ETV Bharat / state

ಕಿತ್ತೂರು ಉತ್ಸವದಲ್ಲಿ ಜನಸಾಗರ: ವೀರರಾಣಿ ಚೆನ್ನಮ್ಮನ ನಾಡಿಗೆ ನುಗ್ಗಿ ಬಂದ‌ ಲಕ್ಷಾಂತರ ಜನ - CROWDS AT KITTUR UTSAV

ಮೂರು ದಿನಗಳ ಅದ್ಧೂರಿ ಕಿತ್ತೂರು ಉತ್ಸವದ ಎಲ್ಲ ಕಾರ್ಯಕ್ರಮಗಳಿಗೂ ಜನಸಾಗರ ತುಂಬಿ ತುಳುಕುತ್ತಿದ್ದು, ನಾಡಿನ ಮೂಲೆ ಮೂಲೆಗಳಿಂದ ಜನರು ಹರಿದು ಬರುತ್ತಿದ್ದಾರೆ.

Crowds at Kittur Utsav
ಕಿತ್ತೂರು ಉತ್ಸವದಲ್ಲಿ ಜನಸಾಗರ (ETV Bharat)
author img

By ETV Bharat Karnataka Team

Published : Oct 25, 2024, 12:42 PM IST

Updated : Oct 25, 2024, 1:31 PM IST

ಬೆಳಗಾವಿ: 'ಕಿತ್ತೂರು ಉತ್ಸವ' ಉತ್ತರ ಕರ್ನಾಟಕ ಭಾಗದ ಜನಜಾತ್ರೆ ಎಂದೇ ಬಿಂಬಿತವಾಗಿದೆ. ಮೂರು ದಿನಗಳ ಉತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರ ದಂಡು ರಾಣಿ ಚನ್ನಮ್ಮಾಜಿ ಪುಣ್ಯಭೂಮಿಗೆ ದಾಂಗುಡಿ ಇಡುತ್ತದೆ. ಎರಡನೇ ದಿನ ಲಕ್ಷಕ್ಕೂ‌ ಅಧಿಕ ಸಂಖ್ಯೆಯಲ್ಲಿ ಜನ ಸೇರಿದ್ದರು. ಕಿತ್ತೂರು ಕೋಟೆ ಜನಜಂಗುಳಿಯಿಂದ ತುಂಬಿ ತುಳುಕಿತು.

ಹೌದು, ಕೋಟೆ ಆವರಣ, ಕಿತ್ತೂರು ಪಟ್ಟಣದ ಬೀದಿ ಬೀದಿಗಳಲ್ಲಿ ಕಣ್ಣು ಹಾಯಿಸದಲ್ಲೆಲ್ಲ ಜನವೋ ಜನ. ರಸ್ತೆಗಳಲ್ಲಿ ಕಾಲಿಡದಷ್ಟು ಜನಸಾಗರ ಕಂಡು ಬಂತು. ಇನ್ನು ಸಾಂಸ್ಕೃತಿಕ ಕಾರ್ಯಕ್ರಮದ ಪ್ರೇಕ್ಷಕರ ಗ್ಯಾಲರಿಯೂ ಭರ್ತಿಯಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ಕಿತ್ತೂರು ಉತ್ಸವದಲ್ಲಿ ಜನಸಾಗರ (ETV Bharat)

