ಬೆಳಗಾವಿ: ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟವಾಗಿ ಪತಿ ಮತ್ತು ಪತ್ನಿಗೆ ಗಂಭೀರ ಗಾಯವಾಗಿರುವ ಘಟನೆ ತಾಲ್ಲೂಕಿನ ಸುಳಗಾ ಗ್ರಾಮದಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ನಡೆದ ಘಟನೆಯಿಂದ ಸುಳಗಾ ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ. ದಂಪತಿಗಳಾದ ಕಲ್ಲಪ್ಪ ಪಾಟೀಲ್ (62) ಮತ್ತು ಸುಮನ್ ಪಾಟೀಲ್ಗೆ (60) ಗಾಯಾಳಗಳಾಗಿವೆ. ಸ್ಫೋಟದ ತೀವ್ರತೆಗೆ ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಅಲ್ಮೆರಾ, ವಸ್ತ್ರ, ಸುಟ್ಟಿವೆ. ಮನೆಯೊಳಗಿನ ವಸ್ತುಗಳು ಸಹ ಸಂಪೂರ್ಣ ಸುಟ್ಟು ಕರಕಲಾಗಿವೆ.
ಸಿಲಿಂಡರ್ ಸಮೀಪ ಹೋಗದಿದ್ದರೂ ಸ್ಫೋಟಗೊಂಡಿದೆ. ಲೈಟ್ ಸ್ವಿಚ್ ಆನ್ ಮಾಡ್ತಿದ್ದಂತೆ ಸಿಲಿಂಡರ್ ಸ್ಫೋಟವಾಗಿದೆ. ಘಟನೆಯಿಂದ ಗ್ರಾಮದ ಜನರು ಆತಂಕಿತರಾಗಿದ್ದಾರೆ. ಕಲ್ಲಪ್ಪ ಹಾಗೂ ಸುಮನ್ ಇಬ್ಬರಿಗೂ ಶೇ.75ರಷ್ಟು ದೇಹ ಸುಟ್ಟಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆ ಬಗ್ಗೆ ಗ್ರಾಮಸ್ಥ ಬಾಗಣ್ಣ ನರೋಟಿ ಮಾತನಾಡಿ, ನಮ್ಮ ಊರಲ್ಲಿ ಈ ರೀತಿ ಘಟನೆ ಯಾವತ್ತೂ ಆಗಿರಲಿಲ್ಲ. ಗಂಡ ಹೆಂಡತಿ ಇಬ್ಬರೂ ಸಿರಿಯಸ್ ಇದ್ದಾರೆ. ಈಗಲೇ ಏನೂ ಹೇಳಲು ಬರಲ್ಲ. ಮೇಲಿನ ಮಹಡಿಯಲ್ಲಿ ಮಗ ಮಲಗಿದ್ದ, ಕೆಳಗೆ ಇಬ್ಬರು ಮಲಗಿದ್ದರು. ಅವರಿಗೆ ಗಂಭೀರ ಗಾಯವಾಗಿದೆ ಎಂದು ವಿವರಿಸಿದರು.