ETV Bharat / state

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನಕ್ಕೆ ಷಡ್ಯಂತ್ರ ಆರೋಪ: ನಗರ ಪೊಲೀಸ್ ಆಯುಕ್ತರಿಗೆ ದೂರು

author img

By ETV Bharat Karnataka Team

Published : Feb 20, 2024, 12:40 PM IST

Updated : Feb 20, 2024, 4:51 PM IST

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನಕ್ಕೆ ಷಡ್ಯಂತ್ರ ರಚಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ‌ ಹಾಗೂ ಜೆಡಿಎಸ್ ಬೆಂಬಲಿಗರ ವಿರುದ್ಧ ಶಾಸಕ ರವಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

City Police Commissioner  cross voting  Rajya Sabha elections  ರಾಜ್ಯಸಭಾ ಚುನಾವಣೆ  ಪೊಲೀಸ್ ಆಯುಕ್ತರಿಗೆ ದೂರು
ನಗರ ಪೊಲೀಸ್ ಆಯುಕ್ತರಿಗೆ ದೂರು

ಶಾಸಕ ರವಿ ಗಾಣಿಗ ಹೇಳಿಕೆ

ಬೆಂಗಳೂರು : ಮುಂಬರುವ ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹಾಗೂ ಜಾತ್ಯತೀತ ಜನತಾದಳ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ ಅಡ್ಡಮತ ಚಲಾಯಿಸಲು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸದಸ್ಯರನ್ನ ಸೆಳೆಯಲು ಷಡ್ಯಂತ್ರ ರಚಿಸಲಾಗಿದೆ ಎಂಬ ಆರೋಪವಿದೆ. ಹೀಗಾಗಿ ಈ ಆರೋಪದಡಿ ಬಿಜೆಪಿ‌ ಹಾಗೂ ಜೆಡಿಎಸ್ ಬೆಂಬಲಿಗರ ವಿರುದ್ಧ ಶಾಸಕ ರವಿ ಗಾಣಿಗ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಿರುವ ಹಾಗೂ ಶಾಸಕರುಗಳಾದ ಶ್ರೀಮತಿ ಲತಾ, ಪುಟ್ಟಸ್ವಾಮಿ ಗೌಡ ಹಾಗೂ ಕೆಲವು ಕಾಂಗ್ರೆಸ್​ ಶಾಸಕರಿಗೆ ಆಮಿಷ ಮತ್ತು ಒತ್ತಡ ಹೇರುತ್ತಿರುವ ಆರೋಪದಡಿ ದೂರು ನೀಡಲಾಗಿದೆ.

ದೂರಿನ ಸಾರಾಂಶ: 22 ಫೆಬ್ರವರಿ 2024ರಂದು ಕರ್ನಾಟಕದಿಂದ ವಿಧಾನಸಭೆ ಸದಸ್ಯರು ಆಯ್ಕೆ ಮಾಡಲಿರುವ ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷದ ಅಧಿಕೃತ ಅಭ್ಯರ್ಥಿಗಳು ಮೂರು ಜನರಾಗಿದ್ದು, ಅವರ ಗೆಲುವು ಸಾಧಿಸಲು ಬೇಕಾಗಿರುವಂತೆ ಮತಗಳು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸದಸ್ಯ, ಅದರೊಂದಿಗೆ ಸಹ ಸದಸ್ಯರಾಗಿರುವವರು ಸೇರಿದಂತೆ ಸಂಖ್ಯಾಬಲ ಇರುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರು ನಾಮ ಪತ್ರವನ್ನು ಸಲ್ಲಿಸಿದ್ದು, ಅವರಲ್ಲಿ ಗೆಲುವು ಸಾಧಿಸಲು ನಿರ್ದಿಷ್ಟ ಮತ ಸಂಖ್ಯೆ ಇರುವುದಿಲ್ಲ. ಇದನ್ನು ತಿಳಿದೂ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್​ ಪಕ್ಷದ ಶಾಸಕರನ್ನು ಹಾಗೂ ಸಹ ಸದಸ್ಯರಾದ ಶಾಸಕರನ್ನು ಒತ್ತಡ ಹಾಗೂ ಹಣದ ಆಮಿಷವನ್ನು ಒಡ್ಡಿ ಪಕ್ಷಾಂತರವನ್ನು ನಡೆಸಿ ಮತ ಚಲಾಯಿಸುವಂತೆ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ ಸಂದರ್ಭದಿಂದ ಬಿಜೆಪಿ ಹಾಗೂ ಜೆಡಿಎಸ್​ನ ಹಿರಿಯ ಮುಖಂಡರು ಷಡ್ಯಂತ್ರವನ್ನು ರೂಪಿಸಿ ಕಾಂಗ್ರೆಸ್​ ಪಕ್ಷದ ಶಾಸಕರನ್ನು ಮತ್ತು ಸಹ ಸದಸ್ಯ ಶಾಸಕರನ್ನು ಎಲ್ಲ ರೀತಿಯಾದಂತಹ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಸೆಳೆಯಲು ಸೇರಿರುತ್ತಾರೆ.

