ETV Bharat / state

ಪ್ರೀತಿ ವಿಷ್ಯ ಪೋಷಕರಿಗೆ ಹೇಳುವುದಾಗಿ ಬ್ಲ್ಯಾಕ್ ಮೇಲ್: ವಿದ್ಯಾರ್ಥಿನಿಯಿಂದ ಚಿನ್ನಾಭರಣ ಸುಲಿಗೆ ಮಾಡಿದವ ಅರೆಸ್ಟ್​ - Blackmail Case - BLACKMAIL CASE

ಪ್ರೀತಿಸುತ್ತಿರುವ ವಿಷಯವನ್ನು ಪೋಷಕರಿಗೆ ಹೇಳುವುದಾಗಿ ವಿದ್ಯಾರ್ಥಿನಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಡೆಲಿವರಿ ಬಾಯ್​, 75 ಗ್ರಾಂ ಚಿನ್ನ ಸುಲಿಗೆ ಮಾಡಿದ್ದಾನೆ.

Delivery boy extorted jewellery  Black mail to student  Bengaluru
ಆರೋಪಿ ತೇಜಸ್ (ETV Bharat)
author img

By ETV Bharat Karnataka Team

Published : Aug 7, 2024, 2:46 PM IST

Updated : Aug 7, 2024, 5:19 PM IST

ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್ (ETV Bharat)

ಬೆಂಗಳೂರು: ಗೆಳೆಯನ ಜೊತೆಗಿರುವ ಫೋಟೋ ತೆಗೆದು ಪೋಷಕರಿಗೆ ತಿಳಿಸುವುದಾಗಿ ಬೆದರಿಸಿ ಯುವತಿಯಿಂದ 75 ಗ್ರಾಂ ಚಿನ್ನ ಸುಲಿಗೆ ಮಾಡಿದ್ದ ಡೆಲಿವರಿ ಬಾಯ್‌ವೊಬ್ಬನನ್ನು ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೇಜಸ್ (19) ಬಂಧಿತ ಆರೋಪಿ.

ಸುಬ್ರಹ್ಮಣ್ಯಪುರದ ನಾಯ್ಡು ಬಡಾವಣೆಯ ನಿವಾಸಿಯಾಗಿರುವ ಆರೋಪಿ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿನಿಯ ಕುಟುಂಬ ಚಿಕ್ಕಲ್ಲಸಂದ್ರದಲ್ಲಿ ವಾಸವಾಗಿತ್ತು. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಎರಡು ವರ್ಷಗಳ ಹಿಂದೆ ಆರೋಪಿ ಪರಿಚಯವಾಗಿದ್ದ. ಈ ಪರಿಚಯ ಕ್ರಮೇಣ ಸ್ನೇಹಕ್ಕೆ ತಿರುಗಿತ್ತು. ಗೆಳೆಯರಂತೆ ಇಬ್ಬರು ಓಡಾಡಿಕೊಂಡಿದ್ದರು. ಯುವತಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಆರೋಪಿ, ಆಕೆ ಗೆಳೆಯನೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಂಗ್ರಹಿಸಿದ್ದಾನೆ. ಬಳಿಕ ಪ್ರೀತಿ ವಿಷಯ ಪೋಷಕರಿಗೆ ಹೇಳುವುದಾಗಿ ಬ್ಲ್ಯಾಕ್ ಮೇಲ್ ಮಾಡಲು ಶುರು ಮಾಡಿದ್ದ.

ಮನೆಯವರಿಗೆ ವಿಷಯ ತಿಳಿದರೆ ಎಲ್ಲಿ ವ್ಯಾಸಂಗಕ್ಕೆ ಅಡ್ಡಿಯಾಗುತ್ತೋ ಎಂದು ಯುವತಿ ಹೆದರಿದ್ದಳು. ಜೂನ್‌ನಲ್ಲಿ ಯುವತಿಗೆ ಕರೆ ಮಾಡಿ ಪ್ರೀತಿಸುವ ವಿಷಯ ಪೋಷಕರಿಗೆ ಹೇಳಬಾರದೆಂದರೆ ಮನೆಯಲ್ಲಿರುವ ಚಿನ್ನಾಭರಣ ಹಾಗೂ ಹಣ ತಂದುಕೊಡುವಂತೆ ಒತ್ತಡ ಹೇರಿದ್ದ. ಆತನ ಆಣತಿಯಂತೆ ಮನೆಯಲ್ಲಿದ್ದ 75 ಗ್ರಾಂ ಚಿನ್ನಾಭರಣ ಹಾಗೂ 1.25 ಲಕ್ಷ ಹಣವನ್ನು ಹಂತ ಹಂತವಾಗಿ ಯುವತಿ ಕೊಟ್ಟಿದ್ದಳು. ಇತ್ತೀಚೆಗೆ ಯುವತಿ ತಾಯಿ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ಹೋಗಲು ಕರ್ಬೋಡ್​​ನಲ್ಲಿದ್ದ ಚಿನ್ನಾಭರಣ ಇಲ್ಲದಿರುವುದನ್ನು ಕಂಡು ಮಗಳನ್ನು ಪ್ರಶ್ನಿಸಿದಾಗ ನಡೆದ ಘಟನೆಯನ್ನು ಆಕೆ ವಿವರಿಸಿದ್ದಾಳೆ.

ಈ ಸಂಬಂಧ ಯುವತಿ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ 50 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲಾಸರ್​ ಮಾತನಾಡಿ, "ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನ ಬೆದರಿಸಿ ಆಕೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸುಲಿಗೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಚೆನ್ನಮ್ಮನ ಕೆರೆ ಅಚ್ಟುಕಟ್ಟಿನ ಚಿನ್ನದಂಗಡಿಯಲ್ಲಿ ಗಿರವಿ ಇಟ್ಟಿದ್ದ 50 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸ್ಕೂಟರ್​ಗೆ ಲಾರಿ ಡಿಕ್ಕಿ: ತುಂಬು ಗರ್ಭಿಣಿ ಸ್ಥಳದಲ್ಲೇ ಸಾವು, ತಾಯಿ ಹೊಟ್ಟೆಯಿಂದ ಹೊರಬಂದ ಮಗು ಸಾವು - Pregnant died on spot

Last Updated : Aug 7, 2024, 5:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.