ETV Bharat / state

ಮೈಸೂರು ಮೃಗಾಲಯದಿಂದ ಕಾಳಿ ಅರಣ್ಯ ಪ್ರದೇಶಕ್ಕೆ 40 ಚುಕ್ಕಿ ಜಿಂಕೆಗಳ ಸ್ಥಳಾಂತರ - ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ

ಮೈಸೂರು ಮೃಗಾಲಯದಿಂದ ಕಾಳಿ ಅರಣ್ಯ ಪ್ರದೇಶಕ್ಕೆ 40 ಜಿಂಕೆಗಳನ್ನು ವಿಶೇಷ ರೀತಿಯ ಟ್ರಕ್​ಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಮೈಸೂರು ಮೃಗಾಲಯದಿಂದ ಕಾಳಿ ಅರಣ್ಯ ಪ್ರದೇಶಕ್ಕೆ 40 ಚುಕ್ಕಿ ಜಿಂಕೆಗಳ ಸ್ಥಳಾಂತರ

author img

By ETV Bharat Karnataka Team

Published : Feb 23, 2024, 5:04 PM IST

ಮೈಸೂರು: ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಜಿಂಕೆಗಳ ಸಂತತಿ ಹೆಚ್ಚಾಗಿದೆ. ಈ ಹಿನ್ನೆಲೆ ಸುಮಾರು 40 ಚುಕ್ಕಿ ಜಿಂಕೆಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಿಶೇಷ ರೀತಿಯ ಟ್ರಕ್​ಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಶತಮಾನೋತ್ಸವ ಕಂಡಿರುವ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಜಿಂಕೆಗಳ ಸಂತತಿ ಕೆಲವು ವರ್ಷಗಳಿಂದ ಹೆಚ್ಚಾಗಿವೆ. ಮೃಗಾಲಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಜಿಂಕೆಗಳು ಇವೆ. ಹೀಗಾಗಿ ಮೈಸೂರು ಮೃಗಾಲಯದ ಅಧಿಕಾರಿಗಳು ವಿಶೇಷ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದ ಟ್ರಕ್​ಗಳಲ್ಲಿ 40 ಜಿಂಕೆಗಳನ್ನ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸುಮಾರು 2.5 ಎಕರೆ ವಿಸ್ತೀರ್ಣದಲ್ಲಿ ಸುರಕ್ಷಿತವಾಗಿ ತಂತಿ ಬೇಲಿ ಹಾಕಿರುವ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಕಾಳಿ ಅರಣ್ಯ ಪ್ರದೇಶ
ಕಾಳಿ ಅರಣ್ಯ ಪ್ರದೇಶ

ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರ: ಕಳೆದ ಮೂರು ತಿಂಗಳಿಂದ ಮೈಸೂರು ಮೃಗಾಲಯದ ಆವರಣದಲ್ಲಿ ದೊಡ್ಡ ಪ್ರಮಾಣದ ಮೂರು ಬೋನ್​ಗಳನ್ನು ಇಟ್ಟು, ಅದರೊಳಗೆ ಜಿಂಕೆಗಳು ತಿನ್ನುವ ಆಹಾರ ಪದಾರ್ಥಗಳನ್ನು ಇಟ್ಟು, ಅವುಗಳಿಗೆ ಆಹಾರ ಪದ್ಧತಿಯನ್ನು ರೂಢಿ ಮಾಡಲಾಯಿತು. ಬಳಿಕ ಆಹಾರ ಪದಾರ್ಥಗಳನ್ನು ತಿನ್ನಲು ಅಭ್ಯಾಸ ಮಾಡಿಕೊಂಡ 40 ಜಿಂಕೆಗಳನ್ನ ಮೂರು ಬೋನ್​ಗಳಲ್ಲಿ ಇಟ್ಟು, ಕ್ರೇನ್​ಗಳ ಮೂಲಕ ಆ ಬೋನ್​ಗಳನ್ನು ಲಾರಿಯಲ್ಲಿ ಇಟ್ಟುಕೊಂಡು ಯಶಸ್ವಿಯಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಯಿತು.

ಜಿಂಕೆಯನ್ನು ಬಿಡಲು ಸುರಕ್ಷಿತವಾಗಿ ಬೇಲಿ ನಿರ್ಮಿಸಿರುವುದು

ಅಲ್ಲಿನ ಪ್ರದೇಶಕ್ಕೆ ಜಿಂಕೆಗಳು ಹೊಂದಿಕೊಂಡ ನಂತರ ಕಾಡಿಗೆ ಅವುಗಳನ್ನು ಮುಕ್ತವಾಗಿ ಬಿಡಲು ಮೃಗಾಲಯದ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಮೈಸೂರು ಮೃಗಾಲಯದಿಂದ ಅರಬಿ ತಿಟ್ಟು ಅರಣ್ಯ ಪ್ರದೇಶಕ್ಕೆ 52 ಜಿಂಕೆಗಳನ್ನ ಸ್ಥಳಾಂತರ ಮಾಡಲಾಗಿತ್ತು. ಈ ಬಾರಿ 40 ಜಿಂಕೆಗಳನ್ನ ಸ್ಥಳಾಂತರ ಮಾಡಲಾಗಿದೆ.

ಮೈಸೂರು ಮೃಗಾಲಯದ ಅಧಿಕಾರಿಗಳು
ಮೈಸೂರು ಮೃಗಾಲಯದ ಅಧಿಕಾರಿಗಳು

ಟ್ರಕ್​ಗಳ ಮೂಲಕ ಜಿಂಕೆಗಳ ಸ್ಥಳಾಂತರ: ಈ ಬಗ್ಗೆ ಮೈಸೂರು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ ಕುಮಾರ್ ಮಾತನಾಡಿ, ಮೃಗಾಲಯದಲ್ಲಿ ಜಿಂಕೆ ಸಂತತಿ ಹೆಚ್ಚಿದ ಹಿನ್ನೆಲೆ ಅವುಗಳನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲು ತೀರ್ಮಾನಿಸಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ 40 ಜಿಂಕೆಗಳನ್ನ ಸುರಕ್ಷಿತವಾಗಿ ಟ್ರಕ್​ಗಳ ಮೂಲಕ ಸ್ಥಳಾಂತರ ಮಾಡಲಾಯಿತು ಎಂದು ಈಟಿವಿ ಭಾರತ್​ಗೆ ಮಾಹಿತಿ ನೀಡಿದರು.

ಇದನ್ನೂ ಓದಿ : ಜಿಂಕೆ ಬೇಟೆಯಾಡಿದ ಚಿರತೆ: ಕಬಿನಿಯ ದೃಶ್ಯ ಕ್ಯಾಮರಾದಲ್ಲಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.