ತುಮಕೂರು: ನಾವು ಮೋದಿ ಅಲೆ ಕೆಲಸ ಮಾಡಲ್ಲ ಅಂದುಕೊಂಡಿದ್ವಿ. ಗ್ಯಾರಂಟಿ ಕೈ ಹಿಡಿಯುತ್ತದೆ ಅನ್ನುವ ಭರವಸೆ ಇತ್ತು. ಆದರೆ ಮೋದಿ ಅಲೆ ವರ್ಕೌಟ್ ಆಗಿದೆ ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ.
ತುಮಕೂರಿನಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪರ್ಫಾರ್ಮೆನ್ಸ್ ಸಮಾಧಾನಕರವಾಗಿದೆ. 15-20 ಸೀಟ್ ಗೆಲ್ತೀವಿ ಅಂದುಕೊಂಡಿದ್ವಿ. ಜನಾದೇಶ ನಮ್ಮ ವಿರುದ್ಧವಾಗಿದೆ ಎಂದರು.
ಸೋಮಣ್ಣನವರು ಗೆದ್ದಿದ್ದಾರೆ. ಅವರು ಒಳ್ಳೆ ಕೆಲಸ ಮಾಡಲೆಂದು ಶುಭ ಹಾರೈಸುತ್ತೇನೆ. ತುಮಕೂರು ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಲೀಡ್ ಬಂದಿದೆ. ನನ್ನ ಗುಬ್ಬಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಲೀಡ್ ಬರುತ್ತೆ. ಆದರೆ ಈ ಬಾರಿ ಕಾಂಗ್ರೆಸ್‌ಗೆ ಲೀಡ್ ಬರುತ್ತೆ ಅಂದುಕೊಂಡಿದ್ವಿ. ಕಾಂಗ್ರೆಸ್ ಜೆಡಿಎಸ್ ಮೈತ್ರಿಗಿಂತ ಬಿಜೆಪಿ ಜೆಡಿಎಸ್ ಮೈತ್ರಿ ವರ್ಕೌಟ್ ಆಗಿದೆ ಎಂದು ತಿಳಿಸಿದರು.
ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಸಂಘಟಿತರಾಗಿ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಾಗ ಒಗ್ಗಟ್ಟು ಸಾಧ್ಯವಾಗಿರಲಿಲ್ಲ. ಜೆಡಿಎಸ್, ಬಿಜೆಪಿ ಒಂದಾಗಿರೋದರಿಂದ ಹಳೆ ಮೈಸೂರು ಪ್ರಾಂತ್ಯದಲ್ಲಿ ನಮಗೆ ಹಿನ್ನಡೆ ಆಗಿದೆ ಎಂದರು.
ಪರಮೇಶ್ವರ್ ಕ್ಷೇತ್ರ ಕೊರಟಗೆರೆ, ರಾಜಣ್ಣರ ಕ್ಷೇತ್ರ ಮಧುಗಿರಿಯಲ್ಲೂ ಬಿಜೆಪಿಗೆ ಲೀಡ್ ಬಂದಿದೆ. ಅಲ್ಲೂ ಮೋದಿ ಹವಾ ಚೆನ್ನಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಬಿಜೆಪಿ 8 ಕ್ಷೇತ್ರ ಕಳೆದುಕೊಳ್ಳಲು ಕಾರಣವೇನು? - Karnataka BJP