ETV Bharat / state

ಹುಬ್ಬಳ್ಳಿ: ಬದಲಾದ ಇಂದಿರಾ ಕ್ಯಾಂಟೀನ್​ ಮೆನು; ಉಪಹಾರ, ಊಟಕ್ಕೆ ಹೆಚ್ಚಿದ ಬೇಡಿಕೆ - Indira Canteen

ಇಂದಿರಾ ಕ್ಯಾಂಟೀನ್ ಮೆನು ಬದಲಾಗಿರುವುದರಿಂದ ಸಾರ್ವಜನಿಕರಿಂದ ಊಟ, ತಿಂಡಿಗೆ ಬೇಡಿಕೆ ಹೆಚ್ಚಾಗಿದೆ.

indira-canteen
ಇಂದಿರಾ ಕ್ಯಾಂಟೀನ್ (ETV Bharat)
author img

By ETV Bharat Karnataka Team

Published : Aug 23, 2024, 9:49 PM IST

Updated : Aug 23, 2024, 10:25 PM IST

ಬದಲಾದ ಇಂದಿರಾ ಕ್ಯಾಂಟೀನ್​ ಮೆನು; ಉಪಹಾರ, ಊಟಕ್ಕೆ ಹೆಚ್ಚಿದ ಬೇಡಿಕೆ (ETV Bharat)

ಹುಬ್ಬಳ್ಳಿ: ಇಂದಿರಾ ಕ್ಯಾಂಟೀನ್ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಬಡವರು, ಕೂಲಿ ಕಾರ್ಮಿಕರು, ಆಟೋ ಚಾಲಕರು ಸೇರಿದಂತೆ ಮಧ್ಯಮ ವರ್ಗದ ಪಾಲಿಗೆ ಅಕ್ಷಯಪಾತ್ರೆಯಾಗಿದೆ. ಈಗ ಇಂದಿರಾ ಕ್ಯಾಂಟೀನ್​​ಗಳ ಮೆನು ಬದಲಾಗಿದ್ದು, ಕ್ಯಾಂಟೀನ್​ಗಳಿಗೆ ಕಳೆ ಬಂದಿದೆ. ಊಟ ಹಾಗೂ ತಿಂಡಿಗೆ ಬೇಡಿಕೆ ಹೆಚ್ಚಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ.‌

ಕಡಿಮೆ ದುಡ್ಡಿನಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವ ಇಂದಿರಾ ಕ್ಯಾಂಟೀನ್‌ಗಳನ್ನು 2013ರಲ್ಲಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಆರಂಭಿಸಿತ್ತು. ಇದೀಗ ಸರ್ಕಾರ ಮತ್ತೆ ಕ್ಯಾಂಟೀನ್​ಗಳಿಗೆ ಪುನರ್ಜೀವ ನೀಡಿದೆ.

ಇತ್ತೀಚೆಗೆ ಆಹಾರದ ಗುಣಮಟ್ಟದ ಬಗ್ಗೆ ಹಲವಾರು ದೂರುಗಳು ಕೇಳಿಬಂದಿದ್ದವು. ಆದ್ರೆ ಇದೀಗ ಗುತ್ತಿಗೆದಾರರನ್ನು ಬದಲಿಸುವುದರ ಜೊತೆಗೆ ಸ್ವಚ್ಛ ಶುಚಿ, ರುಚಿಯಾದ ಉತ್ತರ ಕರ್ನಾಟಕ ಶೈಲಿಯ ತಿಂಡಿ ಹಾಗೂ ಊಟದ ಮೆನುಗೆ ಗ್ರಾಹಕರು ಮನಸೋತಿದ್ದಾರೆ.

ಪ್ರಾದೇಶಿಕ ಆಹಾರ ಪದ್ದತಿಯಂತೆ ಊಟದ ಮೆನು ಸಿದ್ದಪಡಿಸಲಾಗಿದೆ. ಅವಳಿ ನಗರ ಹುಬ್ಬಳ್ಳಿ- ಧಾರವಾಡ ವ್ಯಾಪ್ತಿಯ ಎಲ್ಲಾ ಇಂದಿರಾ ಕ್ಯಾಂಟೀನ್​ಗಳಲ್ಲಿ ಉತ್ತರ ಕರ್ನಾಟಕ ಶೈಲಿಯ ಊಟದ ಜೊತೆ ವಿಧವಿಧವಾದ ಆಹಾರ ಪದಾರ್ಥಗಳನ್ನು ಪರಿಚಯಿಸಲಾಗಿದೆ. ಆಗಸ್ಟ್ 12ನೇ ತಾರೀಖಿನಿಂದಲೇ ಹೊಸ ಮೆನುವಿನಂತೆ ಬೆಳಗಿನ ಉಪಹಾರ ಹಾಗೂ ತಿಂಡಿಯನ್ನು ನೀಡಲಾಗುತ್ತಿದೆ.

