ಬೆಂಗಳೂರು: ಪಾಲಿಕೆಯ 4 ವಲಯಗಳ 13 ಕೆರೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಒಟ್ಟಾರೆಯಾಗಿ 242.5 ಕೋಟಿ ರೂಪಾಯಿ ಮೌಲ್ಯದ 7 ಎಕರೆ 3 ಗುಂಟೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಿ, ತಂತಿ ಬೇಲಿಯನ್ನು ಅಳವಡಿಸಲಾಗಿದೆ.
ಈ ಕುರಿತು ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆರೆಗಳಲ್ಲಿ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವು ಕಾರ್ಯಾಚರಣೆ ನಡೆಸುವ ಕಾರ್ಯವನ್ನು ಸಕ್ರಿಯವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಉಚ್ಚನ್ಯಾಯಾಲಯದ ಆದೇಶದಂತೆ ಪಾಲಿಕೆ ವಶದಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಒತ್ತುವರಿ ಸರ್ವೆ ಹಾಗೂ ತೆರವುಗೊಳಿಸುವ ಕಾರ್ಯ ಜಾರಿಯಲ್ಲಿದೆ. ಇದುವರೆವಿಗೂ 202 ಕೆರೆಗಳ ಪೈಕಿ 162 ಕೆರೆಗಳ ಸರ್ವೆ ಕಾರ್ಯವು ಪೂರ್ಣಗೊಂಡಿದ್ದು, ಅದರಲ್ಲಿ 49 ಕೆರೆಗಳು ಒತ್ತುವರಿ ಮುಕ್ತವಾಗಿವೆ. ಇನ್ನು 23 ಕೆರೆಗಳಲ್ಲಿ ಸರ್ಕಾರಿ ಒತ್ತುವರಿ ಒಳಗೊಂಡಿದ್ದು, ವಲಯಗಳೊಂದಿಗೆ ಸಮನ್ವಯ ಸಾಧಿಸಿ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.

ಈ ಜಾಗದ ಪ್ರಸ್ತುತ ಮಾರುಕಟ್ಟೆ ದರ 12 ಕೋಟಿ ರೂಪಾಯಿಯಾಗಿದೆ. ಉಳಿದಂತೆ ಸುಬ್ಬರಾಯನ ಕೆರೆಯ 24 ಗುಂಟೆ ಮತ್ತು 4 ಗುಂಟೆ ಶೀಟ್ ಜಾಗ ಸೇರಿದಂತೆ ಒಟ್ಟು 28 ಗುಂಟೆ ಜಾಗವನ್ನು ವಶಕ್ಕೆ ಪಡೆಯಲಾಗಿದ್ದು, ತಂತಿ ಬೇಲಿಯನ್ನು ಅಳವಡಿಸಲಾಗಿದೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ದರ 15 ಕೋಟಿ ರೂ.
4. ಯಲಹಂಕ ವಲಯ- (7 ಕೆರೆ) : ಯಲಹಂಕ ವಲಯದಲ್ಲಿ ಆವಲಹಳ್ಳಿ ಕೆರೆಯಲ್ಲಿ 2 ಗುಂಟೆ, ಯಲಹಂಕ ಕೆರೆಯಲ್ಲಿ 24 ಗುಂಟೆ, ಮೇಡಿ ಅಗ್ರಹಾರ ಕೆರೆಯಲ್ಲಿ 8 ಗುಂಟೆ, ಅಗ್ರಹಾರ ಕೆರೆಯಲ್ಲಿ 4 ಗುಂಟೆ, ಕಟ್ಟಿಗೇನಹಳ್ಳಿ ಕೆರೆಯಲ್ಲಿ 1.50 ಗುಂಟೆ, ನರಸೀಪುರ ಕೆರೆಯಲ್ಲಿ 25 ಗುಂಟೆ, ಸಿಂಗಾಪುರ ಕೆರೆಯಲ್ಲಿ 29.50 ಗುಂಟೆ ಸೇರಿ 7 ಕೆರೆಗಳಲ್ಲಿ 2 ಎಕರೆ 14 ಗುಂಟೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿದೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ದರವು 80 ಕೋಟಿ ರೂ.
ಇದನ್ನೂ ಓದಿ : ನಗರದ ಪ್ರಮುಖ ನಾಲ್ಕು ಕೆರೆ ಒತ್ತುವರಿ: ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್.ಆರ್.ರಮೇಶ್ ಒತ್ತಾಯ