ಬೆಂಗಳೂರು : ಬಿಜೆಪಿ-ಜೆಡಿಎಸ್ ಪರ್ಮನೆಂಟ್ ಮೈತ್ರಿ ಇರಲಿ, ನಮ್ಮದೇನು ಅಭ್ಯಂತರ ಇಲ್ಲ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ಅವರು ಟೀಕಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಯಲ್ಲೂ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಪರ್ಮನೆಂಟಾಗಿ ಮೈತ್ರಿ ಇರಲಿ. ನಮ್ಮದೇನು ಅಭ್ಯಂತರ ಇಲ್ಲ. ಯಾರ ಫೋಟೋ ಹಾಕಿಕೊಂಡಾದ್ರು ಎಲೆಕ್ಷನ್ಗೆ ಹೋಗ್ಲಿ, ನಮಗೆ ಸಂಬಂಧವಿಲ್ಲ. ಯಾರು ಬೇಕಾದ್ರು ಜೋಡಣೆ ಮಾಡಿಕೊಳ್ಳಲಿ ನಮಗೇನು ಅಭ್ಯಂತರವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪಿಎಂ ಮೋದಿ ಒಂದೇ ವರ್ಷ ಎಂಬ ಕೇಜ್ರಿವಾಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನನ್ನ ಪ್ರಕಾರ ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿ ಕೂಟದ ಇಂಡಿಯಾ ಬರುತ್ತೆ. ಬಿಜೆಪಿಯವರು ಪ್ರಧಾನಿಯಾಗಲು ಸಾಧ್ಯವೇ ಇಲ್ಲ. ಇಂಡಿಯಾ ಮೈತ್ರಿ ಕೂಟ ಭಾರತ ದೇಶವನ್ನ ಆಳುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ಕೊಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಎಷ್ಟು ದಿನ ಮಾತನಾಡ್ಲಿ ಅದರ ಬಗ್ಗೆ. ಸ್ವಲ್ಪ ದಿನ ರೆಸ್ಟ್ ಕೊಡೋಣ ಎಂದು ಹೆಚ್ಚಿಗೆ ಪ್ರತಿಕ್ರಿಯಿಸದೆ ತೆರಳಿದರು.
ಇದನ್ನೂ ಓದಿ : ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಕಟ್ಟಿಹಾಕಿರುವವರು ಯಾರು: ಡಿ ಕೆ ಶಿವಕುಮಾರ್ - DCM D K Shivakumar