ETV Bharat / state

ದಾವಣಗೆರೆ: ಕೆಎಸ್ಆರ್​ಟಿಸಿ ಬಸ್-ಓಮ್ನಿ ನಡುವೆ ಅಪಘಾತ, ಮೂವರು ಸಾವು - Davanagere Accident - DAVANAGERE ACCIDENT

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

Accident between KSRTC bus and omni car
ಕೆಎಸ್ಆರ್​ಟಿಸಿ ಬಸ್ ಓಮ್ನಿ ನಡುವೆ ಅಪಘಾತ
author img

By ETV Bharat Karnataka Team

Published : Apr 11, 2024, 10:57 PM IST

ದಾವಣಗೆರೆ: ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟಿ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರ್ ನಡುವೆ ಇಂದು ನಡೆದ ಅಪಘಾತದಲ್ಲಿ ಮೂವರು ಸಾವಿಗೀಡಾಗಿದ್ದು, ಆರು ಜನರು ಗಾಯಗೊಂಡಿದ್ದಾರೆ. ಮೃತರನ್ನು ನಂಜುಂಡಪ್ಪ (83), ದೇವರಾಜ್ (27) ಮತ್ತು ರಾಕೇಶ್ (30) ಎಂದು ಗುರುತಿಸಲಾಗಿದೆ.

ರಾಕೇಶ್ ಮತ್ತು ದೇವರಾಜ್ ಇಬ್ಬರೂ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಗ್ರಾಮದ ನಿವಾಸಿಗಳು. ನಂಜುಂಡಪ್ಪ ಎಂಬವರು ಹರಮಘಟ್ಟ ಗ್ರಾಮದ ನಿವಾಸಿ. ಗಾಯಗೊಂಡ ಆರು ಜನರಲ್ಲಿ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರು ನ್ಯಾಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಡೆಯಿಂದ ಕೆಎಸ್ಆರ್ಟಿಸಿ ಬಸ್ ಬರುತ್ತಿದ್ದರೆ ಶಿವಮೊಗ್ಗದ ಕಡೆಯಿಂದ ಓಮ್ನಿ ಕಾರು ಸಂಚರಿಸುತ್ತಿತ್ತು ಎನ್ನಲಾಗಿದೆ.

ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

ಇದನ್ನೂಓದಿ: Watch: ಬೈಕ್​ ಸವಾರನಿಗೆ ಏಕಾಏಕಿ ಗುಮ್ಮಿದ ಕೋಲೆ ಬಸವ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Bull Attack

ETV Bharat Logo

Copyright © 2025 Ushodaya Enterprises Pvt. Ltd., All Rights Reserved.