ETV Bharat / state

ಮೈಸೂರು: ದಸರಾ ಗಜಪಡೆಯ ಸಾಮೂಹಿಕ ಮಜ್ಜನ ವಿಡಿಯೋ - Gajapade mass bathing - GAJAPADE MASS BATHING

ಗೋಪಿ, ಭೀಮ, ಮಹೇಂದ್ರ, ಪ್ರಶಾಂತ, ಹಿರಣ್ಯ ಆನೆಗಳಿಗೆ ಇಂದು ಮಾವುತರು ಮತ್ತು ಕಾವಾಡಿಗರು ಸೇರಿ ಬಿಸಿಲಿನಲ್ಲಿ ವಿಶೇಷ ಮಜ್ಜನ ಮಾಡಿಸಿದ ವಿಡಿಯೋ ಇಲ್ಲಿದೆ.

ದಸರಾ ಗಜಪಡೆಯ ಸಾಮೂಹಿಕ ಮಜ್ಜನ
ದಸರಾ ಗಜಪಡೆಯ ಸಾಮೂಹಿಕ ಮಜ್ಜನ (ETV Bharat)
author img

By ETV Bharat Karnataka Team

Published : Sep 23, 2024, 4:57 PM IST

ಮೈಸೂರು: ಜಂಬೂ ಸವಾರಿ ಮೆರವಣಿಗೆಗೆ ಆಗಮಿಸಿರುವ ಗಜಪಡೆ ಮೈಸೂರು ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿ ಬೀಡು ಬಿಟ್ಟಿದೆ. ಈ ಗಜಪಡೆಗೆ ನಿತ್ಯ ತಾಲೀಮು, ವಿಶೇಷ ಆಹಾರ ಹಾಗೂ ಎಣ್ಣೆ ಹಾಕಿ ವಿಶೇಷ ಮಜ್ಜನ ಮಾಡಿಸಲಾಗುತ್ತಿದೆ. ಅರಮನೆ ಆವರಣದ ಆನೆ ಕೊಳದಲ್ಲಿ ಗಜಪಡೆ ಸ್ನಾನ ಮಾಡುತ್ತಿರುವ ಅಪರೂಪದ ವಿಡಿಯೋ ಇಲ್ಲಿದೆ.

ಗೋಪಿ, ಭೀಮ, ಮಹೇಂದ್ರ, ಪ್ರಶಾಂತ, ಹಿರಣ್ಯ ಆನೆಗಳು ಒಟ್ಟಿಗೆ ಬಿಸಿಲಿನಲ್ಲಿ ಸಾಮೂಹಿಕವಾಗಿ ಸ್ನಾನ ಮಾಡಿರುವುದು ವಿಶೇಷವಾಗಿದೆ. ಮಾವುತರು ಮತ್ತು ಕಾವಾಡಿಗರು ಆನೆಗಳ ಮೈತಿಕ್ಕಿ, ಸ್ವಚ್ಛಗೊಳಿಸಿ ತಣ್ಣೀರಿನಲ್ಲಿ ಮಜ್ಜನ ಮಾಡಿಸಿದ್ದಾರೆ. ಒಟ್ಟು 14 ಆನೆಗಳು ಈ ಬಾರಿಯ ದಸರಾದಲ್ಲಿ ಭಾಗವಹಿಸುತ್ತಿದ್ದು, ದಿನಕ್ಕೆ ಎರಡು ಬಾರಿ ನಗರ ಜಂಬೂಸವಾರಿ ಸಾಗುವ ದಾರಿಯಲ್ಲೇ ತಾಲೀಮು ನಡೆಸಲಾಗುತ್ತದೆ.

ದಸರಾ ಗಜಪಡೆಯ ಸಾಮೂಹಿಕ ಮಜ್ಜನ ವಿಡಿಯೋ (ETV Bharat)

ಗೋಪಿ , ಭೀಮ , ಪ್ರಶಾಂತ , ಮಹೇಂದ್ರ ಆನೆಗಳಿಗೆ ಮುಂದಿನ ದಸಾರ ಸಂಭ್ರಮದಲ್ಲಿ ಚಿನ್ನದ ಅಂಬಾರಿ ಹೊರಿಸುವ ಸಲುವಾಗಿ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತಿದೆ.‌

ಇದನ್ನೂ ಓದಿ: ದಸರಾ ಆನೆಗಳ ಬಳಿ ರೀಲ್ಸ್ ಮಾಡಲು ಅವಕಾಶ ನೀಡದಂತೆ ಸಚಿವ ಈಶ್ವರ್ ಖಂಡ್ರೆ ಸೂಚನೆ - ban on reels near elephants

ETV Bharat Logo

Copyright © 2024 Ushodaya Enterprises Pvt. Ltd., All Rights Reserved.