ETV Bharat / state

ನಟ ದರ್ಶನ್ ಪ್ರಕರಣ: ರೇಣುಕಾಸ್ವಾಮಿ ಪೋಷಕರು, ಪರಿಚಿತರ ಹೇಳಿಕೆ ದಾಖಲು - Renukaswamy Murder Case

author img

By ETV Bharat Karnataka Team

Published : Jul 5, 2024, 11:32 AM IST

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಸ್ಥರು, ಪರಿಚಿತರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Darshan
ನಟ ದರ್ಶನ್ (ETV Bharat)

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, ಕೃತ್ಯದ ವೇಳೆ ಘಟನಾ ಸ್ಥಳದಲ್ಲಿದ್ದ ಕಿರಣ್ ಹಾಗೂ ಪ್ರವೀಣ್ ಎಂಬವರ ಹೇಳಿಕೆಗಳನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ದಾಖಲಿಸಿಕೊಂಡಿದ್ದಾರೆ.

ಹತ್ಯೆ ನಡೆದ ಪಟ್ಟಣಗೆರೆಯ ಶೆಡ್​ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್, ಪ್ರವೀಣ್ ಕರೆಸಿ ಜೂನ್ 22ರಂದು ಹೇಳಿಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಹತ್ಯೆಯಾದ ದಿನ ಶೆಡ್​​​ಗೆ ಯಾರ್ಯಾರು ಬಂದಿದ್ದರು?, ಶೆಡ್​​ನಲ್ಲಿ ಏನಾಯ್ತು? ಎಂಬ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

ಮತ್ತೊಂದೆಡೆ, ಚಿತ್ರದುರ್ಗಕ್ಕೆ ತೆರಳಿರುವ ತನಿಖಾ ತಂಡ, ರೇಣುಕಾಸ್ವಾಮಿ ಕುಟುಂಬಸ್ಥರು ಹಾಗೂ ಪರಿಚಿತರ ಹೇಳಿಕೆ ಪಡೆದಿದ್ದಾರೆ. ಪೋಷಕರಾದ ಕಾಶಿನಾಥ ಶಿವನಗೌಡರ ಹಾಗೂ ರತ್ನಪ್ರಭಾ, ಪತ್ನಿ ಸಹನಾ, ಸಹೋದರಿ ಸುಚೇತಾರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಕೆಲಸ ಮಾಡುತ್ತಿದ್ದ ಫಾರ್ಮಸಿ ಸಿಬ್ಬಂದಿಯ ಹೇಳಿಕೆಯನ್ನೂ ಪಡೆಯಲಾಗಿದೆ.

ಇದನ್ನೂ ಓದಿ: ನಟ ದರ್ಶನ್, ಇತರೆ ಆರೋಪಿಗಳ ನ್ಯಾಯಾಂಗ ಬಂಧನ ಜುಲೈ 18ರವರೆಗೆ ವಿಸ್ತರಣೆ - Renukaswamy Murder Case

ಫಾರ್ಮಸಿ ಸಿಬ್ಬಂದಿ ಜ್ಞಾನೇಶ್ವರ್ ಹಾಗೂ ದಿವ್ಯಾ ಅವರ ಹೇಳಿಕೆ ಪಡೆಯಲಾಗಿದೆ. ಆರೋಪಿಗಳು ರೇಣುಕಾಸ್ವಾಮಿಯನ್ನು ಚಿತ್ರದುರ್ಗದ ಫಾರ್ಮಸಿಯಿಂದ ಕರೆತಂದಿದ್ದರು. ಬೆಂಗಳೂರಿಗೆ ಕರೆತಂದಿದ್ದ ದಿನ ಆತ ಕೆಲಸಕ್ಕೆ ಬಂದ ಸಮಯ, ಸಹೋದ್ಯೋಗಿಗಳೊಂದಿಗೆ ಒಡನಾಟದ ಕುರಿತು ಮಾಹಿತಿ ಪಡೆಯಲಾಗಿದೆ.

ಇದನ್ನೂ ಓದಿ: ನನ್ನ ಮೌನವನ್ನು ಬೇರೆ ರೀತಿ ಬಿಂಬಿಸುವ ಕೆಲಸ: ದರ್ಶನ್ ಕೇಸ್ ಕುರಿತು ಸುಮಲತಾ ಮೊದಲ ಪ್ರತಿಕ್ರಿಯೆ - Sumalatha

ETV Bharat Logo

Copyright © 2024 Ushodaya Enterprises Pvt. Ltd., All Rights Reserved.