ETV Bharat / state

ಸಚಿವ ನಾಗೇಂದ್ರ ರಾಜೀನಾಮೆ ಪಡೆದು, ಪ್ರಕರಣ ಸಿಬಿಐಗೆ ವಹಿಸಿ: ಸಿಟಿ ರವಿ ಒತ್ತಾಯ - Former Minister C T Ravi

ರಾಜ್ಯ ಸರ್ಕಾರ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಚಿವ ಸಿ ಟಿ ರವಿ ಒತ್ತಾಯಿಸಿದ್ದಾರೆ.

author img

By ETV Bharat Karnataka Team

Published : May 31, 2024, 6:55 PM IST

Former Minister C T Ravi
ಮಾಜಿ ಸಚಿವ ಸಿ ಟಿ ರವಿ (ETV Bharat)
ಸಚಿವ ನಾಗೇಂದ್ರ ರಾಜೀನಾಮೆ ಪಡೆದು, ಪ್ರಕರಣ ಸಿಬಿಐಗೆ ವಹಿಸಿ: ಸಿಟಿ ರವಿ ಒತ್ತಾಯ (ETV Bharat)

ಬೆಂಗಳೂರು: "ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಹಗರಣ ಆರೋಪ ಪ್ರಕರಣ ಸಂಬಂಧ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಹಣ ವರ್ಗಾವಣೆ ಕುರಿತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಿಬಿಐಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು" ಎಂದು ಮಾಜಿ ಸಚಿವ ಸಿಟಿ ರವಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ವಾಲ್ಮೀಕಿ ನಿಗಮದ ಹಣ ವರ್ಗಾವಣೆ ವಿಚಾರವಾಗಿ ಯೂನಿಯನ್ ಬ್ಯಾಂಕ್ ಸಿಬಿಐಗೆ ಪತ್ರ ಬರೆದಿದೆ. ಸಿಬಿಐಗೆ ಸುಮೋಟೋ ತನಿಖೆ ಕೈಗೆತ್ತಿಕೊಳ್ಳುವ ಅವಕಾಶ ಇದೆ. ಸರ್ಕಾರಕ್ಕೆ ಸಿಐಡಿ ಮೇಲೆ ನಂಬಿಕೆ ಇರಬಹುದು. ಆದರೆ, ಸಿಬಿಐಗೆ ಕೊಡುವುದು ಸೂಕ್ತ, ಇಲ್ಲದಿದ್ದರೆ ಸಾಕ್ಷ್ಯ ನಾಶಕ್ಕೆ ಸರ್ಕಾರ ಪ್ರಯತ್ನಿಸುತ್ತಿದೆಯೇನೋ ಎಂಬ ಅನುಮಾನ ಮೂಡುತ್ತದೆ. ಸಚಿವ ನಾಗೇಂದ್ರ ಅವರ ರಾಜೀನಾಮೆಯನ್ನು ತೆಗೆದುಕೊಳ್ಳದೇ ಇರುವುದನ್ನು ನೋಡಿದರೆ ದೊಡ್ಡ ದೊಡ್ಡ ವ್ಯಕ್ತಿಗಳು ಇದರ ಹಿಂದೆ ಇರಬಹುದು ಎಂಬುದು ನಮ್ಮ ಅನುಮಾನ. ಹಾಗಾಗಿ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು. ಪ್ರಕರಣವನ್ನು ಸಿಬಿಐಗೆ ಕೊಡಬೇಕು" ಎಂದು ಆಗ್ರಹಿಸಿದರು.

"ಮಂಗಳೂರಿನಲ್ಲಿ ನಮಾಜ್ ವಿಚಾರಕ್ಕೆ ದಾಖಲಿಸಿದ್ದ ಸುಮೋಟೋ ಕೇಸ್ ರದ್ದು ಮಾಡಲಾಗಿದೆ. ಮತಾಂಧ ಶಕ್ತಿಗಳ ಜೊತೆಗೆ ರಾಜಕೀಯ ರಾಜಿ ಬಹಳ ಅಪಾಯಕಾರಿ. ಬಕ್ರೀದ್​ನಂತಹ ಸಾಮೂಹಿಕ ನಮಾಜ್ ಸಂದರ್ಭದಲ್ಲಿ ರಸ್ತೆ ತುಂಬಿ ತುಳುಕಿದಾಗ ಯಾರೂ ಪ್ರಶ್ನೆ ಮಾಡಿಲ್ಲ. ಮಸೀದಿ ಖಾಲಿ ಹೊಡೆಯುತ್ತಿದ್ದಾಗಲೂ ಟ್ರಾಫಿಕ್ ತೊಂದರೆ ಮಾಡಿ ರಸ್ತೆಯಲ್ಲಿ ನಮಾಜ್ ಮಾಡಿದ್ದಕ್ಕೆ ಕ್ರಮ ತೆಗೆದುಕೊಂಡ ಪೊಲೀಸ್ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುತ್ತಾರೆ. ಅಂದರೆ ಮಂತಾಂಧತೆಯ ಜೊತೆಗೆ ಕಾಂಗ್ರೆಸ್ ಇದೆ ಎಂಬ ಸಂದೇಶ ಕೊಡಲು ಹೊರಟಿದ್ದಾರಾ?" ಎಂದು ಪ್ರಶ್ನಿಸಿದರು.

