ETV Bharat / state

ಮಳಲಿ ಮಸೀದಿ ಕಟ್ಟಡ ಪ್ರಕರಣ: ಅರ್ಜಿ ವಿಚಾರಣೆ ಫೆ.17ಕ್ಕೆ ಮುಂದೂಡಿದ ಕೋರ್ಟ್​

ಮಳಲಿ ಮಸೀದಿ ವಿವಾದ ಪ್ರಕರಣದ ಅರ್ಜಿ ವಿಚಾರಣೆಯನ್ನು ಕೋರ್ಟ್​​ ಫೆಬ್ರವರಿ 17ಕ್ಕೆ ಮುಂದೂಡಿದೆ.

court-adjourned-hearing-on-malali-masjid-case-application-hearing
ಮಳಲಿ ಮಸೀದಿ ಕಟ್ಟಡ ಪ್ರಕರಣ: ಅರ್ಜಿ ವಿಚಾರಣೆ ಫೆ.17ಕ್ಕೆ ಮುಂದೂಡಿದ ಕೋರ್ಟ್​
author img

By ETV Bharat Karnataka Team

Published : Feb 8, 2024, 5:33 PM IST

ಮಂಗಳೂರು: ಮಳಲಿ ಮಸೀದಿ ಕಟ್ಟಡ ವಿವಾದದ ಪ್ರಕರಣದ ಅರ್ಜಿ ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಲಾಗಿದೆ. ಮಸೀದಿಯ ಉತ್ಖನನ ಮಾಡಿ ಸರ್ವೇಗೆ ಒತ್ತಾಯಿಸಿ ವಿಹೆಚ್​​ಪಿ ಅರ್ಜಿ ಸಲ್ಲಿಸಿದ್ದು, ವಿಹೆಚ್​​ಪಿ ಪರ ವಕೀಲ ಚಿದಾನಂದ ಕೆದಿಲಾಯ ಅವರು ಗುರುವಾರ ವಾದ ಮಂಡಿಸಿದರು. ಈ ವೇಳೆ ಹೈಕೋರ್ಟ್ ತೀರ್ಪಿನ ಪ್ರತಿ ತಲುಪಿದ ಬಳಿಕ ವಾದ ಮಂಡನೆ ಮಾಡುವುದಾಗಿ ಮಸೀದಿ ಪರ ವಕೀಲರು ಕೋರ್ಟ್​ಗೆ ತಿಳಿಸಿದರು.

ಪ್ರಕರಣದ ಹಿನ್ನೆಲೆ: ಮಂಗಳೂರು ನಗರದ ಹೊರವಲಯದಲ್ಲಿರುವ ಮಳಲಿ ಮಸೀದಿಯ ಕಟ್ಟಡ ನವೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ದೇವಾಲಯದ ಶೈಲಿಯ ಕುರುಹುಗಳು ಪತ್ತೆಯಾಗಿತ್ತು. ಆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಹಿಂದೂ ಸಂಘಟನೆಗಳು, ಇದು ದೇವಾಲಯದ ಸ್ಥಳವಾಗಿದೆ. ದೇವಸ್ಥಾನ ಕಟ್ಟಲು ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದಿದ್ದವು.‌

ಇದೇ ಸಂದರ್ಭದಲ್ಲಿ ಹಿಂದೂ ಧರ್ಮದ ನಂಬಿಕೆಯಂತೆ ತಾಂಬೂಲ ಪ್ರಶ್ನೆಯನ್ನಿರಿಸಿದಾಗ ಅದು ಹಿಂದೂ ದೇವರ ಸಾನಿಧ್ಯವಿದ್ದ ಸ್ಥಳ ಎಂದು ತಿಳಿದುಬಂದಿತ್ತು. ಆ ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸ್ಥಳ ವಕ್ಫ್ ಮಂಡಳಿಗೆ ಸೇರಿರುವುದರಿಂದ ವಕ್ಫ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂದು ಮಸೀದಿ ಆಡಳಿತ ಮಂಡಳಿ ಹೈಕೋರ್ಟ್ ಮೊರೆ ಹೋಗಿದೆ.

ಈ ಸಂಬಂಧಿತ ಆದೇಶದ ಪ್ರತಿ ಕಕ್ಷಿದಾರ ಮಸೀದಿ ಆಡಳಿತ ಮಂಡಳಿಯ ಕೈ ಸೇರಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದ ಪ್ರತಿ ಬರುವವರೆಗೆ ಸರ್ವೇಗೆ ಸಂಬಂಧಿಸಿದ ವಾದ, ಪ್ರತಿವಾದ ಮುಂದೂಡುವಂತೆ ಕೋರಲಾಗಿದೆ. ಮಸೀದಿ ಪರ ವಕೀಲರ ವಾದಕ್ಕೆ ಮನ್ನಣೆ ನೀಡಿದ ಮಂಗಳೂರು ಮೂರನೇ ಜೆಎಂಎಫ್​ಸಿ ನ್ಯಾಯಾಲಯವು ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ; ಮಳಲಿ ಮಸೀದಿ ವಿವಾದ: ವಕ್ಪ್ ಮಂಡಳಿಯ ಮೂಲಕ ಕಾನೂನು ಹೋರಾಟ- ಅಬ್ದುಲ್ ನಾಸಿರ್ ಲಕ್ಕಿಸ್ಟಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.