ಬೆಂಗಳೂರು: ತ್ರಿಪುರ ವಿರುದ್ಧ ರಣಜಿ ಪಂದ್ಯ ಮುಗಿಸಿ ದೆಹಲಿಗೆ ತೆರಳುವ ವಿಮಾನ ಪ್ರಯಾಣದ ವೇಳೆ ಸೀಟ್ ಮುಂದಿದ್ದ ಪೌಚ್ನಲ್ಲಿ ನೀರು ಎಂದು ಭಾವಿಸಿ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಸ್ಪಿರಿಟ್ ಸೇವಿಸಿ ಅನಾರೋಗ್ಯಕ್ಕೀಡಾಗಿದ್ದರು. ಇದೀಗ ಬೆಂಗಳೂರಿಗೆ ಆಗಮಿಸಿರುವ ಮಯಾಂಕ್, ಸ್ವಗೃಹದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಜ್ಯ ಕ್ರಿಕೆಟ್ ತಂಡದ ಮ್ಯಾನೇಜರ್ ರಮೇಶ್, ಮಯಾಂಕ್ ಅಪಾಯದಿಂದ ಪಾರಾಗಿದ್ದಾರೆ. ಯಾವುದೇ ರೀತಿಯ ತೊಂದರೆಯಿಲ್ಲ. ಮುಂದಿನ 48 ಗಂಟೆಯೊಳಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇವೆ. ನೀರು ಕುಡಿಯುವಾಗ ಸ್ಪಿರಿಟ್ ಅಂಶ ಇದ್ದುದರಿಂದ ಬಾಯಿ ಸ್ವಲ್ಪ ಸುಟ್ಟು ಹೋಗಿತ್ತು. ಕರ್ನಾಟಕ ಹಾಗೂ ತ್ರಿಪುರಾ ಕ್ರಿಕೆಟ್ ಸಂಸ್ಥೆಗಳು, ತ್ರಿಪುರ ಪೊಲೀಸರು ಹಾಗೂ ಹಾಗೂ ಚಿಕಿತ್ಸೆ ನೀಡಿದ ಐಎಲ್ಎಸ್ ಆಸ್ಪತ್ರೆಯವರು ಒಳ್ಳೆಯ ಸಹಕಾರ ನೀಡಿದರು. ಎಲ್ಲರಿಗೂ ಧನ್ಯವಾದಗಳು ಎಂದರು.
ನಿನ್ನೆ ಆಸ್ಪತ್ರೆಗೆ ಹೋದಾಗ ಮೂರು ದಿನಗಳ ಕಾಲ ಮೂರು ಚಿಕಿತ್ಸೆ ನೀಡಬೇಕೆಂದು ಸೂಚಿಸಿದ್ದರು. ಆದರೆ ವೈದ್ಯರ ಶತಪ್ರಯತ್ನದಿಂದ ಉತ್ತಮ ಚಿಕಿತ್ಸೆ ದೊರೆತು ಬೆಂಗಳೂರಿಗೆ ಕರೆತರಲಾಗಿದೆ. ಮಯಾಂಕ್ ನೇರವಾಗಿ ಮನೆಗೆ ತೆರಳಿದ್ದಾರೆ. ರಿಪೋರ್ಟ್ ಬಂದ ಬಳಿಕ ವೈದ್ಯರನ್ನು ಭೇಟಿಯಾಗುವ ಬಗ್ಗೆ ತಿಳಿಸಲಾಗುವುದು.ಘಟನೆಗೆ ಯಾರು ಕಾರಣ ಎಂಬುದರ ಬಗ್ಗೆ ಈಗಾಗಲೇ ಹೇಳಲಾಗದು ಎಂದು ತಿಳಿಸಿದರು.
ಇದನ್ನೂ ಓದಿ: ಮಯಾಂಕ್ ಅಗರ್ವಾಲ್ ಅಪಾಯದಿಂದ ಪಾರು, ಶೀಘ್ರವೇ ಬೆಂಗಳೂರಿಗೆ ರವಾನೆ: ಕೆಎಸ್ಸಿಎ ಮಾಹಿತಿ