ಕೋಟೆ ಆವರಣ, ಬತ್ತೇರಿ(ಗೋಪುರ), ಕಿತ್ತೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಕ್ಷರಶಃ ದಿಪೋತ್ಸವವೇ ಸೃಷ್ಟಿಯಾಗಿತ್ತು. ಬಣ್ಣ ಬಣ್ಣದ ವಿದ್ಯುತ್ ದೀಪಗಳು ಜನರನ್ನು ಆಕರ್ಷಿಸಿದವು. ಆಟಿಕೆ - ಅಲಂಕಾರಿಕ ಸಾಮಾನುಗಳು, ವಿವಿಧ ತಿಂಡಿ‌ ತಿನಿಸುಗಳ ಭರ್ಜರಿ ವ್ಯಾಪಾರ - ವಹಿವಾಟು ನಡೆಯಿತು.‌ ವಸ್ತುಪ್ರದರ್ಶನ, ವಸ್ತು ಸಂಗ್ರಹಾಲಯ, ಕೋಟೆಯನ್ನು ಸುತ್ತು ಹಾಕಿದ ಜನ ಇತಿಹಾಸ ಮೆಲುಕು ಹಾಕಿದರು. ಇದೇ ವೇಳೆ, ಯುವಕ-ಯುವತಿಯರು, ಕುಟುಂಬಸ್ಥರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಕಿತ್ತೂರು ಉತ್ಸವ ನೋಡುವುದೇ ಒಂದು ಹಬ್ಬ: ಕಿತ್ತೂರಿನ ಯುವತಿ ಅಶ್ವಿನಿ ಸರಪಳಿ ಈಟಿವಿ ಭಾರತ ಜೊತೆಗೆ ಮಾತನಾಡಿ, "ಕಿತ್ತೂರು ಉತ್ಸವ ನೋಡುವುದೇ ಒಂದು ಹಬ್ಬ. ವಿಜಯಪುರ, ಕಲಬುರ್ಗಿ ಮತ್ತು ಮಹಾರಾಷ್ಟ್ರ ರಾಜ್ಯದಿಂದಲೂ ನನ್ನ ಸ್ನೇಹಿತರು ಉತ್ಸವ ಕಣ್ತುಂಬಿಕೊಳ್ಳಲು ಬಂದಿದ್ದಾರೆ. ವೀರರಾಣಿ ಚನ್ನಮ್ಮನ ಬಗ್ಗೆ ನಾವು ಅದೆಷ್ಟು ಮಾತನಾಡಿದರು ಕಡಿಮೆಯೇ. ಬ್ರಿಟಿಷರಿಂದ ನಮ್ಮನ್ನು ಮುಕ್ತಗೊಳಿಸಲು ವೀರಾವೇಷದಿಂದ ಹೋರಾಡಿದ್ದರು. ನಾನು ಕಿತ್ತೂರಿನವಳು ಎನ್ನುವ ಕಾರಣಕ್ಕೆ ನನ್ನ ಗೆಳೆಯರು ನನಗೆ ಚನ್ನಮ್ಮ ಅಂತಾನೇ ಕರೆಯುತ್ತಾರೆ. ಕಿತ್ತೂರಿನ ಕ್ರಾಂತಿಯ ನೆಲದಲ್ಲಿ ಹುಟ್ಟಿದ್ದಕ್ಕೆ ತುಂಬಾ ಹೆಮ್ಮೆ ಮತ್ತು ಗರ್ವ ಪಡುತ್ತೇನೆ" ಎಂದು ಸಂತಸ‌ ವ್ಯಕ್ತಪಡಿಸಿದರು.

ಬಣ್ಣ ಬಣ್ಣದ ಜಬರ್ ದಸ್ತ್ ಲೈಟಿಂಗ್: ಖಾನಾಪುರ ತಾಲೂಕು ಕಕ್ಕೇರಿಯಿಂದ ಬಂದಿದ್ದ ಯುವಕ ಅಕ್ಷಯ ಮಾತನಾಡಿ, "ಬಣ್ಣ ಬಣ್ಣದ ಜಬರ್ ದಸ್ತ್ ಲೈಟಿಂಗ್ ಮೂಲಕ ಕಿತ್ತೂರು ಮಿರಿಮಿರಿ ಮಿಂಚುತ್ತಿದೆ. ಇಂದು ಜನಸಾಗರವೇ ಉತ್ಸವಕ್ಕೆ ಬಂದಿದ್ದು, ಇದೆಲ್ಲ ನೋಡಲು ಎರಡು‌ ಕಣ್ಣು‌ಗಳು ಸಾಲದು. ನಮಗಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸಿದ ಚನ್ನಮ್ಮನವರ ಬಗ್ಗೆ ನಾವು ಎಂದೆಂದೂ ಚಿರಋಣಿ" ಎಂದು ಅಭಿಪ್ರಾಯಪಟ್ಟರು.

ಆದರ್ಶ ಮತ್ತು ಸ್ಫೂರ್ತಿ ಚೆನ್ನಮ್ಮ: "ವೀರರಾಣಿ ಚೆನ್ನಮ್ಮಾಜಿ ಬಗ್ಗೆ ಬಹಳಷ್ಟು ಅಭಿಮಾನವಿದೆ. ನಮಗೆಲ್ಲಾ ಅವರು ಆದರ್ಶ ಮತ್ತು ಸ್ಫೂರ್ತಿ. ಕಿತ್ತೂರು ಉತ್ಸವದ ಸಂಭ್ರಮಾಚರಣೆ, ಲೈಟಿಂಗ್ ನೋಡಿ ತುಂಬಾ ಖುಷಿ ಆಯಿತು. ಡಾನ್ಸ್, ಹಾಡುಗಳನ್ನು ಕೇಳಿ ಎಂಜಾಯ್ ಮಾಡಿದೆವು" ಎನ್ನುತ್ತಾರೆ ಖಾನಾಪುರ ತಾಲ್ಲೂಕಿನ ಬೀಡಿ ಗ್ರಾಮದ ಯುವತಿ ಪ್ರಿಯಾ.

ಇದನ್ನೂ ಓದಿ: ಕಿತ್ತೂರು ಉತ್ಸವದಲ್ಲಿ ಧೂಳೆಬ್ಬಿಸಿದ ಗಾಯಕ ವಿಜಯ್ ಪ್ರಕಾಶ್​: ಕುಣಿದು ಕುಪ್ಪಳಿಸಿದ ಜನತೆ

Last Updated : Oct 25, 2024, 1:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.