ETV Bharat / state

ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಸಿ.ಟಿ. ರವಿ 12 ಬಾರಿ‌ ಅವಾಚ್ಯ ಪದ ಬಳಸಿದ್ದಾರೆ, ನನ್ನ ಬಳಿ ದಾಖಲೆ ಇದೆ: ಡಿಕೆಶಿ - DCM D K SHIVAKUMAR

ವಿಧಾನಪರಿಷತ್​ನಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿರುವ ಆರೋಪ ಪ್ರಕರಣ ಸಂಬಂಧ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.

d k shivakumar
ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : 6 hours ago

ಬೆಳಗಾವಿ: ಸಿ.ಟಿ.ರವಿ ಅವರು 12 ಬಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿದ್ದಾರೆ. ಇದು ದಾಖಲೆಯಲ್ಲಿದೆ. ಬೇಕಾದರೆ ಮಾಧ್ಯಮಗಳಿಗೆ ನಾನು ದಾಖಲೆ ನೀಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​​ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ನಮ್ಮ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರನ್ನು ನಿಂದಿಸಿದ್ದಕ್ಕೆ ಪರಿಷತ್​​ನಲ್ಲಿ ಚರ್ಚೆ ಆಗಿದೆ. ನಮ್ಮ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ನಿಂದಿಸಿದಾಗ ಬಿಜೆಪಿಯವರ ವಿರುದ್ಧ ಹೋರಾಟ ಮಾಡಬೇಕಾಯಿತು. ಅದೇ ವೇಳೆ ಇವರು ಹೆಣ್ಣುಮಗಳ ಮೇಲೆ ಆಕ್ಷೇಪಾರ್ಹವಾಗಿ ಕರೆದಿದ್ದಾರೆ'' ಎಂದು ಆರೋಪಿಸಿದರು.

ಡಿ.ಕೆ.ಶಿವಕುಮಾರ್ (ETV Bharat)

ಸಭಾಪತಿ ಪಕ್ಷಾತೀತವಾಗಿ ಇರಬೇಕು: ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧವೂ ಅಸಮಾಧಾನ‌ ಹೊರಹಾಕಿದ ಡಿಕೆಶಿ, ''ಸಭಾಪತಿ ಅವರ ವಿಚಾರ ನನಗೆ ಸರಿ ಅನಿಸಿಲ್ಲ. ಅವರು ಚರ್ಚೆಗೆ ಅವಕಾಶ ಮಾಡಿ ಕೊಡಬೇಕಿತ್ತು. ಏನಾಗಿದೆ ಎಂದು ಪರಿಶೀಲಿಸಬೇಕಿತ್ತು‌‌. ಲಕ್ಷ್ಮೀ ಅವರ ತಪ್ಪಿದ್ದರೆ ಅವರಿಗೇ ತಪ್ಪು ಎಂದು ಹೇಳಬೇಕಿತ್ತು. ರವಿ ತಪ್ಪಿದ್ದರೆ ಅವರಿಗೆ ಹೇಳಬೇಕಿತ್ತು. ಹಿರಿಯ ರಾಜಕಾರಣಿಯಾದ ಅವರಿಗೆ ಇದು ಗೊತ್ತಿರಬೇಕಿತ್ತು. ಅವರು ಯಾವುದೇ ಪಕ್ಷದವರಾಗಿರಲಿ. ಆದರೆ, ಅವರ ಹುದ್ದೆ ಪಕ್ಷಾತೀತವಾಗಿ ಇರಬೇಕು'' ಎಂದು ಕಿಡಿಕಾರಿದರು.

