮ್ ತೆಗೆದು ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಚಿದಾನಂದ ಗೌಡ ಎಂಬುವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆ ಕೈಗೊಂಡಿದ್ದರು. ಈ ಪ್ರಕರಣ ಭೇದಿಸಿದ ಪೊಲೀಸರು, ಬಂಗಾರದ ವಸ್ತು ಸಮೇತ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕಿರಣ್ ನಾಯ್ಕ ಆರ್ (26) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 78 ಸಾವಿರ ಮೌಲ್ಯದ 13.45 ಗ್ರಾಂ ಆಭರಣ ಜಪ್ತಿ ಮಾಡಿದ್ದಾರೆ. ಈ ಆರೋಪಿ ವಿರುದ್ಧ ವಿದ್ಯಾನಗರ ಠಾಣೆ ಸೇರಿದಂತೆ ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ ಕಳ್ಳತನಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳು ಇವೆ.

ಇದನ್ನೂಓದಿ:ಕೆಫೆ ಸ್ಫೋಟ ಪ್ರಕರಣ: ಆರೋಪಿಯ ಟ್ರಾವೆಲ್​ ಹಿಸ್ಟರಿ ಜಾಲಾಡುತ್ತಿರುವ ಖಾಕಿ ಪಡೆ; ಎನ್ಐಎಗೆ ಕೇಸ್​ ಹಸ್ತಾಂತರ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.