ETV Bharat / state

ಹೆಸರುಕಾಳು ಖರೀದಿಗೆ ಮೀನಮೇಷ: ನೋಂದಣಿಯಾದ್ರೂ ಮಾರಾಟ ಮಾಡಲಾಗದೆ ಅನ್ನದಾತ ಕಂಗಾಲು - Delay In Green Gram Purchase - DELAY IN GREEN GRAM PURCHASE

ಹೆಸರುಕಾಳು ಖರೀದಿ ಕೇಂದ್ರದಲ್ಲಿ ರೈತರು ಹೆಸರು ನೋಂದಣಿ ಮಾಡಿಕೊಂಡು ತಿಂಗಳಾಗುತ್ತಾ ಬಂದರೂ, ಹೆಸರುಕಾಳು ಖರೀದಿ ಪ್ರಾರಂಭಿಸದೇ ಇರುವ ಕಾರಣ ಧಾರವಾಡ ಜಿಲ್ಲೆಯ ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Farmer and Green gram
ಹೆಸರು ಕಾಳು ರಾಶಿ ಹಾಕುತ್ತಿರುವ ರೈತ (ETV Bharat)
author img

By ETV Bharat Karnataka Team

Published : Sep 20, 2024, 12:56 PM IST

ಹೆಸರುಕಾಳು ಖರೀದಿಗೆ ಮೀನಮೇಷ (ETV Bharat)

ಹುಬ್ಬಳ್ಳಿ: ಮುಂಗಾರು‌ ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಾದ್ಯಂತ ಉತ್ತಮವಾಗಿ ಹೆಸರುಕಾಳು ಬೆಳೆಯಲಾಗಿದೆ. ರಾಜ್ಯ ಸರ್ಕಾರದ ಸೂಚನೆಯಂತೆ ಖರೀದಿ ಕೇಂದ್ರಗಳನ್ನೂ ತೆರೆಯಲಾಗಿದೆ. ಆದರೆ ತಿಂಗಳು ಕಳೆಯುತ್ತಾ ಬಂದರೂ ಖರೀದಿ ಪ್ರಕ್ರಿಯೆ ಶುರುವಾಗದೇ ಬೆಳೆಗಾರರು ನೂರೆಂಟು ತೊಂದರೆ ಎದುರಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಕ್ವಿಂಟಲ್‌ ಹೆಸರುಕಾಳಿಗೆ 8,682 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಅದಕ್ಕನುಗುಣವಾಗಿ ರಾಜ್ಯ ಸರ್ಕಾರ ಕಳೆದ ತಿಂಗಳು ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಆಯಾ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 20 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಇದುವರೆಗೂ ನೋಂದಣಿ ಪ್ರಕ್ರಿಯೆ ಮಾತ್ರ ನಡೆಸಲಾಗಿದೆ. ಕಾಳು ಖರೀದಿ ಮಾಡುತ್ತಿಲ್ಲ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಧಾರವಾಡ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಮೊರಬ, ಆರೇಕುರಹಟ್ಟಿ, ಬ್ಯಾಹಟ್ಟಿ, ನೂಲ್ವಿ ಸೇರಿ 20 ಕೇಂದ್ರಗಳಲ್ಲಿ ಈವರೆಗೆ 4,123 ರೈತರು ಹೆಸರುಕಾಳು ಖರೀದಿಗೆ ಕೊಡಲು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಖರೀದಿ ಕೇಂದ್ರಕ್ಕೆ ಹೆಸರುಕಾಳು ತೆಗೆದುಕೊಂಡು ಬನ್ನಿ ಎಂದು ಅಧಿಕಾರಿಗಳು ಹೇಳುತ್ತಿಲ್ಲ. ಬೆಳೆಗಾರರು ಫಸಲು ಮನೆಯಲ್ಲಿ ಇಟ್ಟುಕೊಳ್ಳಲೂ ಆಗದೇ, ಮಾರಾಟ ಮಾಡಲೂ ಆಗದೇ ಸಂಕಷ್ಟ ಎದುರಿಸುತ್ತಿರುವುದಾಗಿ ರೈತರು ಹೇಳುತ್ತಿದ್ದಾರೆ.