''ನನ್ನ ಕೊಲೆಗೆ ಯತ್ನ ಎಂದು ಸಿ.ಟಿ.ರವಿ ಆರೋಪಕ್ಕೆ ಸುಮ್ಮನೆ ಈ ರೀತಿ ಹೇಳುತ್ತಿದ್ದಾರೆ. ಪೊಲೀಸರು ಏನು ಮಾಡಿದರು ಅಂತಾ ನನಗೆ ಗೊತ್ತಿಲ್ಲ. ಬಿಜೆಪಿ ನಾಯಕರು ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಕುಳಿತು ಸಭೆ ಮಾಡಬಹುದೇ? ಒಬ್ಬ ಆರೋಪಿಯನ್ನು ಭೇಟಿ ಮಾಡಲು ಬಿಟ್ಟಿದ್ದು ಸರಿನಾ? ಹಿರಿಯ ನಾಯಕರಿಗೆ ಅವಕಾಶ ನೀಡಿದರೆ ಇವರು ಠಾಣೆಯಲ್ಲೇ ಸಭೆ ಮಾಡಿದ್ದಾರೆ. ಪೊಲೀಸರು ಯಾರೊಂದಿಗೂ ನಡೆದುಕೊಳ್ಳದಷ್ಟು ಸೌಜನ್ಯದಿಂದ ಬಿಜೆಪಿ ನಾಯಕರೊಂದಿಗೆ ವರ್ತಿಸಿದ್ದಾರೆ. ಒಂದು ಅರ್ಥದಲ್ಲಿ ಪೊಲೀಸರ ನಡೆಯೂ ಸರಿ ಅಲ್ಲ'' ಎಂದು ಡಿ.ಕೆ.ಶಿವಕುಮಾರ್​​ ಅಸಮಾಧಾನ ಹೊರಹಾಕಿದರು.

''ಪ್ರಕರಣದಲ್ಲಿ ನಾವು ಯಾವುದೇ ರೀತಿ ಮಧ್ಯಪ್ರವೇಶ ಮಾಡುತ್ತಿಲ್ಲ. ನಾವು ಹೇಳಿದ ಹಾಗೆ ಪೊಲೀಸರು ಕೇಳಬೇಕಾಗಿಯೂ ಇಲ್ಲ. ಆರೋಪಿಯ ಕುಟುಂಬದ ಸದಸ್ಯರು ಒಂದಿಬ್ಬರು ಭೇಟಿ ಮಾಡಲು ಬಿಡಬಹುದು. ಆದರೆ, ಇವರು ಸಭೆಯನ್ನೇ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ಅವರನ್ನು ಎಲ್ಲಿ ಕೊಲೆ ಮಾಡಲು ಸಾಧ್ಯ? ಆರ್.ಅಶೋಕ್‌ ಹೇಗೆ ಈ ಆರೋಪ ಮಾಡುತ್ತಾರೆ?'' ಎಂದು ಡಿ.ಕೆ.ಶಿವಕುಮಾರ ಪ್ರಶ್ನಿಸಿದರು.

ಕಾರ್ಯಕರ್ತರು ಆಕ್ರೋಶಕ್ಕೊಳಗಾಗುವುದು ಸ್ವಾಭಾವಿಕ: ''ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವರ ಸ್ವಂತ ಕ್ಷೇತ್ರದಲ್ಲೇ ಈ ರೀತಿ ನಿಂದಿಸಿದ್ದಾರೆ. ಕಾರ್ಯಕರ್ತರಿಗೆ ಗೊತ್ತಾಗಿದ್ದರಿಂದ ಆಕ್ರೋಶಕ್ಕೆ ಒಳಗಾಗುವುದು ಸ್ವಾಭಾವಿಕ. ಆ ಹೆಣ್ಣು ಮಗಳಿಗೆ, ಆ ತಾಯಿಗೆ, ಅವರ ಪ್ರತಿನಿಧಿಗೆ ಅವಮಾನ ಆದಾಗ ಎಲ್ಲರೂ ಸಹಜವಾಗಿ ಇದೇ ರೀತಿ ವರ್ತಿಸುತ್ತಾರೆ'' ಎಂದು ನಿನ್ನೆ ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದನ್ನು ಡಿ.ಕೆ.ಶಿವಕುಮಾರ್​ ಸಮರ್ಥಿಸಿಕೊಂಡರು.

ಇದನ್ನೂ ಓದಿ: ಸದನದಲ್ಲಿ ಅಶ್ಲೀಲ ಪದ ಬಳಕೆ ವಿಚಾರ ಯಾರೂ ಖಂಡಿಸದೇ ಇರುವುದು ನೆನೆದು ಗದ್ಗದಿತರಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.