ETV Bharat / state

ಕಂಬಳಕ್ಕೆ ತಂತ್ರಜ್ಞಾನದ ಟಚ್; ಸಮಯಪಾಲನೆಗೆ ಸ್ವಯಂಚಾಲಿತ ಗೇಟ್, ಫೋಟೊ ಫಿನಿಶ್​ ಫಲಿತಾಂಶ - ಸ್ವಯಂ ಚಾಲಿತ ಗೇಟ್

ಫೆ.3ರಂದು ನಡೆಯುವ ಐಕಳ ಕಂಬಳದಲ್ಲಿ ಪ್ರಪ್ರಥಮ ಬಾರಿಗೆ ಕಂಬಳದಲ್ಲಿ ನಿಖರ ಫಲಿತಾಂಶಕ್ಕಾಗಿ, ನಿಗದಿತ ಸಮಯದಲ್ಲಿ ಮುಗಿಸಲು ಸ್ವಯಂ ಚಾಲಿತ ಗೇಟ್ ಹಾಗೂ ಫೋಟೊ ಫಿನಿಶ್ ತಂತ್ರಜ್ಞಾನ ಅಳವಡಿಕೆಗೆ ದ ಕ ಜಿಲ್ಲಾ ಕಂಬಳ ಸಮಿತಿಯು ನಿರ್ಧರಿಸಿದೆ.

coastal kambala
ಕರಾವಳಿ ಕಂಬಳ
author img

By ETV Bharat Karnataka Team

Published : Feb 1, 2024, 3:59 PM IST

Updated : Feb 1, 2024, 4:49 PM IST

ಕಂಬಳ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಮಾಧ್ಯಮದವರ ಜೊತೆ ಮಾತನಾಡಿದರು.

ಮಂಗಳೂರು (ದಕ್ಷಿಣ ಕನ್ನಡ): ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಕ್ರೀಡೆಯಾಗಿ ಗುರುತಿಸಿಕೊಂಡಿರುವ ಕಂಬಳ ಇದೀಗ ಆಧುನಿಕ ತಂತ್ರಜ್ಞಾನದ ಟಚ್ ಪಡೆಯುತ್ತಿದೆ. ಕಂಬಳದಲ್ಲಿ ನಿಖರ ಫಲಿತಾಂಶ ಸಹಿತ ಕ್ರೀಡೆಯನ್ನು ನಿಗದಿತ ಸಮಯದೊಳಗೆ ಮುಗಿಸಲು ನೂತನವಾಗಿ ಸ್ವಯಂ ಚಾಲಿತ ಗೇಟ್ ಹಾಗೂ ಫೋಟೊ ಫಿನಿಶ್ ತಂತ್ರಜ್ಞಾನ ಅಳವಡಿಕೆಗೆ ದಕ ಜಿಲ್ಲಾ ಕಂಬಳ ಸಮಿತಿಯು ಮುಂದಾಗಿದೆ.

ಫೆ.3ರಂದು ನಡೆಯುವ ಐಕಳ ಕಂಬಳದಲ್ಲಿ ಪ್ರಥಮ ಬಾರಿಗೆ ಈ ನೂತನ ತಂತ್ರಜ್ಞಾನ ಪ್ರಾಯೋಗಿಕವಾಗಿ ಬಳಕೆಗೆ ಬರಲಿದೆ. ಆ ಬಳಿಕ ಈ ತಂತ್ರಜ್ಞಾನವನ್ನು ಎಲ್ಲ ಕಂಬಳಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ನಿಖರ ಫಲಿತಾಂಶದೊಂದಿಗೆ ನಿಗದಿತ ಸಮಯದೊಳಗೆ ಕಂಬಳ ಮುಕ್ತಾಯವಾಗಲಿದೆ. ಅದಾನಿ ಗ್ರೂಪ್ ಸಂಸ್ಥೆ ಈ ಆಧುನಿಕ ತಂತ್ರಜ್ಞಾನಕ್ಕೆ 10 ಲಕ್ಷ ರೂ. ನೆರವು ನೀಡಿದೆ.