ಈ ಕುರಿತಂತೆ ರೈತ ಮುಖಂಡ ಶಿವಣ್ಣ ಹುಬ್ಬಳ್ಳಿ ಪ್ರತಿಕ್ರಿಯಿಸಿ, "ಅಧಿಕಾರಿಗಳಿಗೆ ರೈತರ ಕಷ್ಟ ಗೊತ್ತಾಗುತ್ತಿಲ್ಲ. ಕಳೆದ ಒಂದು ತಿಂಗಳಿಂದ ನಿರಂತರ ಮಳೆಯಿಂದಾಗಿ ಹೆಸರು ಕಾಳು ಒಣಗಿಸಲು ರೈತರಿಗೆ ತೊಂದರೆಯಾಗಿದೆ. ಅದರ ಜೊತೆಗೆ ಈಗ ಜಿಲ್ಲೆಯಲ್ಲಿ 20 ಖರೀದಿ ಕೇಂದ್ರಗಳನ್ನು ತೆರೆದಿದ್ದೇವೆ ಅಂತ ಹೇಳಿದ್ದಾರೆ.‌ ರೈತರು ಹೆಸರು ಕೂಡ ನೋಂದಣಿ ಮಾಡಿದ್ದಾರೆ‌. ಹೆಸರು ನೋಂದಣಿ ಮಾಡಿಕೊಂಡು ಇಪ್ಪತ್ತು ದಿನಗಳಾದರೂ ಒಂದು ಕ್ವಿಂಟಲ್ ಹೆಸರುಕಾಳನ್ನೂ ಖರೀದಿಸಿಲ್ಲ. ಈಗಾಗಲೇ ಸಣ್ಣ ಸಣ್ಣ ರೈತರು ಖರ್ಚು‌ ನೀಗಿಸಲು 6,000, 7,000 ಹಾಗೂ 7,500ಕ್ಕೆ ಮಾರಾಟ ಮಾಡಿದ್ದಾರೆ. ದೊಡ್ಡ ರೈತರು ಮಾತ್ರ ಇಟ್ಟುಕೊಂಡಿದ್ದಾರೆ. ಸಣ್ಣ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಇವರು ಖರೀದಿ ಮಾಡುವುದಿಲ್ಲ ಎಂದು ಹೇಳಿದ್ರೆ ರೈತರು ತಮಗೆ ಬೇಕಾದಲ್ಲಿ ಮಾರಾಟ ಮಾಡುತ್ತಿದ್ದರು. ಮುಂದಾದರೂ ಸರ್ಕಾರ ಕೂಡಲೇ ಖರೀದಿ ಪ್ರಾರಂಭ ಮಾಡಿ ರೈತರ ಖಾತೆಗೆ ಹಣ ಹಾಕುವ ಕೆಲಸ ಮಾಡಬೇಕು" ಎಂದು ಒತ್ತಾಯಿಸಿದರು.

ರೈತ ಮುಖಂಡ ಗುರು ರಾಯನಗೌಡರ ಮಾತನಾಡಿ, "ಮಳೆ ಹೆಚ್ಚಾಗಿದ್ದರಿಂದ ಗುಣಮಟ್ಟದ ಹೆಸರು ಕಾಳು ಬಂದಿಲ್ಲ. ಹೀಗಾಗಿ ಗುಣಮಟ್ಟ ನೋಡಿ ಖರೀದಿ ಮಾಡುತ್ತಾರೆ. ಆಗ ಅನಿವಾರ್ಯವಾಗಿ ರೈತರು ವ್ಯಾಪಾರಸ್ಥರಿಗೆ ಕೊಡಬೇಕಾಗುತ್ತದೆ. ಇದರಿಂದ ರೈತರಿಗೆ ತುಂಬ ನಷ್ಟವಾಗಲಿದೆ. ನನ್ನಲ್ಲಿ ಗುಣ್ಣಮಟ್ಟದ ಹೆಸರುಕಾಳು ಇತ್ತು. ಆದರೆ ಬೇಗ ಖರೀದಿ ಮಾಡಲಿಲ್ಲ. ಹೀಗಾಗಿ 7,400ಕ್ಕೆ ಕೊಟ್ಟಿದ್ದೇನೆ. ನನಗೆ ದುಡ್ಡಿನ ಅವಶ್ಯಕತೆ ಇದೆ. ಸರ್ಕಾರ ‌ಇನ್ನೂ ಖರೀದಿ ಮಾಡದಿದ್ದರೆ ಉಳಿದ ರೈತರು ಇದೇ ಹಾದಿ ಹಿಡಿಯುತ್ತಾರೆ. ಕೆಲವು ಕಪ್ಪು ಕಾಳು ಸಿಕ್ಕವು. ಆಗ 6 ಸಾವಿರದಂತೆ ವ್ಯಾಪಾರಸ್ಥರಿಗೆ ಕೊಟ್ಟಿದ್ದೇವೆ" ಎಂದರು.

