ಹುಬ್ಬಳ್ಳಿ: ''ಎಲೆಕ್ಷನ್‌ಗೆ ಪಾಕಿಸ್ತಾನದಿಂದ ಕಾಂಗ್ರೆಸ್‌ಗೆ ಹಣ ಬಂದಿರಬೇಕು. ಬಿಜೆಪಿಗೆ ಅಂತಹ ಹಣದ ಅವಶ್ಯಕತೆಯಿಲ್ಲ'' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು. ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಅವರು ಮಾತನಾಡಿದರು.
''ಈಗಾಗಲೇ ಚುನಾವಣೆ ದಿನಾಂಕ ನಿಗದಿಯಾಗಿದೆ. ಕ್ಯಾಲೆಂಡರ್ ಆಫ್ ದಿ ಈವೆಂಟ್ ಕೂಡ ಬಂದಿದೆ. ಚುನಾವಣೆಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಎರಡು ಅವಧಿಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನಿಯತ್ತನ್ನು ನೋಡಿ ಈ ಬಾರಿ ಮತದಾರರು ಆಶೀರ್ವಾದ ಮಾಡುತ್ತಾರೆ. ಬಹುದೊಡ್ಡ ಗೆಲುವಿನೊಂದಿಗೆ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.
''ಸರ್ಕಾರದ ನಿಯತ್ತನ್ನು ಜನರು ನೋಡಿದ್ದಾರೆ. ಅವರೇ ಈ ಚುನಾವಣೆ ಮೂಲಕ ಉತ್ತರ ಕೊಡುತ್ತಾರೆ. ಮೋದಿಯವರ ವಿರುದ್ಧ ಸುಳ್ಳು ಮಾತನಾಡಿ ಆರೋಪ ಮಾಡಿದವರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ಸಿಗಲಿದೆ'' ಎಂದರು.
ಇದನ್ನೂ ಓದಿ: 7 ಹಂತಗಳಲ್ಲಿ ಲೋಕಸಭಾ ಚುನಾವಣೆ: ಜೂನ್ 4ಕ್ಕೆ ಫಲಿತಾಂಶ