ಹೊಸ ಮೆನು: ಹೊಸ ಮೆನುವಿನ ಪ್ರಕಾರ, ವಾರದ ಏಳು ದಿನ ಬೆಳಗ್ಗೆ ಇಡ್ಲಿ ದೊರೆಯಲಿದೆ. ಸೋಮವಾರ ಅದರ ಜೊತೆಗೆ ಮಿರ್ಚಿ, ಗಿರಮಿಟ್ ಅಥವಾ ಅವಲಕ್ಕಿ, ಮಧ್ಯಾಹ್ನ ಜೋಳದ ರೊಟ್ಟಿ, ಚಪಾತಿ, ಪಲ್ಯ ಇರಲಿದೆ. ಮಂಗಳವಾರ ಉಪ್ಪಿಟ್ಟು, ಇಡ್ಲಿ, ರೊಟ್ಟಿ, ಚಪಾತಿ, ರಾಗಿ ಗಂಜಿ, ಮೊಸರನ್ನ ಇರಲಿದೆ. ಬುಧವಾರ ಇಡ್ಲಿ, ಅವಲಕ್ಕಿ, ಪುದೀನಾ ಚಟ್ನಿ, ಸಾಂಬರ್ ಇರಲಿದೆ. ಮಧ್ಯಾಹ್ನ, ಚಪಾತಿ, ರಾಗಿ‌ ಗಂಜಿ, ಶಾವಿಗೆ ಪಾಯಸ, ಅನ್ನ ಸಾಂಬರ್ ಇರಲಿದೆ.‌ ಗುರುವಾರವೂ ಕೂಡ ಇಡ್ಲಿ ಚಟ್ನಿ ಜೊತೆಗೆ ಚಿತ್ರಾನ್ನ ನೀಡಲಾಗುತ್ತದೆ.

"ಪ್ರತಿ ದಿನವೂ ಒಂದೊಂದು ಮಾದರಿಯ ರೈಸ್ ಬಾತ್ ಸಿಗಲಿದೆ. ಇವುಗಳೊಂದಿಗೆ ಚಟ್ನಿ, ಸಾಂಬರ್, ಮೊಸರು ಬಜ್ಜಿ ಹಾಗೂ ಖಾರಾ ಬೂಂದಿ ಕೂಡ ನೀಡಲಾಗುತ್ತಿದೆ. ವಾರದ ಇತರ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ ಜೊತೆಗೆ ಕ್ರಮವಾಗಿ ಪಲಾವ್, ಬಿಸಿಬೇಳೆ ಬಾತ್, ಖಾರಾಬಾತ್ ಕೂಡ ಇರುತ್ತದೆ" ಎಂದು ಗೋಕುಲ್ ರೋಡ್​ ಹೊಸ ಬಸ್ ನಿಲ್ದಾಣ ಬಳಿಯ ಇಂದಿರಾ ಕ್ಯಾಂಟಿನ್ ಉಸ್ತುವಾರಿ ಇಬ್ರಾಹಿಂ ಮಾಹಿತಿ ನೀಡಿದರು.

ಇನ್ನು ಉಪಹಾರ ಹಾಗೂ ಊಟದ ಮೆನು ಬದಲಾಗಿದ್ದರಿಂದ ಗ್ರಾಹಕರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ಪ್ರತಿ ದಿನ 400ರಿಂದ 450 ಜನ ಉಪಹಾರ ಹಾಗೂ ಊಟ ಸೇವಿಸುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಆಟೋ ಚಾಲಕರು, ಡ್ರೈವರ್​ಗಳು, ಕೂಲಿ‌ಕಾರ್ಮಿಕರು ಆಗಮಿಸುತ್ತಾರೆ. ಬೆಳಗ್ಗೆ ಮಧ್ಯಾಹ್ನ ‌ಹಾಗೂ ರಾತ್ರಿ ಸಾಕಷ್ಟು ಜನ ಗ್ರಾಹಕರು ಬರುತ್ತಾರೆ.‌ ಉಪಹಾರ ಹಾಗೂ ಊಟದ ದರ ಯಥಾಸ್ಥಿತಿ ‌ಇದೆ. ಉಪಹಾರಕ್ಕೆ 5 ರೂ ಹಾಗೂ ಊಟಕ್ಕೆ 10 ರೂ. ನಿಗದಿ ಮಾಡಲಾಗಿದ್ದು, ಉಪಹಾರ ಹಾಗೂ ಊಟ ಸವಿದವರು ಮತ್ತೆ ಮತ್ತೆ ಆಗಮಿಸುತ್ತಾರೆ. ಆಹಾರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

