ETV Bharat / state

ಸೇವಾ ನ್ಯೂನತೆ ಪರಿಗಣಿಸಿ ವಿಮಾ ಪರಿಹಾರ ನೀಡಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ - Insurance compensation - INSURANCE COMPENSATION

ಸೇವಾ ನ್ಯೂನತೆ ಪರಿಗಣಿಸಿ ವಿಮಾ ಪರಿಹಾರ ಪಾವತಿಸುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.

consumer-court
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (ETV Bharat)
author img

By ETV Bharat Karnataka Team

Published : Jun 5, 2024, 7:34 PM IST

ಶಿವಮೊಗ್ಗ: ಅರ್ಜಿದಾರರಾದ ಎಸ್. ಪ್ರೇಮ ಎಂಬುವರು ಹೆಚ್.ಡಿ.ಎಫ್.ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಸೂರೆನ್ಸ್ ಕಂ. ಲಿ. ಮುಂಬೈ ಇವರ ವಿರುದ್ಧ ಸೇವಾ ನ್ಯೂನತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಪರಿಹಾರ ಪಾವತಿಸುವಂತೆ ಪ್ರತಿವಾದಿಗಳಿಗೆ ಆದೇಶಿಸಿದೆ.

ಎಸ್. ಪ್ರೇಮ ಅವರ ಪತಿಯು ಎಕ್ಸೈಡ್ ಲೈಫ್ ಸ್ಮಾರ್ಟ್ ಟರ್ಮ್ ಪ್ಲಾನ್ ವಿಮಾ ಪಾಲಿಸಿಯನ್ನು ಪಡೆದಿದ್ದು, ವಾರ್ಷಿಕ ರೂ. 12,752/ ನ ಕಂತು ಪಾವತಿಸಿರುತ್ತಾರೆ. ಈತ ದಿ: 19/07/2021 ರಂದು ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು.

ಈ ಸಂಬಂಧ ಮೃತನ ಪತ್ನಿ ಹೆಚ್.ಡಿ.ಎಫ್.ಸಿ ಸ್ಟ್ಯಾಂಡರ್ಡ್ ಲೈಫ್ ಇನ್ಸೂರೆನ್ಸ್ ಕಂ.ಲಿ. ಮುಂಬೈ ಇವರನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಿ ಪಾಲಿಸಿಗನುಗುಣವಾಗಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿದ್ದರು.

ಆದರೆ, ಕಂಪನಿಯವರು ಅರ್ಜಿದಾರರ ಪತಿಯು ಪಾಲಿಸಿಯನ್ನು ಪಡೆಯುವ ಪೂರ್ವದಲ್ಲಿ ಬೇರೆ ಪಾಲಿಸಿಗಳನ್ನು ಹೊಂದಿರುವ ವಿಚಾರವನ್ನು ಮರೆಮಾಚಿರುತ್ತಾರೆ. ಮತ್ತು ಈ ಸಂಗತಿಯು ವಿಮಾ ಪಾಲಿಸಿಯ ನಿಬಂಧನೆಯ ಉಲ್ಲಂಘನೆಯಾಗಿರುವುದರಿಂದ ವಿಮಾ ಪರಿಹಾರ ಪಡೆಯಲು ಅರ್ಹರಾಗಿರುವುದಿಲ್ಲ ಎಂಬ ಕಾರಣ ನೀಡಿ, ಪರಿಹಾರ ಮೊತ್ತ ನೀಡಲು ನಿರಾಕರಿಸಿದ್ದರು.

ಆಯೋಗವು ಪ್ರಕರಣದ ಅಂಶಗಳು, ಫಿರ್ಯಾದಿದಾರರು ಹಾಜರುಪಡಿಸಿದ ದಾಖಲೆಗಳು ಮತ್ತು ವಿಮಾ ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ವಿಮಾ ಕಂಪನಿಯು ಪರಿಹಾರವನ್ನು ಪಾವತಿಸದೆ ಸೇವಾ ನ್ಯೂನತೆ ಎಸಗಿದ್ದಾರೆಂದು ನಿರ್ಣಯಿಸಿದೆ. ವಿಮಾ ಕಂಪನಿಗೆ ನೋಟಿಸ್ ಜಾರಿ ಮಾಡಿದರೂ, ಆಯೋಗದ ಮುಂದೆ ಗೈರುಹಾಜರಾಗಿರುವುದರಿಂದ ಪ್ರಕರಣವನ್ನು ಏಕ ಪಕ್ಷೀಯವೆಂದು ಪರಿಗಣಿಸಿ ಅರ್ಜಿದಾರರು ವಿಮಾ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆಂದು ಪರಿಗಣಿಸಿ, ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.

ಈ ಪ್ರಕಾರ ಎದುರುದಾರ ಅರ್ಜಿದಾರರ ಪಾಲಿಸಿಗೆ ಅನುಗುಣವಾಗಿ ಪಾಲಿಸಿ ಪರಿಹಾರ ಮೊತ್ತ ರೂ. 24.00 ಲಕ್ಷಗಳನ್ನು ಪಾವತಿಸುವುದು ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ. 15,000 ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಗಿ ರೂ. 10,000/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ. ಪಟ್ಟಣಶೆಟ್ಟಿ, ಬಿ. ಡಿ ಯೋಗಾನಂದ ಬಾಂಡ್ಯ ಇವರ ಪೀಠ ಆದೇಶಿಸಿದೆ.

ಇದನ್ನೂ ಓದಿ : ಇಂಜಿನ್ ಸೀಜ್ ಆಗುವ ಹಂತದಲ್ಲಿದ್ದ ಕಾರಿನ ಮಾರಾಟ: 30 ಸಾವಿರ ಪರಿಹಾರಕ್ಕೆ ಗ್ರಾಹಕರ ವೇದಿಕೆ ಆದೇಶ - Consumer Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.