ಕಂಬಳ ಸಮಿತಿ ಅಧ್ಯಕ್ಷರು ಏನಂತಾರೆ; ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಕಂಬಳ ಸಮಿತಿ ಅಧ್ಯಕ್ಷ ಐಕಳ ಬಾವ ದೇವಿ ಪ್ರಸಾದ್ ಶೆಟ್ಟಿ, ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಪ್ರಾಣಿಗಳ ಓಟದಲ್ಲಿ ಇರುವ ತಂತ್ರಜ್ಞಾನದಂತೆ ಗೇಟ್ ವ್ಯವಸ್ಥೆ ಮತ್ತು ಫೋಟೋ‌ ಫಿನಿಶ್ ಫಲಿತಾಂಶದ ವ್ಯವಸ್ಥೆ ಮಾಡಲಾಗಿದೆ. ಕಂಬಳವನ್ನು ನಿಗದಿತ ಸಮಯದಲ್ಲಿ ಮುಗಿಸುವ ಉದ್ದೇಶವಿಟ್ಟುಕೊಂಡು ಈ ಯೋಜನೆ ಆರಂಭಿಸಲಾಗಿದೆ. ನಿಗದಿತ ಸಮಯದಲ್ಲಿ ಕೋಣವನ್ನು ಓಡಿಸದಿದ್ದರೆ ಗೇಟ್ ಬೀಳುತ್ತದೆ. ಕೌಂಟ್ ಡೌನ್ ಸಮಯದಲ್ಲಿ ಕೋಣ ಓಡಿಸದಿದ್ದರೆ, ಬೇರೆ ಕೋಣಗಳನ್ನು ಕರೆಗೆ ಇಳಿಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಕಂಬಳದಲ್ಲಿ ಗೇಟ್​​ನ ತಾಂತ್ರಿಕ ವ್ಯವಸ್ಥೆ ಮಾಡಿದ ರತ್ನಾಕರ್ ಮಾತನಾಡಿ, ಕಳೆದ 10 ವರ್ಷದಿಂದ ನಾನೇ ಆವಿಷ್ಕರಿಸಿದ ಲೇಸರ್ ಸಿಸ್ಟಮ್​ನಿಂದ ಫಲಿತಾಂಶ ನೀಡಲಾಗುತ್ತಿತ್ತು. ಇದೀಗ ಕಂಬಳದಲ್ಲಿ ಕೋಣ ಬಿಡುವ ಸಮಯದಲ್ಲಿ ವಿಳಂಬ ಆಗುವುದನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಫೋಟೋ ಫಿನಿಶ್ ವ್ಯವಸ್ಥೆಯಲ್ಲಿ 1 ಸೆಕೆಂಡ್ ಅನ್ನು ಸಹ ವಿಭಾಗಿಸಿ ರಿಸಲ್ಟ್ ಕೊಡುತ್ತದೆ ಎಂದು ವಿವರಣೆ ನೀಡಿದರು.

ಗೇಟ್ ವ್ಯವಸ್ಥೆ, ಫೋಟೋ‌ ಫಿನಿಶ್​ ಎಂದರೇನು? : ಕಂಬಳದಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಕೋಣಗಳನ್ನು ಬಿಡಬೇಕು. ನೂತನ ತಂತ್ರಜ್ಞಾನ ಅಳವಡಿಕೆ ಬಳಿಕ ಕೋಣಗಳನ್ನು ಬಿಡದಿದ್ದರೆ ಗೇಟ್ ಬೀಳುತ್ತದೆ. ಇದಾದ ನೂರು ಸೆಕೆಂಡ್​​ನಿಂದ ಹತ್ತು ಸೆಕೆಂಡ್​ವರೆಗೆ ರೆಡ್ ಲೈಟ್, ಹತ್ತರಿಂದ ಒಂದು ಸೆಕೆಂಡ್ ವರೆಗೆ ಹಳದಿ ಲೈಟ್, ಝಿರೋ ಸೆಕೆಂಡ್ ಆದಾಗ ಹಸಿರು ಲೈಟ್ ಬೀಳುತ್ತದೆ. ಈ ಅವಧಿಯಲ್ಲಿ ಕೋಣಗಳನ್ನು ಬಿಡಬೇಕು. ಇಲ್ಲದಿದ್ದರೆ ಆ ಕೋಣಗಳನ್ನು ಸ್ಪರ್ಧೆಯಿಂದ ಹೊರಗಿಡಲಾಗುತ್ತದೆ.

ಫೋಟೋ ಫಿನಿಶಿಂಗ್ ತಂತ್ರಜ್ಞಾನದಲ್ಲಿ ಕೋಣಗಳ ಮೂಗಿನ ಮೇಲೆ ಸ್ಕ್ಯಾನ್ ಮಾಡುವ ಮೂಲಕ ನಿಖರ ಫಲಿತಾಂಶ ದೊರಕಲಿದೆ. ಈ ತಂತ್ರಜ್ಞಾನ ಮೂಲಕ ಕಂಬಳದ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ಕಂಬಳ ಬಗ್ಗೆ ನಿಮಗೆಷ್ಟು ಗೊತ್ತು? ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಅಚ್ಚುಮೆಚ್ಚಿನ ಕ್ರೀಡೆ ಕಂಬಳ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯಲ್ಲಿ ರೈತ ಸಮುದಾಯದಲ್ಲಿ ಕಂಬಳ ಕ್ರೀಡೆ ಹಾಸು ಹೊಕ್ಕಾಗಿದೆ. ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ ಆಗಿರುತ್ತದೆ.

ಇದನ್ನೂಓದಿ:ಇತಿಹಾಸ ಪ್ರಸಿದ್ಧ ಪುತ್ತೂರಿನ ಕಂಬಳ ಆರಂಭ: ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ

Last Updated : Feb 1, 2024, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.