ಈ ಷಡ್ಯಂತರದ ನಿಮಿತ್ತ 37/ಕ್ರಸೆಂಟ್ ಹೋಟೆಲ್ ಮಾಲೀಕರಾದ ರವಿ ಎಂಬುವರು ಲತಾರವರನ್ನ ಸಂಪರ್ಕಿಸಿ ‘ಕುಪ್ಪೇಂದ್ರರೆಡ್ಡಿ ಅವರ ಪುತ್ರ ತಮ್ಮನ್ನು ಭೇಟಿ ಮಾಡಿ ಹಣವನ್ನು ಕೊಡುತ್ತಾರೆ. ನೀವು ಕುಪೇಂದ್ರ ರೆಡ್ಡಿಯವರಿಗೆ ಮತ ಚಲಾಯಿಸಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಮತ ಚಲಾಯಿಸಲಿಲ್ಲ ಎಂದರೆ ತಮಗೆ ತೊಂದರೆಯಾಗುತ್ತದೆ’ ಎಂದು ಬೆದರಿಕೆ ಹಾಕಿದ್ದಾರೆ.

ರವಿ ಅವರ ಭಾವ ಆದ ಡಾ. ಮಹಾಂತೇಶ್ ಕೂಡ ಬಿಜೆಪಿ ಮತ್ತು ಜೆಡಿಎಸ್ ಹಿರಿಯ ನಾಯಕರ ನಿರ್ದೇಶದಂತೆ ಲತಾ ಅವರಿಗೆ ಹಣದ ಆಮಿಷವನ್ನು ಒಡ್ಡಿರುತ್ತಾರೆ. ಇದಲ್ಲದೇ ಹರಿಹರದ ಮಾಜಿ ಶಾಸಕರಾದ ಶಿವಶಂಕರ್ ಅವರನ್ನು ಕಳುಹಿಸಿ ಲತಾ ಅವರ ಗಂಡನಾದ ಮಲ್ಲಿಕಾರ್ಜುನ್ ಅವರನ್ನು ಭೇಟಿಮಾಡಿ ಹಣದ ಆಮಿಷವೊಡ್ಡಿ ಕುಪ್ಪೇಂದ್ರ ರೆಡ್ಡಿ ಅವರಿಗೆ ಮತ ಚಲಾಯಿಸುವಂತೆ ಒತ್ತಡ ಹಾಕಿರುತ್ತಾರೆ.

ಇನ್ನೋರ್ವ ಸದಸ್ಯರಾದಂತಹ ಪುಟ್ಟಸ್ವಾಮಿ ಗೌಡರವರಿಗೂ ಕೂಡ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರುಗಳ ಹಿಂಬಾಲಕರ ಮೂಲಕ ಹಣದ ಆಮಿಷ ಹಾಗೂ ಬೆದರಿಕೆಯನ್ನು ಹಾಕಿರುತ್ತಾರೆ. ಹಾಗೇಯೇ ಮತ್ತೋರ್ವ ಸದಸ್ಯರಾದಂತಹ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕೂಡ ಇದೇ ರೀತಿಯಾದಂತಹ ಆಮಿಷ ಮತ್ತು ಬೆದರಿಕೆಗಳನ್ನು ಹಾಕಿರುತ್ತಾರೆ. ಇದೇ ರೀತಿ ಬಿಜೆಪಿ ಹಾಗೂ ಜೆಡಿಎಸ್‌ನ ಹಿರಿಯ ನಾಯಕರು ನಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಿ ಸತತವಾಗಿ ಹಣದ ಆಮಿಷ ಕೊಟ್ಟು ಬೆದರಿಕೆಯನ್ನು ಹಾಕಿ ಮತವನ್ನು ಸೆಳೆಯುವಂತ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಶಾಸಕ ರವಿ ಗಾಣಿಗ ಆರೋಪಿಸಿದ್ದಾರೆ.

ಯಾವ ಶಾಸಕರಿಗೆ ಯಾರು ಸಂಪರ್ಕಿಸಿ ಎಷ್ಟು ಹಣವನ್ನು ಕೊಡುವ ಆಮಿಷವನ್ನು ಕೊಟ್ಟಿರುತ್ತಾರೆ ಹಾಗೂ ಬೆದರಿಕೆ ಹಾಕಿರುವ ಸಂಪೂರ್ಣ ಮಾಹಿತಿ ತಮ್ಮಲ್ಲಿದೆ. ತನಿಖೆಯ ಸಂದರ್ಭದಲ್ಲಿ ಅದನ್ನು ಒದಗಿಸುತ್ತೇನೆ. ಈಗಿನ ಸಂದರ್ಭದಲ್ಲಿ ನನಗೆ ಈ ಮಾಹಿತಿಯನ್ನು ಪ್ರಥಮವಾಗಿ ದೂರಿನಲ್ಲಿ ಕೊಡುವುದು ಸಮಂಜಸವಲ್ಲ ಎಂದು ತಿಳಿದು ಆ ಮಾಹಿತಿಯನ್ನು ನೀಡುತ್ತಿಲ್ಲ. ಆದ್ದರಿಂದ ಎಫ್.ಐ.ಆರ್ ದಾಖಲಿಸಿ ಇದರಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ಹಾಗೂ ತಮ್ಮ ಪಕ್ಷದ ಸಹ ಸದಸ್ಯ, ಶಾಸಕರಿಗೆ ಸ್ವತಂತ್ರ ಅಭ್ಯರ್ಥಿಗಳಿಗೆ ರಕ್ಷಣೆ ನೀಡುವಂತೆ ಶಾಸಕ ರವಿ ಗಾಣಿಗ ಅವರು ದೂರು ಸಲ್ಲಿಸಿದ್ದಾರೆ.

ಓದಿ: LIVE: ವಿಧಾನಸಭೆ ಅಧಿವೇಶನದ ನೇರ ಪ್ರಸಾರ; ರಾಜ್ಯಪಾಲರ ಭಾಷಣದ ಮೇಲೆ ಉತ್ತರ ನೀಡುತ್ತಿರುವ ಸಿಎಂ

Last Updated : Feb 20, 2024, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.