ಬೆಂಗಳೂರು : ಬಿಜೆಪಿ ಬ್ರೋಕರ್ಗಳು ದಿನವೂ ಬಿಡ್ತಿಲ್ಲ, ಬನ್ನಿ ಬನ್ನಿ ಅಂತ ಬೆನ್ನು ಬಿದ್ದಿದ್ದಾರೆ. ಬಿಜೆಪಿಯವರು ತೆಪ್ಪಗಿರಬೇಕು, ನಮ್ಮತ್ರ ಸಾಕ್ಷಿ ಇದೆ ಎಂದು ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದರ ಬಗ್ಗೆ ಸಿಎಂ, ಡಿಸಿಎಂಗೆ ಸೂಕ್ತ ದಾಖಲೆಗಳೊಂದಿಗೆ ಮಾಹಿತಿ ನೀಡ್ತೇವೆ. ಆಪರೇಷನ್ ಕಮಲ ಆದಾಗ ಅವಾಗಲೇ 60 ಕೋಟಿ ರೂ. ಖರ್ಚು ಮಾಡಿದ್ರು. ಬಹಳ ಸತ್ಯವಂತರ ತರಹ ಮಾತಾಡ್ತಾರೆ ಬಿಜೆಪಿಯವರು. 30 ಕೋಟಿ ಕೈಗೆ ಕೊಟ್ಟು 30 ಕೋಟಿ ಚುನಾವಣೆಗೆ ಖರ್ಚು ಮಾಡಿದ್ರು ಅಂತ ಅವರೇ ಹೇಳಿದ್ದಾರೆ. ಆಪರೇಷನ್ ಕಮಲದ ಬಗ್ಗೆ ಡಿಟೇಲ್ಸ್ ಕೊಡ್ತೀವಿ ನೋಡ್ತಾ ಇರಿ ಎಂದರು.
ಬಿಜೆಪಿಯಲ್ಲಿ ಸ್ವಲ್ಪ ಬ್ರೋಕರ್ಗಳಿದ್ದಾರೆ. ಅವರೇ ಸರ್ಕಾರ ಬೀಳಿಸುವುದಕ್ಕೆ ಟ್ರೈ ಮಾಡ್ತಿದ್ದಾರೆ. ಊರಿಗೆ ಬಂದವರು ನೀರಿಗೆ ಬರಲ್ವಾ? ಇವರ ದಾಖಲೆ ಕೂಡ ಹೊರಗೆ ಬಂದೇ ಬರುತ್ತದೆ ಎಂದು ಹೇಳಿದ್ದಾರೆ.
ನನಗೆ ವಿಧಾನಸಭೆ ಮೊಗಸಾಲೆಯಲ್ಲಿ ಬಿಜೆಪಿ ಸ್ನೇಹಿತರು ಹೇಳಿದ್ರು. ಬಹಳ ಕಾಸ್ಟ್ಲಿ ಆಯ್ತು ಅಂತ ಹೇಳಿದ್ರು. ಬಿಜೆಪಿ ನಾಯಕರು ವಿಚಾರವೇ ಗೊತ್ತಿಲ್ಲ ಅನ್ನೋ ರೀತಿಯಲ್ಲಿ ಮಾತಾಡ್ತಿದ್ದಾರೆ. ಎರಡೂ ಗೌರ್ನಮೆಂಟ್ ಮಾಡಿದ್ದು ಆಪರೇಷನ್ ಮಾಡಿಯೇ. ಟೈಮ್ ಬಂದಾಗ ಫುಲ್ ಸ್ಟಾಪ್ ಇಡ್ತೀವಿ. ಕಾನೂನು ಹೋರಾಟ ಎದುರಿಸುತ್ತೇವೆ. ಶ್ರೀನಿವಾಸ್ ಗೌಡ ಆರೋಪ ಮಾಡಿದ್ರು. ಅಶ್ವತ್ಥ್ ನಾರಾಯಣ್ ಹಾಗೂ ಸಿ. ಪಿ ಯೋಗೇಶ್ವರ್ 5 ಕೋಟಿ ರೂಪಾಯಿಯನ್ನು ನನ್ನ ಮನೆಗೆ ತಂದಿಟ್ಟು ಹೋಗಿದ್ರು ಅಂತ. ಯಾಕೆ ಅದನ್ನು ತನಿಖೆ ಮಾಡಿ ಅಂತ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಕೇಳ್ತಿಲ್ಲ. ಸಿಎಂ ಖುರ್ಚಿ 2 ಸಾವಿರ ಕೋಟಿ ಹರಾಜಿಗೆ ಇದೆ ಅಂತ ಯತ್ನಾಳ್ ಹೇಳಿ ಏಕೆ ತನಿಖೆಗೆ ಕೊಡ್ತಿಲ್ಲ ಎಂದು ಪ್ರಶ್ನಿಸಿದರು. ಸುಮ್ಮನೆ ಸರಿಯಾಗಿ ಇರುವ ಸರ್ಕಾರ ಬೀಳಿಸುತ್ತೇವೆ ಅಂದ್ರೆ ಆಗಲ್ಲ ಎಂದರು.
ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಬೀಳಿಸೋಕೆ ಆಗಲ್ಲ. ನಾನು ಹೆಸರು ಹೇಳಿದ ಮೇಲೆ ಬಿಜೆಪಿ ನಾಯಕರು ಸುಮ್ಮನಾಗಿದ್ರು. ಈಗ ಮತ್ತೆ ಶುರು ಮಾಡಿದ್ದಾರೆ. ಬಿಜೆಪಿಯಲ್ಲಿ ಸ್ವಲ್ಪ ಬ್ರೋಕರ್ ಇದ್ದಾರೆ ಎಂದು ಟೀಕಿಸಿದರು.
ರೈತರ ಬೆಳೆಗೆ ನೀರು ಬಿಡ್ತಿಲ್ಲ ಎಂಬ ಕುಮಾರಸ್ವಾಮಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಮಂಡ್ಯದಲ್ಲಿರುವ ಶುಗರ್ ಫ್ಯಾಕ್ಟರಿಯಲ್ಲಿ 30 ಸಾವಿರ ಟನ್ ಕಬ್ಬು ಕ್ರಶ್ ಮಾಡಿದ್ದೇವೆ. ಸರ್ಕಾರ ಸ್ವಾಮ್ಯಕೆ ಕೊಡಬೇಕು ಎಂದು ಆರ್ಡರ್ ಮಾಡಿದ್ದೇವೆ. ಹೀಗಾಗಿ ಖಾಸಗಿಯವರು ಕಬ್ಬು ತೆಗೆದುಕೊಳ್ತಿದ್ರು. ಅವರೇ ಎತ್ತಿ ಕೊಡ್ತಿದ್ದಾರೆ. ನಾನು ದಿಶಾ ಸಭೆಯಲ್ಲಿ ಇದ್ದೆ. ಕುಮಾರಸ್ವಾಮಿ ಅಧಿಕಾರಿಗಳ ಜೊತೆಗೆ ಮಾಹಿತಿ ತೆಗೆದುಕೊಂಡ್ರು. ಆದರೆ ಆಚೆ ಬಂದು ಕುಮಾರಸ್ವಾಮಿ ಉಲ್ಟಾ ಹೇಳಿದ್ರು ಎಂದು ಟೀಕಿಸಿದರು.
ಇದನ್ನೂ ಓದಿ : ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ಈಗಲೂ 50 ಕೋಟಿ ರೂ. ಆಫರ್ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ ಆರೋಪ - OPERATION KAMALA