ಮಂಡ್ಯ: ಈ ಬಾರಿಯ ಚುನಾವಣೆಯಲ್ಲಿ ಹೆಚ್. ಡಿ. ಕುಮಾರಸ್ವಾಮಿ ಅವರು 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಸಿ. ಎಸ್. ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮತದಾರರು ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ. ಶೇಕಡಾ 95 ರಷ್ಟು ಬಿಜೆಪಿ ಪಕ್ಷದ ಕಾರ್ಯಕರ್ತರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಜೆಡಿಎಸ್-ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕುಮಾರಣ್ಣ ಮಾಡಿದ್ದ ಜನಪ್ರಿಯ ಕಾರ್ಯಕ್ರಮಗಳನ್ನು ನೆನೆದು ಪಕ್ಷಾತೀತವಾಗಿ ವಿಶೇಷವಾಗಿ ಮಹಿಳೆಯರು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.
ಬಳಿಕ ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ತನಿಖಾ ಸಂಸ್ಥೆಗೆ ನೀಡ್ದಿದಾರೆ. ಸತ್ಯಾ ಸತ್ಯತೆ ಶೀಘ್ರದಲ್ಲೇ ಹೊರ ಬೀಳಲಿದೆ. ಈ ಪ್ರಕರಣದಲ್ಲಿ ನಮ್ಮ ಪಕ್ಷ ಯಾವುದೇ ಅಡ್ಡಿ ಪಡಿಸುವುದಿಲ್ಲ. ಎಸ್ಐಟಿ ತನಿಖಾ ಸಂಸ್ಥೆಗೆ ಸಹಕಾರ ನೀಡುತ್ತೇವೆ. ಅದರಂತೆ ಪ್ರಜ್ವಲ್ ರೇವಣ್ಣ ವಿರುದ್ಧ ಪಕ್ಷದ ವತಿಯಿಂದ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿದೆ. ಯಾರು ತಪ್ಪು ಮಾಡಿದರು ತಪ್ಪೇ. ಪೆನ್ಡ್ರೈವ್ಗಳನ್ನು ಬೀದಿಯಲ್ಲಿ ಎಸದಿರುವುದು ತಪ್ಪು. ಎಸ್ಐಟಿ ಅವರು ಎಲ್ಲಾ ವಿಚಾರದಲ್ಲಿ ಕೂಲಂಕಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮರ್ಯಾದಸ್ಥ ಮನೆಯ ಹೆಣ್ಣುಮಕ್ಕಳನ್ನು ಬೀದಿಗೆ ತಂದಿರುವುದು ತಪ್ಪು ಮೊದಲು ಅವರಿಗೆ ಶಿಕ್ಷೆಯಾಗಬೇಕು. ಯಾರೇ ಇರಲಿ, ನ್ಯಾಯಯುತವಾಗಿ ತನಿಖೆಗೆ ಒತ್ತಾಯ ಮಾಡ್ತೇವೆ. ಡಿ. ಕೆ ಶಿವಕುಮಾರ್ ಕಾರಣ ಅಂತ ಹೇಳಿದ್ದಾರೆ. ಅವರೇ ಮಾಡ್ಸಿದ್ದಾರೆ ಅನ್ನೋ ಆರೋಪ ಇದೆ. ಇದರ ಬಗ್ಗೆಯೂ ನ್ಯಾಯಯುತವಾಗಿ ತನಿಖೆಯಾಗಲಿ. ಯಾರೇ ಕೈವಾಡ ಇದ್ರು ಹೊರ ಬರುತ್ತದೆ. ಇದೇ ವಿಚಾರವಾಗಿ ಕೋರ್ ಕಮಿಟಿ ಸಭೆ ನಡೆದಿದೆ. ಎಲ್ಲಾ ತೀರ್ಮಾನವನ್ನು ನಮ್ಮ ಪಕ್ಷ ತೆಗೆದುಕೊಳ್ಳುತ್ತದೆ.
ಕಾನೂನಿನ ಚೌಕಟ್ಟಿನಲ್ಲಿ ಪ್ರಧಾನಿ ಮೊಮ್ಮಗ ಆಗಿದ್ದರು ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು. ಸಾವಿರಾರು ಹೆಣ್ಣು ಮಕ್ಕಳ ವಿಡಿಯೋ ಹರಿ ಬಿಟ್ಟವರಿಗೂ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಜರುಗಿಸಿ. ಚುನಾವಣೆ ದೃಷ್ಟಿಯಿಂದ ಈ ರೀತಿಯ ಕೃತ್ಯ ಮಾಡಿದ್ದಾರೆ. ಇದು ಏನು ಚುನಾವಣೆಗೆ ವರ್ಕೌಟ್ ಆಗಲ್ಲ. ಜನರು ಅರ್ಥಮಾಡಿಕೊಂಡು ಆಶೀರ್ವಾದ ಮಾಡುತ್ತಾರೆ ಎಂದರು.