ETV Bharat / state

ಹಾವೇರಿಯಲ್ಲಿ ಹೆಚ್ಚಿದ ಡೆಂಗ್ಯೂ, 14 ವರ್ಷದೊಳಗಿನ ಮಕ್ಕಳಿಗೆ ಬಾಧೆ; ಸುರಕ್ಷತೆಗೆ ವೈದ್ಯರ ಸಲಹೆ - Dengue Cases

ಹಾವೇರಿ ಜಿಲ್ಲೆಯಲ್ಲಿ ಈ ವರ್ಷ ಅಧಿಕ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಹಾವೇರಿಯಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣ
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾವೇರಿ (ETV Bharat)
author img

By ETV Bharat Karnataka Team

Published : May 30, 2024, 8:52 AM IST

Updated : May 30, 2024, 2:32 PM IST

ಹಾವೇರಿಯಲ್ಲಿ ಹೆಚ್ಚಿದ ಡೆಂಗ್ಯೂ ಪ್ರಕರಣ (ETV Bharat)

ಹಾವೇರಿ: ಮುಂಗಾರುಪೂರ್ವ ಮಳೆಯೊಂದಿಗೆ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ತೀವ್ರಗೊಂಡಿವೆ. 14 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ರೋಗ ಕಾಣಿಸಿಕೊಳ್ಳುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಗಿದೆ.

ಮಕ್ಕಳಲ್ಲಿ ಡೆಂಗ್ಯೂ ಹೆಚ್ಚು: ಸದ್ಯ ಜಿಲ್ಲೆಯಾದ್ಯಂತ 162 ಜನರಿಗೆ ಡೆಂಗ್ಯೂ ಬಾಧಿಸಿದ್ದು, ಈ ಪೈಕಿ 108 ಪ್ರಕರಣಗಳು ಮಕ್ಕಳಲ್ಲಿ ಕಂಡುಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಎಲ್ಲೆಲ್ಲಿ ಪತ್ತೆ?: ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಹಾವೇರಿ ತಾಲೂಕಿನಲ್ಲಿ 10, ಬ್ಯಾಡಗಿ ತಾಲೂಕಿನಲ್ಲಿ 30, ರಾಣೇಬೆನ್ನೂರು ತಾಲೂಕಿನಲ್ಲಿ 18, ಹಿರೇಕೆರೂರು ತಾಲೂಕಿನಲ್ಲಿ 20, ರಟ್ಟಿಹಳ್ಳಿ ತಾಲೂಕಿನಲ್ಲಿ 08, ಶಿಗ್ಗಾಂವಿ ತಾಲೂಕಿನಲ್ಲಿ 06, ಸವಣೂರು ತಾಲೂಕಿನಲ್ಲಿ 01 ಹಾನಗಲ್ ತಾಲೂಕಿನಲ್ಲಿ 69 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಉಲ್ಬಣಿಸಲು ಕಾರಣವೇನು?: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಇದಕ್ಕೆ ಬರಗಾಲ ಮತ್ತು ಅತಿಯಾದ ಬಿಸಿಲಿನ ವಾತಾವರಣವೂ ಕಾರಣ. ಬರಗಾಲ ಮತ್ತು ನೀರಿನ ಕೊರತೆಯಿಂದಾಗಿ ಜನರು ನೀರನ್ನು ಹೆಚ್ಚು ಶೇಖರಿಸಿ ಬಳಕೆ ಮಾಡಿದ್ದಾರೆ. ಹೀಗೆ ಶೇಖರಣೆ ಮಾಡಿದ ನೀರಿನ ಮೇಲೆ ಏನನ್ನೂ ಮುಚ್ಚದಿರುವುದರಿಂದ ಈಡಿಸ್ ಇಜಿಪ್ಟ ಎನ್ನುವ ಸೊಳ್ಳೆ ಉತ್ಪತ್ಪಿಯಾಗಿ ಜನರು ಅದನ್ನೇ ಕಡಿಯುತ್ತಿದ್ದಾರೆ. ಇದರಿಂದಲೂ ರೋಗ ಉಲ್ಬಣಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಸುರಕ್ಷತೆ ಹೇಗೆ?: ಮನೆಯ ಸುತ್ತ ನೀರು ನಿಲ್ಲದಂತೆ ಶುಚಿಯಾಗಿಟ್ಟುಕೊಳ್ಳಬೇಕು. ಮಕ್ಕಳು ಮತ್ತು ವಯೋವೃದ್ದರಿರುವ ಮನೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಲಗುವ ಮುನ್ನ ಸೊಳ್ಳೆ ಪರದೆ, ಸೊಳ್ಳೆಬತ್ತಿ, ಬೇವಿನ ಎಲೆಯ ಹೂಗೆ ಹಾಕುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಆರೋಗ್ಯ ಇಲಾಖೆ ಜೊತೆ ಸಾರ್ವಜನಿಕರು ಸಹಕರಿಸಿದಾಗ ಈ ರೀತಿಯ ರೋಗಗಳಿಗೆ ಕಡಿವಾಣ ಹಾಕಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ವೆಸ್ಟ್​ ನೈಲ್​ ಜ್ವರ: ಇದ್ಯಾವ ರೋಗ? ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಹೀಗಿವೆ - West Nile Fever

Last Updated : May 30, 2024, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.