ETV Bharat / state

ನಾಗೂರಿನ ಬಾವಿಯಲ್ಲಿ ಪತ್ತೆಯಾಗಿದ್ದ ಮೊಸಳೆ: ಸತತ ಒಂದು ದಿನದ ಕಾರ್ಯಚರಣೆ ಬಳಿಕ ಕೊನೆಗೂ ಸೆರೆ - Finally Crocodile captured - FINALLY CROCODILE CAPTURED

ಹಲವು ಕಸರತ್ತಿನ ಬಳಿಕವೂ ಇಟ್ಟ ಬೋನಿಗೆ ಮೊಸಳೆ ಬರದೇ ಇದ್ದಾಗ, ಮೀನಿನ ಬಲೆ ಬೀಸಿ ಕೊಡೇರಿ ಭಾಗದ ಮಂಜು ಮತ್ತು ಸುಧಾಕರ ಅವರ ತಂಡ ಮೊಸಳೆಯನ್ನು ಸೆರೆ ಹಿಡಿದಿದೆ.

CROCODILE, WHICH FOUND IN WELL IN NAGURU, WAS CAPTURED AFTER CONTINUOUS ONE DAY OPERATION
ನಾಗೂರಿನ ಬಾವಿಯಲ್ಲಿ ಪತ್ತೆಯಾಗಿದ್ದ ಮೊಸಳೆ ಸತತ ಒಂದು ದಿನದ ಕಾರ್ಯಚರಣೆ ಬಳಿಕ ಸೆರೆ (ETV Bharat)
author img

By ETV Bharat Karnataka Team

Published : Jul 31, 2024, 9:39 PM IST

ಉಡುಪಿ: ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನ ಬಾವಿಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಸತತ ಒಂದು ದಿನದ ಕಾರ್ಯಾಚರಣೆ ಬಳಿಕ ಸೆರೆ ಹಿಡಿಯಲಾಗಿದೆ. ಕೊಡೇರಿ ಭಾಗದ ಮಂಜು ಮತ್ತು ಸುಧಾಕರ ಅವರ ತಂಡ ಮೀನುಗಾರರು ಉಪಯೋಗಿಸುವ ಬೀಡಿನ ಬಲೆಯನ್ನು ಬಾವಿಗೆಹಾಕಿ ಸತತ 1 ಗಂಟೆ ಕಾರ್ಯಾಚರಣೆ ನಡೆಸಿದರು. ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಬಲೆಗೆ ಬಿದ್ದ ಮೊಸಳೆಯನ್ನು ಮೇಲಕ್ಕೆತ್ತಲಾಯಿತು.

CROCODILE, WHICH FOUND IN WELL IN NAGURU, WAS CAPTURED AFTER CONTINUOUS ONE DAY OPERATION
ನಾಗೂರಿನ ಬಾವಿಯಲ್ಲಿ ಪತ್ತೆಯಾಗಿದ್ದ ಮೊಸಳೆ ಸತತ ಒಂದು ದಿನದ ಕಾರ್ಯಚರಣೆ ಬಳಿಕ ಸೆರೆ (ETV Bharat)

ನಾಗೂರು ಕೊಡೇರಿ ರಸ್ತೆಯಲ್ಲಿರುವ ಒಡೆಯರ ಮಠದ ವಿಶ್ವನಾಥ ಉಡುಪರ ಮನೆಯ ತೋಟದಲ್ಲಿರುವ ಬಾವಿಯಲ್ಲಿ ಮಂಗಳವಾರ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿತ್ತು. ಇದ್ನು ಸೆರೆ ಹಿಡಿಯಲು ನಾನಾ ಕಸರತ್ತು ಮಾಡಲಾಗಿತ್ತು. ಕೊನೆಗೂ ಮೀನಿನ ಬಲೆಗೆ ಮೊಸಳೆ ಬಿದ್ದಿದೆ. ಪಶುವೈದ್ಯಾಧಿಕಾರಿ ಡಾ.ನಾಗರಾಜ್ ಅವರು ಸ್ಥಳಕ್ಕಾಗಮಿಸಿ ಮೊಸಳೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ.

ಒಂದು ದಿನದ ಕಾರ್ಯಾಚರಣೆ: ಮೊಸಳೆ ಬಾವಿಯಲ್ಲಿರುವುದು ಗಮನಕ್ಕೆ ಬರುತ್ತಲೇ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಮಳೆ ನಡುವೆಯೂ ಬೈಂದೂರು ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಕಂದಾಯ ಇಲಾಖೆಯವರ ಸಹಾಯದೊಂದಿಗೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೊಸಳೆ ಬಾವಿಯಿಂದ ಹೊರ ಬರಲು ಬಾವಿಯ ದಂಡೆಯನ್ನು ನೆಲಸಮಾನಕ್ಕೆ ಒಡೆದು ಮೊಸಳೆ ಬೋನು ಇಡಲಾಗಿತ್ತು. ಮೊಸಳೆಯನ್ನು ಹಿಡಿಯಲು ಇಲಾಖೆಯ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಲ್ಲದೇ ಬಾವಿ ಸುತ್ತಲೂ ನಾಗೂರು ನೆಟ್ವರ್ಕ್ ಅಂಡ್​ ಸೆಕ್ಯೂರಿಟಿ ಸೊಲ್ಯೂಷನ್ಸ್ ರಕ್ಷಕ್ ಇವರ ಸಹಕಾರದಲ್ಲಿ ಸಿಸಿ ಟಿವಿ ಅಳವಡಿಸಿ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದರು.

ಬುಧವಾರ ಬೆಳಗ್ಗೆಯೂ ಮೊಸಳೆ ಬೋನಿಗೆ ಬೀಳದಿದ್ದಾಗ ಮುಂದಿನ ಪ್ರಯತ್ನವಾಗಿ ಮೀನುಗಾರರ ಸಹಕಾರದಲ್ಲಿ ಬಲೆಯ ಮೂಲಕ ಸಾಹಸಮಯವಾಗಿ ಮೊಸಳೆಯನ್ನು ಮೇಲಕ್ಕೆತ್ತುವ ಕಾರ್ಯ ನಡೆಯಿತು. ಮಧ್ಯಾಹ್ನ 1.30ರ ಹೊತ್ತಿಗೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿಯಿತು. ಬೈಂದೂರು ತಹಶಿಲ್ದಾರ್ ಪ್ರದೀಪ್, ಪಿಎಸ್ಐ ತಿಮ್ಮೇಶ್ ಬಿ.ಎನ್., ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದರು.

ಇದನ್ನೂ ಓದಿ: ಬಾವಿಯಲ್ಲಿ ಮೊಸಳೆ ಪತ್ತೆ! ಸೆರೆ ಹಿಡಿಯಲು ನಾನಾ ಕಸರತ್ತು- ವಿಡಿಯೋ - Crocodile

ETV Bharat Logo

Copyright © 2024 Ushodaya Enterprises Pvt. Ltd., All Rights Reserved.