ಕಳೆದ ವರ್ಷ 15 ಕ್ವಿಂಟಲ್ ಖರೀದಿ ಮಿತಿ ಇತ್ತು‌. ಈ ಬಾರಿ 10 ಕ್ವಿಂಟಲ್​ ಮಾಡಿದ್ದಾರೆ. ಅದಲ್ಲದೆ ಈಗ ರೈತರು ನೋಂದಣಿ ಮಾಡಲು ತಂಬ್​ ಇಂಪ್ರೆಸ್ ಕೊಡುವುದು ಮಾಡಿದ್ದಾರೆ. ಇದರಿಂದ ರೈತರಿಗೆ ನೋಂದಣಿ‌ ಮಾಡಲು ಕಷ್ಟವಾಗುತ್ತದೆ. ‌ಮನೆಯಲ್ಲಿ ವೃದ್ಧರಿದ್ದರೆ ಅವರನ್ನು ‌ಕರೆದುಕೊಂಡು ಬಂದು ತಂಬ್ ಕೊಡಬೇಕಾಗಿದೆ. ಇದು ಅವೈಜ್ಞಾನಿಕ. ರೈತರು ಜಮೀನು ಪಾಣಿ, ಆಧಾರ್​ ನಂಬರ್​, ಬ್ಯಾಂಕ್ ಮಾಹಿತಿ ನೀಡುವುದರಿಂದ ಯಾವುದೇ ಅವ್ಯವಹಾರ ನಡೆಯುವುದಿಲ್ಲ. ಸರ್ಕಾರ ‌ಈಗಲಾದರೂ ಕೂಡಲೇ ‌ಖರೀದಿ ಪ್ರಾರಂಭ ಮಾಡಿ ಹಣವನ್ನು ರೈತರ ಖಾತೆಗೆ ಹಾಕಬೇಕು" ಎಂದು ಒತ್ತಾಯಿಸುತ್ತಿದ್ದಾರೆ.

ಗುರಿ ಮೀರಿ ಬಿತ್ತನೆ: 2024ರ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯಲ್ಲಿ 67,150 ಹೆಕ್ಟೇ‌ರ್ ಹೆಸರು ಬಿತ್ತನೆಯ ಗುರಿ ಇತ್ತು. ಆದರೆ, ಗುರಿ ಮೀರಿ ಹೆಸರು ಬಿತ್ತನೆಯಾಗಿದ್ದು, 94,956 ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಸುಮಾರು 27ಸಾವಿರ ಹೆಕ್ಟೇ‌ರ್ ಹೆಚ್ಚು ಬಿತ್ತನೆಯಾಗಿದೆ. ಹಾಗಾಗಿ ನಿರೀಕ್ಷೆಗಿಂತ ಹೆಚ್ಚು ಫಸಲು ಬಂದಿದೆ.

"ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ನೋಂದಣಿಯಾಗಿರುವ ರೈತರಿಂದ ಶೀಘ್ರ ಹೆಸರು ಖರೀದಿ ಮಾಡಲಾಗುವುದು. ಇದಕ್ಕಾಗಿ ಸಾಫ್ಟ್​ವೇರ್ ಪರಿಶೀಲನೆ ನಡೆಸಲಾಗುತ್ತಿದೆ" ಎಂದು ಮಾರ್ಕೆಟಿಂಗ್ ಫೆಡರೇಷನ್ ಶಾಖಾ ವ್ಯವಸ್ಥಾಪಕ ವಿನಯ್​ ಪಾಟೀಲ್​ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಳಪೆ ಬೀಜದಿಂದ ಬೆಳೆ ನಷ್ಟ: ಹಾಳಾದ ಆಲೂಗಡ್ಡೆ ಕಿತ್ತೆಸೆದು ಬೆಳಗಾವಿ ರೈತರ ಆಕ್ರೋಶ - Belagavi Farmers Protest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.