"ಈ ಮತಾಂಧತೆಯ ಕಾರಣದಿಂದಲೇ ಕೋಮುಗಲಭೆಗಳು ದೇಶದ ಉದ್ದಗಲಕ್ಕೆ ಆಗಿದ್ದು, ಮೋದಿ ಇರುವುದರಿಂದ ಕೋಮುಗಲಭೆ ನಿಯಂತ್ರಣದಲ್ಲಿದೆ. ತುಷ್ಟೀಕರಣ ನೀತಿ ದೇಶ ವಿಭಜನೆಗೆ, ಅನಗತ್ಯ ಗಲಭೆ ಹುಟ್ಟು ಹಾಕಲು ಕಾರಣವಾಗುತ್ತಿದೆ. ಬೀದರ್​ನಲ್ಲಿ ರಾಮನ ಭಕ್ತಿಗೀತೆ ಹಾಕಿದ್ದಕ್ಕೆ ಗಲಭೆ ಎಬ್ಬಿಸಿದ್ದಾರೆ. ಕಾಂಗ್ರೆಸ್​ನ ಇದೇ ಮಾನಸಿಕತೆಯ ಕಾರಣಕ್ಕೆ ಚನ್ನಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡುತ್ತಾರೆ."

"ಈ ಮಾನಸಿಕತೆ ಬೀದಿಯಲ್ಲಿ ಸಂಘರ್ಷ ಹುಟ್ಟುಹಾಕುವ ಪರಿಸ್ಥಿತಿಗೆ ತೆಗೆದುಕೊಂಡು ಹೋಗಬಹುದು. ಮುಂಬೈ ಮಾದರಿಯ ಬಾಂಬ್ ಸ್ಫೋಟಗಳಿಗೆ ಕಾರಣವಾಗಬಹುದು. ಮತ್ತೊಂದು ವಿಭಜನೆಯ ದುರಂತಕ್ಕೆ ನಾಂದಿ ಹಾಡಬಹುದು. ಈ ಮಾನಸಿಕತೆಯನ್ನು ಮೊಟಕು ಮಾಡಬೇಕಾದ ಅವಶ್ಯಕತೆ ಇದೆ. ದುರ್ದೈವವೆಂದರೆ ಕಾಂಗ್ರೆಸ್ ದೇಶಕ್ಕಿಂತ ತನ್ನ ವೋಟ್ ಬ್ಯಾಂಕ್ ಮಾಡಿಕೊಳ್ಳುವುದರಲ್ಲೇ ಮಗ್ನವಾಗಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಬೆಂಕಿ ಹಾಕಿದವರನ್ನು ಮುಂದೊಂದು ದಿ‌ನ ಇದೇ ಸರ್ಕಾರ ಕೇಸ್ ವಾಪಸ್ ಪಡೆದರೂ ಆಶ್ಚರ್ಯ ಇಲ್ಲ" ಎಂದು ಟೀಕಿಸಿದರು.

"ವಿಧಾನ ಪರಿಷತ್ ಟಿಕೆಟ್ ಘೋಷಣೆ ವಿಚಾರದಲ್ಲಿ ಚರ್ಚೆ ನಡೆದಿದೆ. ಇಂದು ರಾಷ್ಟ್ರೀಯ ಅಧ್ಯಕ್ಷರು ಸಮಾಲೋಚನೆ ಮಾಡಿ ಅಂತಿಮ ಮಾಡಬಹುದು ಅನ್ನಿಸುತ್ತದೆ. ಇವತ್ತು, ನಾಳೆಯೊಳಗೆ ಪಟ್ಟಿ ಕ್ಲಿಯರ್ ಆಗಬಹುದು" ಎಂದರು.

ಸಂಸದ ಪ್ರಜ್ವಲ್ ರೇವಣ್ಣ ಬಂಧನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿಟಿ ರವಿ, "ಕಾನೂನು ಎಲ್ಲರಿಗೂ ಒಂದೇ, ಕಾನೂನು ಮೀರಿ ಯಾರೂ ಇಲ್ಲ. ತನಿಖೆ ನ್ಯಾಯಯುತವಾಗಿ ನಡೆಯಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಕುಮಾರಸ್ವಾಮಿ ಕೂಡಾ ಯಾರೇ ತಪ್ಪು ಮಾಡಿದರೂ ರಕ್ಷಣೆ ಮಾಡುವುದಿಲ್ಲ, ಶಿಕ್ಷೆ ಆಗಬೇಕು ಆಂತಾ ಹೇಳಿದ್ದಾರೆ. ಆದರೆ ತನಿಖೆ ರಾಜಕೀಯ ಪ್ರೇರಿತವಾಗಿ ಆಗಬಾರದು. ರಾಜಕೀಯ ‌ಕಾರಣಕ್ಕಾಗಿ ರಕ್ಷಣೆಯೂ ಮಾಡಬಾರದು. ತೊಂದರೆಯೂ ಆಗಬಾರದು. ನ್ಯಾಯಯುತ ತನಿಖೆ ನಡೆದು ಕ್ರಮ ಆಗಲಿ. ಉಪ್ಪು ತಿಂದವನು ನೀರು ಕುಡಿಯಬೇಕು ಎಂಬ ಹಳೆಯ ಗಾದೆ ಪುನರುಚ್ಛರಿಸುತ್ತೇನೆ" ಎಂದರು.

ಇದನ್ನೂ ಓದಿ: ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ; ಸಚಿವ ನಾಗೇಂದ್ರಗೆ ಸಮನ್ಸ್ ಕೊಡುತ್ತೇವೆ, ತಪ್ಪಿತಸ್ಥರ ರಕ್ಷಣೆ ಪ್ರಶ್ನೆಯೇ ಇಲ್ಲ: ಶಿವಕುಮಾರ್ - DCM DK Shivakumar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.