"ಹೋಟೆಲ್​ಗಳಲ್ಲಿ ಊಟ ಹಾಗೂ ಉಪಹಾರಕ್ಕೆ ನೂರಾರು ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಆದ್ರೆ ಇಂದಿರಾ ಕ್ಯಾಂಟೀನ್​ನಲ್ಲಿ ಜನರು ಕೇವಲ 15 ರೂಪಾಯಿಗೆ ಉಪಹಾರ ಹಾಗೂ ಊಟ ಸವಿಯುತ್ತಿದ್ದಾರೆ.‌ ಮೊದಲು ಶೇ.70ರಷ್ಟು ಜನರು ಮಾತ್ರ ಬರುತ್ತಿದ್ದರು. ಆದ್ರೆ‌ ಇದೀಗ ನೂರರಷ್ಟು ಜನ ಇಂದಿರಾ ಕ್ಯಾಂಟೀನ್​ ‌ಊಟ ಮಾಡುತ್ತಿದ್ದಾರೆ. ನಾನು ನಿತ್ಯ ಚಹಾ ಮಾರಾಟ ಮಾಡುತ್ತಾ ಬಂದು ಬೆಳಗ್ಗೆ ಉಪಹಾರ ಮಾಡುತ್ತೇನೆ.‌ ಮತ್ತೆ ಚಹಾದ ಅಂಗಡಿಗೆ ಹೋಗಿ ಮತ್ತೆ ಚಹಾ ತೆಗೆದುಕೊಂಡು ಊಟದ ಸಮಯಕ್ಕೆ ‌ಬಂದು ಊಟ ಮಾಡುತ್ತೇನೆ. ಊಟ ಚೆನ್ನಾಗಿದೆ. ಕಡಿಮೆ ಬೆಲೆಯಲ್ಲಿ ಈ ರೀತಿಯ ಊಟ ಸಿಗಲು ಸಾಧ್ಯವಿಲ್ಲ" ಎಂದು ರಾಜಸ್ಥಾನ ಮೂಲದ ಚಹಾ ಮಾರಾಟಗಾರ ಮಿಥುನ್ ಹೇಳಿದರು.

ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುವ ನವಾಜ್ ಶರೀಪ್ ಮಾತನಾಡಿ, "ನಮಗೆ ಸಂಬಳ ಬಹಳ ಕಡಿಮೆ. ಹೀಗಾಗಿ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟವನ್ನು ಇಲ್ಲಿಯೇ ಮಾಡುತ್ತೇನೆ. ರಾತ್ರಿ ಊಟ ಕೂಡ ಮಾಡುತ್ತೇನೆ. ಇಂತಹ ಊಟ ಎಲ್ಲೂ ಸಿಗುವುದಿಲ್ಲ. ಹೋಟೆಲ್​ಗಳಲ್ಲಿ ಒಂದು ಊಟಕ್ಕೆ ನೂರಾರು ರೂಪಾಯಿ ಕೊಡಬೇಕಾಗುತ್ತದೆ. ಎಲ್ಲಾ ತರಹದ ಜನರು ಬಂದು ಊಟ ಮಾಡಿಕೊಂಡು ‌ಹೋಗುತ್ತಿದ್ದಾರೆ. ಇದರಿಂದ ಬಡವರಿಗೆ ಬಹಳ ಉಪಕಾರವಾಗಿದೆ" ಎಂದರು.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಕೆ ಟೆಂಡರ್​ ವಿಳಂಬ: ಏಪ್ರಿಲ್​ ಬಳಿಕವೇ ಹೊಸ ಮೆನು ಲಭ್ಯ

Last Updated : Aug 23, 2024, 10:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.